CAA ಜಾರಿಯು ಬಿಜೆಪಿಯ ಕೊಳಕು ವೋಟ್ ಬ್ಯಾಂಕ್ ರಾಜಕಾರಣ: ಕೇಜ್ರಿವಾಲ್‌

ದೇಶವು ಸಿಎಎ ರದ್ದುಗೊಳಿಸಬೇಕೆಂದು ಒತ್ತಾಯಿಸುತ್ತದೆ ಮತ್ತು ಕಾನೂನನ್ನು ರದ್ದುಗೊಳಿಸದಿದ್ದರೆ ಬಿಜೆಪಿ ವಿರುದ್ಧ ಮತ ಚಲಾಯಿಸುವಂತೆ ಕೇಜ್ರಿವಾಲ್ ಹೇಳಿದ್ದಾರೆ.

Update: 2024-03-13 10:18 GMT
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪೌರತ್ವ (ತಿದ್ದುಪಡಿ) ಕಾಯ್ದೆ ಅನುಷ್ಠಾನದ ಕುರಿತು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
Click the Play button to listen to article

ಲೋಕಸಭೆ ಚುನಾವಣೆಗೆ ಮುನ್ನ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನುಷ್ಠಾನವನ್ನು ಕೇಸರಿ ಪಕ್ಷದ "ಕೊಳಕು ವೋಟ್ ಬ್ಯಾಂಕ್ ರಾಜಕಾರಣ" ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಕರೆದಿದ್ದಾರೆ.


ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬುಧವಾರ(ಮಾರ್ಚ್ 13)ದಂದು ನವದೆಹಲಿಯಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ, 2019 ರ ಅನುಷ್ಠಾನದ ಕುರಿತು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದು, ʼʼಈ ಕಾನೂನಿನ ಮೂಲಕ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಭಾರತಕ್ಕೆ ಅಲ್ಲಿಯ ಹೆಚ್ಚಿನ ಸಂಖ್ಯೆಯ ಬಡ ಅಲ್ಪಸಂಖ್ಯಾತರ ಆಗಮನಕ್ಕೆ ಬಾಗಿಲು ತೆರೆದಿದೆʼʼ ಎಂದು ಹೇಳಿದರು.

"ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ 3.5 ಕೋಟಿ ಅಲ್ಪಸಂಖ್ಯಾತರಿದ್ದಾರೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬಡ ವಲಸಿಗರಿಗೆ ಇಲ್ಲಿ ಮನೆ ಮತ್ತು ಉದ್ಯೋಗಗಳನ್ನು ನೀಡುವ ಮೂಲಕ ನಮ್ಮ ಜನರ ಹಣವನ್ನು ಖರ್ಚು ಮಾಡಲು ಬಿಜೆಪಿ ಬಯಸಿದೆ" ಎಂದು ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಭಾರತದಲ್ಲಿ ನೆಲೆಸಿರುವ ನೆರೆಯ ರಾಷ್ಟ್ರಗಳ ಬಡ ಅಲ್ಪಸಂಖ್ಯಾತರು ಬಿಜೆಪಿಯ ಮತಬ್ಯಾಂಕ್ ಆಗುವುದರಿಂದ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಲಾಭವಾಗಲಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ದೇಶವು ಸಿಎಎ ರದ್ದುಗೊಳಿಸಬೇಕೆಂದು ಒತ್ತಾಯಿಸುತ್ತದೆ ಮತ್ತು ಕಾನೂನನ್ನು ರದ್ದುಗೊಳಿಸದಿದ್ದರೆ ಬಿಜೆಪಿ ವಿರುದ್ಧ ಮತ ಚಲಾಯಿಸುವಂತೆ ಅವರು ಕರೆ ಕೊಟ್ಟರು.

ಪೌರತ್ವ ತಿದ್ದುಪಡಿ ಕಾಯ್ದೆಯು ಡಿಸೆಂಬರ್ 31, 2014ರ ಮೊದಲು ಭಾರತಕ್ಕೆ ಬಂದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ದಾಖಲೆರಹಿತ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡುವ ಕಾಯಿದೆಯಾಗಿದೆ. 

Tags:    

Similar News