Bengaluru Traffic: 10 ಕಿ.ಮೀ ಪ್ರಯಾಣಕ್ಕೆ 34 ನಿಮಿಷ; ಬೆಂಗಳೂರು ವಿಶ್ವದ 3ನೇ ಅತಿ ಹೆಚ್ಚು ಟ್ರಾಫಿಕ್‌ ಇರುವ ನಗರ

Bengaluru Traffic: : 2024 ರ ಟಾಮ್ ಟಾಮ್ ಟ್ರಾಫಿಕ್ ಇಂಡೆಕ್ಸ್ ವರದಿಯನ್ನು ಬೆಂಗಳೂರು ಪೊಲೀಸರು ತಿರಸ್ಕರಿಸಿದ್ದಾರೆ. ವರದಿಯಲ್ಲಿ ಯಾವುದೇ ಸ್ಪಷ್ಟತೆ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ.;

Update: 2025-01-16 10:11 GMT
ಕೃತಕ ಬುದ್ಧಿಮತ್ತೆ ರಚಿತ ಚಿತ್ರ

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್‌ ಹೆಚ್ಚಾಗುತ್ತಿದೆ. ಇದು ನಗರವಾಸಿಗಳ ಅನುಭವಕ್ಕೆ ಬರುವ ವಿಚಾರ. ಇದು ಎಷ್ಟರ ಮಟ್ಟಿಗೆ ಹೆಚ್ಚಾಗಿದೆ ಎಂದರೆ ಟಾಮ್ ಟಾಮ್ ಟ್ರಾಫಿಕ್ ಇಂಡೆಕ್ಸ್ ಪ್ರಕಾರ ಬೆಂಗಳೂರು ವಿಶ್ವದ 3ನೇ ನಿಧಾನಗತಿಯ ಸಂಚಾರ ಹೊಂದಿರುವ ನಗರವಾಗಿದೆ. ಈ ಮೂಲಕ ಭಾರತದ ಐಟಿ ರಾಜಧಾನಿ ಟ್ರಾಫಿಕ್‌ ವಿಚಾರದಲ್ಲಿ ಕುಖ್ಯಾತಿ ಪಡೆದುಕೊಂಡಿದೆ.

2024 ರ ಟಾಮ್ ಟಾಮ್ ಟ್ರಾಫಿಕ್ ಇಂಡೆಕ್ಸ್ ಪ್ರಕಾರ, ಬೆಂಗಳೂರಿನಲ್ಲಿ ಪ್ರತಿ 10 ಕಿ.ಮೀ ಪ್ರಯಾಣ ಮಾಡಲು ಸರಾಸರಿ 34 ನಿಮಿಷ 10 ಸೆಕೆಂಡುಗಳು ಬೇಕಾಗುತ್ತದೆ. 2023ಕ್ಕೆ ಹೋಲಿಸಿದರೆ 50 ಸೆಕೆಂಡುಗಳ ಹೆಚ್ಚಳವಾಗಿದೆ.

ಅಂದ ಹಾಗೆ ಕೊಲಂಬಿಯಾ ದೇಶದ ಬರಾನ್ಕ್ವಿಲ್ಲಾ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಅಲ್ಲಿ 10 ಕಿ.ಮೀ ಪ್ರಯಾಣ ಮಾಡಲು 36 ನಿಮಿಷ 6 ಸೆಕೆಂಡುಗಳು ಬೇಕಾಗುತ್ತದೆ. ಎರಡನೇ ಸ್ಥಾನವನ್ನು ಕೋಲ್ಕೊತಾ ಪಡೆದಿದೆ. ಅಲ್ಲಿ 34 ನಿಮಿಷ 33 ಸೆಕೆಂಡುಗಳಲ್ಲಿ 10 ಕಿ.ಮೀ ಪ್ರಯಾಣ ಮಾಡಬಹುದು. ಬೆಂಗಳೂರಿಗಿಂತ ನಂತರದ ಸ್ಥಾನ ಮಹಾರಾಷ್ಟ್ರದ ನಗರ ಪುಣೆ ಹೊಂದಿದೆ. 33 ನಿಮಿಷ 27 ಸೆಕೆಂಡುಗಳಲ್ಲಿ ಅಲ್ಲಿ 10 ಕಿ.ಮೀ ಪ್ರಯಾಣ ಮಾಡಬಹುದು.

ತೆಲಂಗಾಣದ ಹೈದರಾಬಾದ್ (18 ನೇ ಸ್ಥಾನ, ಪ್ರಯಾಣದ ಸಮಯ 32 ನಿಮಿಷ), ತಮಿಳುನಾಡಿನ ಚೆನ್ನೈ (31ನೇ ಸ್ಥಾನ, ಪ್ರಯಾಣದ ಸಮಯ 30 ನಿಮಿಷ), ಮಹಾರಾಷ್ಟ್ರದ ಮುಂಬೈ (39ನೇ ಸ್ಥಾನ, ಪ್ರಯಾಣದ ಸಮಯ 29 ನಿಮಿಷ), ಗುಜರಾತ್‌ನ ಅಹಮದಾಬಾದ್ (43ನೇ ಸ್ಥಾನ, ಪ್ರಯಾಣದ ಸಮಯ 29 ನಿಮಿಷ), ಕೇರಳದ ಎರ್ನಾಕುಲಂ (50ನೇ ಸ್ಥಾನ, ಪ್ರಯಾಣದ ಸಮಯ 29 ನಿಮಿಷ), ರಾಜಸ್ಥಾನದ ಜೈಪುರ (50ನೇ ಸ್ಥಾನ, ಪ್ರಯಾಣದ ಸಮಯ 28 ನಿಮಿಷಗಳು) ಮತ್ತು ನವದೆಹಲಿ (122, 23 ನಿಮಿಷಗಳು).

ಬೆಂಗಳೂರಿನಲ್ಲಿ ಸ್ವಲ್ಪ ಸುಧಾರಣೆ

ಈ ಬಾರಿ ಕೋಲ್ಕೊತಾವನ್ನು ಬೆಂಗಳೂರು ಹಿಂದಕ್ಕೆ ಹಾಕಿದೆ. . 2022ರಲ್ಲಿ ಉದ್ಯಾನನಗರಿ ಇದು ವಿಶ್ವದ ಎರಡನೇ ನಿಧಾನಗತಿಯ ನಗರವಾಗಿತ್ತು. 10 ಕಿ.ಮೀ ವ್ಯಾಪ್ತಿಯಲ್ಲಿ ಕೇವಲ 18 ಕಿ.ಮೀ ಸರಾಸರಿ ವೇಗದೊಂದಿಗೆ, ಇದು ಆ ವರ್ಷ ಭಾರತದಲ್ಲಿ ನಿಧಾನಗತಿಯ ನಗರ ಎನಿಸಿಕೊಂಡಿದೆ. ಲಂಡನ್, ಮಿಲಾನ್ ಮತ್ತು ಟೊರೊಂಟೊದಂತಹ ನಗರಗಳು ಸಹ ಇದೇ ರೀತಿಯ ಸವಾಲುಗಳನ್ನು ಎದುರಿಸುತ್ತಿವೆ.

ವಾಹನಗಳ ಹೆಚ್ಚಳ ಕಾರಣ

ಬೆಂಗಳೂರಿನ ಟ್ರಾಫಿಕ್ ಬಿಕ್ಕಟ್ಟಿಗೆ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಳ ಕಾರಣವಾಗಿದೆ. ಬೆಂಗಳೂರಿನಲ್ಲಿ 25 ಲಕ್ಷ ಕಾರುಗಳೇ ಇವೆ. ಇದು ನವದೆಹಲಿಗಿಂತಲೂ ಹೆಚ್ಚಿನ ಸಂಖ್ಯೆಯಾಗಿದೆ. ದೈನಂದಿನ ವಾಹನ ನೋಂದಣಿ ಪ್ರಕಾರ 2,000 ವಾಹನಗಳಿವೆ.

ಬೆಂಗಳೂರು ಸಂಚಾರ ಪೊಲೀಸರಿಂದ ನಿರಾಕರಣೆ

ಟಾಮ್ ಟಾಮ್ ಟ್ರಾಫಿಕ್ ಇಂಡೆಕ್ಸ್ ನ ಇತ್ತೀಚಿನ ವರದಿಯನ್ನು ಬೆಂಗಳೂರು ಸಂಚಾರ ಪೊಲೀಸರು ತಿರಸ್ಕರಿಸಿದ್ದಾರೆ. ಈ ವರದಿಗಳು ನಿಜವಲ್ಲ ಎಂದು ಹೇಳಿದ್ದಾರೆ.

"ನಾವು ಅದಕ್ಕೆ ಯಾವುದೇ ಗೌರವ ಕೊಡುವುದಿಲ್ಲ. ಅಧ್ಯಯನ ನಿಜವಲ್ಲ" ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ʼದ ಫೆಡರಲ್‌ʼ ಜತೆ ಎಂ.ಎನ್.ಅನುಚೇತ್ ಅಭಿಪ್ರಾಯಪಟ್ಟಿದ್ದಾರೆ.

ಐಪಿಎಸ್ ಅಧಿಕಾರಿ ಟಾಮ್ ಟಾಮ್ ವರದಿಯ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದು, ಇದೇ ವರದಿಯು ಸಂಚಾರ ದಟ್ಟಣೆಯ ವಿಷಯದಲ್ಲಿ ಬೆಂಗಳೂರನ್ನು 64 ನೇ ಸ್ಥಾನ ನೀಡಿದೆ ಎಂದು ಹೇಳಿದ್ದಾರೆ. ಸಮೀಕ್ಷೆಗೆ ಬಳಸಲಾದ ದತ್ತಾಂಶಗಳು, ಪರಿಗಣಿಸಲಾದ ವಾಹನಗಳ ಪ್ರಕಾರಗಳು, ಆಯ್ಕೆ ಮಾಡಿದ ರಸ್ತೆಗಳು ಮತ್ತು ಸಮೀಕ್ಷೆ ನಡೆಸಿದ ವಾರದ ದಿನಗಳ ಬಗ್ಗೆ ವರದಿಯಲ್ಲಿ ಸ್ಪಷ್ಟತೆ ಇಲ್ಲ ಎಂದು ಅಧಿಕಾರಿ ಹೇಳಿದ್ದಾರೆ.

ಸಮಯದ ಬಗ್ಗೆ ಸ್ಪಷ್ಟತೆ ಇಲ್ಲ'

ಬೆಂಗಳೂರಿನಲ್ಲಿ ಸಂಚಾರ ಪರಿಸ್ಥಿತಿ ಸಕ್ರಿಯವಾಗಿದೆ. ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವಂತಹ ಸಣ್ಣಸಂಗತಿಗಳಿಂದ ಸುಗಮ ಪ್ರಯಾಣಕ್ಕೆ ತೊಂದರೆಯಾಗಬಹುದು" ಎಂದು ಅಧಿಕಾರಿ ಹೇಳಿದ್ದಾರೆ.

ವಾಹನಗಳ ವೇಗವು ಹಗಲು ಮತ್ತು ರಾತ್ರಿಯ ನಡುವೆ ಬದಲಾಗುತ್ತದೆ. ಇಂತಹ ಸನ್ನಿವೇಶದಲ್ಲಿ, ಸರಾಸರಿ ಸಮಯ ಹೇಗೆ ನಿರ್ಧರಿಸಬಹುದು?" ಎಂದು ಅನುಚೇತ್‌ ಪ್ರಶ್ನಿಸಿದ್ದಾರೆ .

Tags:    

Similar News