ರೆಹಮಾನ್ ವಿಚ್ಚೇದನದ ಬೆನ್ನಲ್ಲೇ ಗಂಡನಿಗೆ ಡಿವೋರ್ಸ್ ಘೋಷಿಸಿದ ರೆಹಮಾನ್‌ ಟೀಮ್‌ನ ಮೋಹಿನಿ ಡೇ

ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಅವರ ವಿಚ್ಛೇದನ ಘೋಷಣೆಯಾದ ಬೆನ್ನಲ್ಲೇ ರೆಹಮಾನ್ ತಂಡದ ಸದಸ್ಯರಾಗಿದ್ದ ಬಾಸಿಸ್ಟ್ ವಾದಕಿ ಮೋಹಿನಿ ಡೇ ಅವರು ತಮ್ಮ ಪತಿ, ಸಂಯೋಜಕ ಮಾರ್ಕ್ ಹಾರ್ಟ್ಸುಚ್‌ ಅವರಿಂದ ಬೇರ್ಪಡುವುದಾಗಿ ಘೋಷಿಸಿದ್ದಾರೆ.

Update: 2024-11-20 12:22 GMT
ಮೋಹಿನಿ ಡೇ
Click the Play button to listen to article

ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಅವರ ವಿಚ್ಛೇದನ ಘೋಷಣೆಯಾದ ಬೆನ್ನಲ್ಲೇ  ರೆಹಮಾನ್ ತಂಡದ ಸದಸ್ಯರಾಗಿದ್ದ  ಬಾಸ್ ವಾದಕಿ ಮೋಹಿನಿ ಡೇ ಅವರು  ತಮ್ಮ ಪತಿ, ಸಂಯೋಜಕ ಮಾರ್ಕ್ ಹಾರ್ಟ್ಸುಚ್‌ ಅವರಿಂದ ಬೇರ್ಪಡುವುದಾಗಿ ಘೋಷಿಸಿದ್ದಾರೆ. 

ಮಾರ್ಕ್ ಮತ್ತು ಮೋಹಿನಿ ಜಂಟಿ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಸುದ್ದಿಯನ್ನು ಹಂಚಿಕೊಡಂಡಿದ್ದು, ತಾವು ಪರಸ್ಪರ ನಿರ್ಧಾರದ ಮೇಲೆ ಬೇರ್ಪಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ. 

"ಮೊದಲನೆಯದಾಗಿ, ನಮ್ಮ ಸ್ನೇಹಿತರು ಮತ್ತು ಕುಟುಂಬಕ್ಕೆ ಬದ್ಧತೆಯಾಗಿ, ಇದು ನಮ್ಮ ನಡುವಿನ ಪರಸ್ಪರ ನಿರ್ಧಾರವಾಗಿದೆ.  ನಾವು ಉತ್ತಮ ಸ್ನೇಹಿತರಾಗಿದ್ದರೂ, ನಾವು ಜೀವನದಲ್ಲಿ ವಿಭಿನ್ನ ವಿಷಯಗಳನ್ನು ಬಯಸುತ್ತೇವೆ. ಪರಸ್ಪರ ಒಪ್ಪಂದ ಪಡೆದು ಬೇರೆ ಆಗುತ್ತಿದ್ದೇವೆ. ಖಾಸಗಿತನಕ್ಕೆ ಆದ್ಯತೆ ನೀಡಿ ಎಂದು ಅವರು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. 

Full View

ತಾವೂ ಬೇರ್ಪಟ್ಟರೂ  ತಮ್ಮ ಅಭಿಮಾನಿಗಳಿಗೆ ಮಾಮೊಗಿ ಮತ್ತು ಮೋಹಿನಿ ಡೇ ಗುಂಪುಗಳು ಸೇರಿದಂತೆ ಅನೇಕ ಯೋಜನೆಗಳಲ್ಲಿ ಮುಂದುವರಿಸುವುದಾಗಿ ಭರವಸೆ ನೀಡಿದ್ದಾರೆ. ಮೋಹಿನಿ ಮತ್ತು ಮಾರ್ಕ್ ತಮ್ಮ ಅಭಿಮಾನಿಗಳಿಗೆ ಹಲವು ಯೋಜನೆಗಳ ಭರವಸೆ ನೀಡಿದ್ದಾರೆ.

ಮೋಹಿನಿ ಯಾರು?

29 ವರ್ಷದ ಮೋಹಿನಿ ಕೋಲ್ಕತ್ತಾದ ಬಾಸಿಸ್ಟ್ ಪ್ಲೇಯರ್ ಆಗಿದ್ದಾರೆ. ಅವರು ಬಾಂಗ್ಲಾದೇಶ ಸಂಗೀತ ಚಾನೆಲ್‌ನ ಗಾನ್ ಬಾಂಗ್ಲಾ ಅವರ ವಿಂಡ್ ಆಫ್ ಚೇಂಜ್‌ನಲ್ಲಿನ ಅಭಿನಯಕ್ಕಾಗಿ ಹೆಸರುವಾಸಿಯಾಗಿದ್ದಾರೆ. ಇದು ಜನಪ್ರಿಯ ಸಂಗೀತ ದೂರದರ್ಶನ ಸರಣಿಯಾಗಿದೆ. ಮೋಹಿನಿ  ವಿಶ್ವಾದ್ಯಂತ 40 ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ರೆಹಮಾನ್ ಅವರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಆಗಸ್ಟ್ 2023 ರಲ್ಲಿ ಅವರ ಚೊಚ್ಚಲ ಆಲ್ಬಂ ಅನ್ನು ಬಿಡುಗಡೆ ಮಾಡಿದ್ದಾರೆ.

 29 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ರೆಹಮಾನ್‌ 

ಮಂಗಳವಾರ ಸಂಜೆ (ನವೆಂಬರ್ 19), ಖ್ಯಾತ ಸಂಗೀತ ಸಂಯೋಜಕ ಎಆರ್ ರೆಹಮಾನ್ ಮತ್ತು ಅವರ ಪತ್ನಿ ಸೈರಾ ಬಾನು ಡಿವೋರ್ಸ್‌ ಘೋಷಣೆ ಮಾಡಿದ್ದು ತಮ್ಮ 29 ವರ್ಷಗಳ ದಾಂಪತ್ಯವನ್ನು ಅಂತ್ಯಗೊಳಿಸಿದ್ದಾರೆ. ಸಂಬಂಧದಲ್ಲಿನ ಭಾವನಾತ್ಮಕ ಒತ್ತಡದಿಂದಾಗಿ ವಿಚ್ಛೇದನ ಪಡೆದಿರುವುದಾಗಿ’ ಸೈರಾ ಹೇಳಿದ್ದಾರೆ ಎಂದು ವರದಿ ಆಗಿದೆ. 1995ರಲ್ಲಿ ಅರೇಂಜ್ಡ್ ಮ್ಯಾರೇಜ್ ಮಾಡಿಕೊಂಡಿದ್ದ ಈ ದಂಪತಿ ಮೂರು ಮಕ್ಕಳ ಪೋಷಕರಾಗಿದ್ದಾರೆ.

“ನಾವು 30 ವರ್ಷಗಳ ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತೇವೆ ಎಂದು ಭಾವಿಸಿದ್ದೇವು. ಆದರೆ ದುರದೃಷ್ಟವಶಾತ್ ಅದು ಸಾಧ್ಯವಾಗಲಿಲ್ಲ. ಛಿದ್ರವಾದ ಹೃದಯಗಳನ್ನು ನೋಡಿ ದೇವರೂ ಕೂಡ ನಡುಗಿಬಿಟ್ಟಿರುತ್ತಾನೆ. ಈ ಕಷ್ಟದ ಸಮಯದಲ್ಲಿ ನಮ್ಮ ಗೌಪ್ಯತೆಯನ್ನು ಗೌರವಿಸುವ ಎಲ್ಲರಿಗೂ ಧನ್ಯವಾದ” ಎಂದು ರೆಹಮಾನ್ ಟ್ವೀಟ್ ಮಾಡಿದ್ದಾರೆ.

Tags:    

Similar News