ಫೆಬ್ರವರಿ 15ರಿಂದ ಸಿಬಿಎಸ್ಇ 10, 12ನೇ ತರಗತಿ ಪರೀಕ್ಷೆಗಳು ಆರಂಭ
ತಡರಾತ್ರಿ ಅಧಿಸೂಚನೆ ಪ್ರಕಟಿಸಿದ್ದು 10ನೇ ತರಗತಿ ಪರೀಕ್ಷೆಗಳು ಮಾರ್ಚ್ 18ರಂದು ಕೊನೆಗೊಳ್ಳುತ್ತವೆ ಮತ್ತು 12ನೇ ತರಗತಿ ಪರೀಕ್ಷೆಗಳು ಏಪ್ರಿಲ್ 4, 2025ರಂದು ಕೊನೆಗೊಳ್ಳುತ್ತವೆ ಎಂದು ಮಂಡಳಿ ತನ್ನ ವೇಳಾಪಟ್ಟಿಯಲ್ಲಿ ತಿಳಿಸಿದೆ.

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಫೆಬ್ರವರಿ 15 ರಿಂದ ಪ್ರಾರಂಭವಾಗಲಿವೆ ಎಂದು ಬುಧವಾರ ಪ್ರಕಟಿಸಿದೆ. ಇದೇ ಮೊದಲ ಬಾರಿಗೆ ಮಂಡಳಿಯು ಕನಿಷ್ಠ 86 ದಿನಗಳ ಮುಂಚಿತವಾಗಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ತಡರಾತ್ರಿ ಅಧಿಸೂಚನೆ ಪ್ರಕಟಿಸಿದ್ದು 10ನೇ ತರಗತಿ ಪರೀಕ್ಷೆಗಳು ಮಾರ್ಚ್ 18ರಂದು ಕೊನೆಗೊಳ್ಳುತ್ತವೆ ಮತ್ತು 12ನೇ ತರಗತಿ ಪರೀಕ್ಷೆಗಳು ಏಪ್ರಿಲ್ 4, 2025ರಂದು ಕೊನೆಗೊಳ್ಳುತ್ತವೆ ಎಂದು ಮಂಡಳಿ ತನ್ನ ವೇಳಾಪಟ್ಟಿಯಲ್ಲಿ ತಿಳಿಸಿದೆ.
"ಎರಡು ವಿಷಯಗಳ ನಡುವೆ ಸಾಕಷ್ಟು ಅಂತರವನ್ನು ನೀಡಲಾಗಿದೆ. ವಿದ್ಯಾರ್ಥಿ ಆಯ್ಕೆ ಮಾಡಿದ ಯಾವುದೇ ಎರಡು ವಿಷಯಗಳು ಒಂದೇ ದಿನಾಂಕದಂದು ಬರುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಕನಿಷ್ಠ 40,000 ವಿಷಯ ಸಂಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ಸಿಬಿಎಸ್ಇ ಪರೀಕ್ಷಾ ನಿಯಂತ್ರಕ ಸನ್ಯಾಮ್ ಭಾರದ್ವಾಜ್ ಹೇಳಿದ್ದಾರೆ.