ಬೆಂಗಳೂರಿನ ʼಸೊಗಡುʼ ಹೆಚ್ಚಿಸಿದ ಅವರೆಬೇಳೆ ಮೇಳಕ್ಕೆ 25 ವರ್ಷ
ಬೇಳೆಯ ಸಿಹಿತಿಂಡಿಗಳು, ಖಾದ್ಯಗಳಾದ ಸಾರು, ಹೋಳಿಗೆ, ದೋಸೆ, ಉಪ್ಪಿಟ್ಟು, ಜಾಮೂನ್, ನಿಪ್ಪಟ್ಟು, ಕೋಡುಬಳೆ ಮತ್ತು ಬಿರಿಯಾನಿ ಪಲಾವ್ ಸೇರಿದಂತೆ 150 ಕ್ಕೂ ಹೆಚ್ಚು ಭಕ್ಷ್ಯಗಳನ್ನು ತಯಾರಾಗಲಿದೆ.;
ಬೆಂಗಳೂರು ಹೈಟೆಕ್ ಸಿಟಿಯಾಗಿ ಪರಿವರ್ತನೆಗೊಂಡು ದಶಕಗಳೇ ಕಳೆದಿವೆ. ಆದರೆ, ನೆಲ ಮೂಲದ ಸಂಸ್ಕೃತಿಯನ್ನು ಈ ನಗರ ಕಳೆದುಕೊಂಡಿಲ್ಲ. ಆಗಾಗ ನಡೆಯುವ ಜಾತ್ರೆ, ಉತ್ಸವಗಳು ಹಾಗೂ ಮೇಳಗಳು ಹಳ್ಳಿಯ ಸೊಗಡನ್ನು ಪ್ರತಿಬಿಂಬಿಸುತ್ತವೆ. ಬಸವನಗುಡಿಯಲ್ಲಿ ನಡೆಯುವ ಕಡಲೆಕಾಯಿ ಪರಿಷೆ ಅದಕ್ಕೆ ಸೂಕ್ತ ಉದಾಹರಣೆ. ಈ ಹಬ್ಬಕ್ಕೆ ಐತಿಹ್ಯ ಇದೆ. ಇದರ ಸಾಲಿಗೆ ಇನ್ನೂ ಕೆಲವು ಉತ್ಸವಗಳು ಬೆಂಗಳೂರಿನ ವೈಶಿಷ್ಟ್ಯವನ್ನು ಹೆಚ್ಚಿಸಿದೆ. ಅದರಲ್ಲೊಂದು ʼಅವರೆ ಮೇಳ ʼ ಇದೀಗ ಬೆಂಗಳೂರು ಅವರೆ ಬೇಳೆ ಮೇಳಕ್ಕೆ ಸಜ್ಜಾಗಿದ್ದು ಈ ಕಾಳಿನ ಬಗೆಬಗೆಯ ಭಕ್ಷ್ಯಗಳು ಬೆಂಗಳೂರಿಗರ ಬಾಯಲ್ಲಿ ನೀರೂರಿಸಲಿದೆ. ಅಂದ ಹಾಗೆ ಈ ಬಾರಿಯ ಅವರೆಮೇಳಕ್ಕೆ 25 ವರ್ಷದ ಸಂಭ್ರಮ.
25ನೇ ವರ್ಷದ ಹಿನ್ನೆಲೆಯಲ್ಲಿ ಮುಂಬರುವ ಅವರೆಮೇಳ 10 ದಿನಗಳ ಕಾಲ ನಡೆಯಲಿದೆ. ಹಿಂದೆಲ್ಲ ಅದು 5 ದಿನಗಳ ಕಾಲ ನಡೆಯುತ್ತಿತ್ತು. ಅವರೆ ಬೇಳೆಯ ಸಿಹಿತಿಂಡಿಗಳು, ಖಾದ್ಯಗಳಾದ ಸಾರು, ಹೋಳಿಗೆ, ದೋಸೆ, ಉಪ್ಪಿಟ್ಟು, ಜಾಮೂನ್, ನಿಪ್ಪಟ್ಟು, ಕೋಡುಬಳೆ ಮತ್ತು ಬಿರಿಯಾನಿ ಪಲಾವ್ ಸೇರಿದಂತೆ 150 ಕ್ಕೂ ಹೆಚ್ಚು ಭಕ್ಷ್ಯಗಳನ್ನು ತಯಾರಾಗಲಿದೆ. ಮೇಳಕ್ಕಾಗಿ 30 ಟನ್ ಗಿಂತ ಹೆಚ್ಚು ಅವರೆಕಾಯಿಯನ್ನು ಬೆಂಗಳೂರಿಗೆ ಬರಲಿದೆ.
ವಿ.ವಿ.ಪುರಂನ ಫುಡ್ ಸ್ಟ್ರೀಟ್ ನಲ್ಲಿರುವ ವಾಸವಿ ಕಾಂಡಿಮೆಂಟ್ಸ್ ಮಾಲೀಕರಾದ ಗೀತಾ ಶಿವಕುಮಾರ್ ಅವರು 2000ನೇ ಇಸವಿಯಲ್ಲಿ ಪ್ರಾರಂಭಿಸಿದ ಈ ಮೇಳವು ನಗರದ ಅತಿದೊಡ್ಡ ಆಹಾರ ಉತ್ಸವಗಳಲ್ಲಿ ಒಂದಾಗಿದೆ.
ದೊಡ್ಡ ಪ್ರಮಾಣದ ಸಿದ್ಧತೆ
ಗೀತಾ ಅವರ ಮಗಳು ಸ್ವಾತಿ ಕೆ.ಎಸ್, ಈಗ ಈ ಮೇಳದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. 2017ರಲ್ಲಿ ದೊಡ್ಡ ಕಂಪನಿಯ ಕೆಲಸಕ್ಕೆ ರಾಜೀನಾಮೆ ನೀಡಿದ್ದ ಸ್ವಾತಿ ಅವರು ತಾಯಿಯೊಂದಿಗೆ ಕಾಂಡಿಮೆಂಟ್ಸ್ ವಹಿವಾಟು ನೋಡಿಕೊಳ್ಳುತ್ತಿದಾರೆ. 25ನೇ ವರ್ಷದ ಅವರೆ ಮೇಳಕ್ಕೆ ಭರದ ಸಿದ್ಧತೆ ನಡೆಯುತ್ತಿದೆ ಎಂದು ಸ್ವಾತಿ ಹೇಳಿದ್ದಾರೆ.
"ನಾವು ಕಳೆದ ಆರು ತಿಂಗಳಿನಿಂದ ದೊಡ್ಡ ಪ್ರಮಾಣದಲ್ಲಿ ತಯಾರಿ ನಡೆಸುತ್ತಿದ್ದೇವೆ. ಮೊದಲಾಗಿ ಐದರ ಬದಲು ಈ ಬಾರಿ ಹತ್ತು ದಿನ ಮೇಳ ನಡೆಯಲಿದೆ. ಹೆಚ್ಚು ರೈತರು, ಹೆಚ್ಚು ಉತ್ಪನ್ನಗಳು ಮತ್ತು ಹೆಚ್ಚು ಮಳಿಗೆಗಳು ಬರಲಿದೆ. ಡಿಸೆಂಬರ್ 27 ರಿಂದ ಜನವರಿ 5, 2025 ರವರೆಗೆ ಮೇಳ ಆಯೋಜನೆಗೊಂಡಿದೆ. ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮೇಳ ನಡೆಯಲಿದೆ,ʼʼ ಎಂದು ಸ್ವಾತಿ ಹೇಳಿದ್ದಾರೆ.
ಮಾಗಡಿ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಚಿಂತಾಮಣಿ ಮತ್ತು ಕೋಲಾರದಿಂದ ಅವರೆಕಾಯಿ ಬರಲು ಪ್ರಾರಂಭಿಸಿವೆ. ಹವಾಮಾನ ವೈಪರೀತ್ಯದಿಂದಾಗಿ ಸ್ವಲ್ಪ ತಡವಾಗಿ ಬೇಳೆ ನಗರಕ್ಕೆ ಬರುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕೊರತೆಯಿಂದಾಗಿ ಅವರೆ ಬೇಳೆ ಕೆ.ಜಿ.ಗೆ ಸುಮಾರು 600 ರೂಪಾಯಿಷ್ಟಾಗಿಗತ್ತು. ಇದೀಗ 350 ರೂಪಾಯಿ.
ಸುಲಭ ಸವಾರಿ ಇಲ್ಲ
ಇನ್ನೊಂದು ಒಂದು ವಾರದಲ್ಲಿ ಪೂರೈಕೆ ಸುಗಮವಾಗುತ್ತದೆ. ಬೆಲೆಗಳು ಕಡಿಮೆಯಾಗುತ್ತವೆ ಎಂದು ಸ್ವಾತಿ ಹೇಳಿದ್ದಾರೆ.
ಮೇಳಕ್ಕೆ ಒಂದು ತಿಂಗಳು ಬಾಕಿ ಇದೆ. ಕಳೆದ ವರ್ಷ, ನಾವು ಜನಸಂದಣಿ ಹೆಚ್ಚಳದಿಂದಾಗಿ ನಿರ್ವಹಣೆ, ಪಾವತಿ / ಇಂಟರ್ನೆಟ್ ತೊಂದರೆಗಳು ಮತ್ತು ತ್ವರಿತ ಸೇವೆಯಂತಹ ಸಮಸ್ಯೆಗಳನ್ನು ಎದುರಿಸಿದ್ದೇವೆ. ಈ ವರ್ಷ ವೈ-ಫೈ ಮತ್ತು ಎಕ್ಸ್ ಪ್ರೆಸ್ ಕೌಂಟರ್‌ಗಳ ಮೂಲಕ ವ್ಯವಸ್ಥೆಯನ್ನು ಸುಧಾರಿಸುತ್ತೇವೆ. ಬುಕ್ ಮೈ ಶೋನಂತಹ ಪ್ಲಾಟ್ ಫಾರ್ಮ್‌ಗಳಲ್ಲಿ ಟಿಕೆಟ್ ಗಳನ್ನು ಮುಂಚಿತವಾಗಿ ಕಾಯ್ದಿರಿಸಬಹುದು. ಸರತಿ ಸಾಲುಗಳು ಮತ್ತು ಕಾಯುವ ಸಮಯ ಕಡಿಮೆ ಮಾಡುವುದು ಇದರ ಉದ್ದೇಶ" ಎಂದು ಅವರು ಹೇಳಿದರು.
ದಕ್ಷಿಣ ಬೆಂಗಳೂರಿಗರು ವಾರಾಂತ್ಯದಲ್ಲಿ ಅವರೆ ಮೇಳಕ್ಕೆ ಭೇಟಿ ನೀಡುತ್ತಾರೆ ಎಂದು ಸ್ವಾತಿ ಹೇಳಿದ್ದಾರೆ. ನಮಗೆ ಈಗಲೇ ಕರೆಗಳು ಬರಲು ಆರಂಭಿಸಿವೆ ಎಂದು ಸ್ವಾತಿ ಹೇಳುತ್ತಾರೆ.
ಹುಣಸೂರಿನಿಂದ ಬೇಳೆಗಳ ಸಂಗ್ರಹ
ಭಾರಿ ಪ್ರಮಾಣದಲ್ಲಿ ಬೇಕಾಗಿರುವ ಅವರೆ ಬೇಳೆಯನ್ನು ಹುಣಸೂರು ಮತ್ತು ತುಮಕೂರಿನಿಂದ ಸಂಗ್ರಹಿಸಲು ಯೋಜನೆ ರೂಪಿಸಿದ್ದಾರೆ.
"ಈ ಬಾರಿ ನಮಗೆ ದೊಡ್ಡ ಪ್ರಮಾಣದಲ್ಲಿ ಅವರೆ ಬೇಳೆ ಅಗತ್ಯವಿದೆ. ಮೊದಲ ಬಾರಿಗೆ, ನಾವು ಇಲ್ಲಿಯವರೆಗೆ ಸಂಗ್ರಹಿಸದ ಜಿಲ್ಲೆಗಳ ರೈತರಿಂದ ಖರೀದಿಸುತ್ತಿದ್ದೇವೆ. ಅನೇಕರು ನಮ್ಮ ಜತೆ ಕೈಜೋಡಿಸಲು ಉತ್ಸುಕರಾಗಿದ್ದಾರೆ. ನಾವು ಹಾಪ್ ಕಾಮ್ಸ್ ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ" ಎಂದು ಸ್ವಾತಿ ಹೇಳಿದ್ದಾರೆ.
ನಮ್ಮ ಅವರೆ ಮೇಳದ ಕುಟುಂಬ ಬೆಳೆದಿದೆ. 200ಕ್ಕೂ ಹೆಚ್ಚು ರೈತರು ನಮ್ಮೊಂದಿಗೆ ಇದ್ದಾರೆ. ಹಿತಕಿದ ಬೇಳೆಯಿಂದಾಗಿ ಮಹಿಳೆಯರಿಗೂ ಆದಾಯ ಸಿಗುತ್ತದೆ ಎಂದು ಅವರು ಹೇಳಿದ್ದಾರೆ.
ಹೆಚ್ಚಿನ ರೈತರು ವರ್ಷವಿಡೀ ಅವರೆ ಬೇಳೆ ಕಳುಹಿಸುತ್ತಾರೆ (ಬೇಸಿಗೆಯಲ್ಲಿ ಎರಡು ತಿಂಗಳುಗಳನ್ನು ಹೊರತುಪಡಿಸಿ). ನವೆಂಬರ್‌ನಿಂದ ಜನವರಿಯಲ್ಲಿ ಬೇಳೆಯ ಪ್ರಮಾಣ ಹೆಚ್ಚು. ರಾಮನಗರ / ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ಪಟ್ಟಣದಿಂದ ಉತ್ತಮ ಅವರೆಬೇಳೆ ಬರುತ್ತವೆ ಎಂದು ಸ್ವಾತಿ ಹೇಳಿದ್ದಾರೆ.
ಹಸಿರು ಇದ್ದಷ್ಟೂ ಒಳ್ಳೆಯದು
ಹಸಿರು ಬಣ್ಣದ ಸಮೇತ ಈ ಬಾರಿ ಫಸಲು ಉತ್ತಮವಾಗಿದೆ. ಹಸಿರು ಬಣ್ಣ ಮಣ್ಣಿನ ಗುಣದಿಂದ ಬರುತ್ತದೆ. ಈ ಅವರೆಯ 'ಸೊಗಡು' ಆಕರ್ಷಕವಾಗಿದೆ. ಈ ಬೆಳೆಗಳನ್ನು ಕೇವಲ ವಾಸನೆಯಿಂದಲೇ ಗುರುತಿಸಬಹುದು ಎಂದು ಸ್ವಾತಿ ಹೇಳುತ್ತಾರೆ.
ಸ್ವಾತಿ ಅವರ ಕುಟುಂಬಕ್ಕೆ ಈ ವರ್ಷ ಆಶಾದಾಯಕವಾಗಿಲ್ಲ. ಕಾನೂನು ಸಂಘರ್ಷದಿಂದಾಗಿ ವಿವಿ ಪುರಂನ ಫುಡ್ ಸ್ಟ್ರೀಟ್‌ನಲ್ಲಿರುವ ತಮ್ಮ ಮಳಿಗೆಯನ್ನು ಮುಚ್ಚಿದ್ದಾರೆ. ಇದು ತಾತ್ಕಾಲಿಕ ಎಂದು ಅವರು ಹೇಳಿದ್ದಾರೆ.
"ಪ್ರಕರಣ ನಡೆಯುತ್ತಿದೆ ಮತ್ತು ನಾವು ನ್ಯಾಯಾಲಯದಿಂದ ನಮ್ಮ ಪರ ತೀರ್ಪನ್ನು ಎದುರು ನೋಡುತ್ತಿದ್ದೇವೆ. ನಾವು ಹೊಸ ಶಾಖೆಯನ್ನು ತೆರೆದಿದ್ದೇವೆ, ಮತ್ತು ಡೈನ್-ಇನ್ ಸೇರಿದಂತೆ ಮಳಿಗೆಗಳ ಸರಣಿಯನ್ನು ಪ್ರಾರಂಭಿಸುವ ಯೋಜನೆಗಳು ನಡೆಯುತ್ತಿವೆ. ನಾವು ವಿ.ವಿ.ಪುರಂಗೆ ಮರಳುವ ಭರವಸೆ ಹೊಂದಿದ್ದೇವೆ. ಒಂದು ವರ್ಷದ ಹಿಂದೆ ನನ್ನ ತಂದೆಯನ್ನು ಕಳೆದುಕೊಂಡಿದ್ದೇನೆ. ಯಾವುದನ್ನೂ ಕಳೆದುಕೊಳ್ಳುವುದಕ್ಕೆ ಬಯಸುವುದಿಲ್ಲ" ಎಂದು ಸ್ವಾತಿ ಹೇಳಿದ್ದಾರೆ.