ಆಂಧ್ರ ಸಿಎಂ ನಾಯ್ಡು ಅಮರಾವತಿಗೆ ಭೇಟಿ

ವೈ.ಎಸ್. ಜಗನ್ ಮೋಹನ್ ರೆಡ್ಡಿ ಸರ್ಕಾರದ ಅಡಿಯಲ್ಲಿ ಅಮರಾವತಿ ರಾಜಧಾನಿ ಯೋಜನೆಯು 2019 ರಿಂದ 2024 ರವರೆಗೆ ಸ್ಥಗಿತಗೊಂಡಿತು. ಟಿಪಿಡಿ ಸರ್ಕಾರ ರಾಜಧಾನಿ ನಿರ್ಮಾಣಕ್ಕೆ ಬದ್ಧವಾಗಿದೆ.

Update: 2024-06-20 11:52 GMT

ಅಮರಾವತಿ, ಜೂನ್ 20- ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಗುರುವಾರ ಅಮರಾವತಿಗೆ ಭೇಟಿ ನೀಡಿದ್ದು, ಸ್ಥಗಿತಗೊಂಡಿರುವ ರಾಜಧಾನಿಯಲ್ಲಿನ ಯೋಜನೆಗಳ ಪರಿಶೀಲನೆ ನಡೆಸಿದರು.

ವೈ.ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿಪಿ ಸರ್ಕಾರದ ಅಡಿಯಲ್ಲಿ 2019 ರಿಂದ 2024 ರವರೆಗೆ ಐದು ವರ್ಷ ಕಾಲ ಅಮರಾವತಿ ರಾಜಧಾನಿ ಯೋಜನೆ ಸ್ಥಗಿತಗೊಂಡಿತ್ತು. ಆದರೆ, ಸರ್ಕಾರದ ಬದಲಾವಣೆಯು ಯೋಜನೆಗೆ ಜೀವ ತುಂಬಿದೆ. 

ನಾಲ್ಕನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ನಾಯ್ಡು, ಮೊದಲ ಬಾರಿಗೆ ಅಮರಾವತಿಗೆ ಭೇಟಿ ನೀಡುತ್ತಿದ್ದಾರೆ. 

ಅಧಿಕಾರಿಗಳು, ಶಾಸಕರು ಹಾಗೂ ನ್ಯಾಯಾಧೀಶರ ವಸತಿ ಗೃಹಗಳು ಮತ್ತು ಸ್ಥಗಿತಗೊಂಡಿರುವ ಹೈಕೋರ್ಟ್, ಸಚಿವಾಲಯ ಮತ್ತು ಇತರ ಹಲವು ನಿರ್ಮಾಣ ಯೋಜನೆಗಳನ್ನು ಮುಖ್ಯಮಂತ್ರಿ ಪರಿಶೀಲಿಸಿದರು. 

ʻಪರಿಸ್ಥಿತಿಯನ್ನು ಅವಲೋಕಿಸಲು ಮತ್ತು ಏನು ಮಾಡಬೇಕು ಎಂದು ನೋಡಲು ಹೋಗಿದ್ದೆ. ಅಮರಾವತಿ ಬಗ್ಗೆ ಎಲ್ಲ ವಿವರಗಳೊಂದಿಗೆ ಶ್ವೇತಪತ್ರ ಬಿಡುಗಡೆ ಮಾಡಲಾಗುತ್ತದೆ,ʼ ಎಂದು ನಾಯ್ಡು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಪೌರಾಡಳಿತ ಸಚಿವ ಪಿ ನಾರಾಯಣ ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸಿಎಂ ಪ್ರಕಾರ, ಅಮರಾವತಿ ನಗರ ಯೋಜನೆ ಅಂದುಕೊಂಡಂತೆ ನಡೆದಿದ್ದರೆ, ಇಷ್ಟೊತ್ತಿಗೆ ರಸ್ತೆ ಮೂಲಸೌಕರ್ಯ ಸಿದ್ಧವಾಗಿರುತ್ತಿತ್ತು. ಅಮರಾವತಿಯಲ್ಲಿ ಸುಮಾರು 55,000 ಎಕರೆ ಭೂಮಿ ಲಭ್ಯವಿದೆ ಎಂಬುದನ್ನು ಗಮನಿಸಿದ ಅವರು, ರಾಜಧಾನಿಗೆ ಭೂಮಿ ನೀಡಿದ ರೈತರಿಗೆ ಧನ್ಯವಾದ ಹೇಳಿದರು.

Tags:    

Similar News