ಮಾನಹಾನಿ ಹೇಳಿಕೆ: ಅಮಿತ್ ಮಾಳವೀಯ ಅವರಿಂದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ

Update: 2024-06-12 12:05 GMT

ಕೋಲ್ಕತ್ತಾ, ಜೂನ್ 12 - ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಮ್ಮ ವಿರುದ್ಧ ಅಪಮಾನಕರ ಹೇಳಿಕೆ ನೀಡಿರುವ ಕೋಲ್ಕತ್ತಾ ಮೂಲದ ವಕೀಲ ಸಂತನು ಸಿನ್ಹಾ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಬಿಜೆಪಿ ನಾಯಕ ಅಮಿತ್ ಮಾಳವೀಯ ಬುಧವಾರ ಹೇಳಿದ್ದಾರೆ. 

ಎಕ್ಸ್‌ನ ಪೋಸ್ಟ್‌ನಲ್ಲಿ ಮಾಳವೀಯ, ʻಸಂತನು ಸಿನ್ಹಾ ಅವರ ಜೂನ್ 7, 2024 ರ ಫೇಸ್‌ಬುಕ್ ಪೋಸ್ಟ್ ಮಹಿಳೆಯರನ್ನು ವಸ್ತುಗಳಂತೆ ಬಿಂಬಿಸುತ್ತದೆ. ಮಹಿಳೆಯರ ಘನತೆಗೋಸ್ಕರ ಮಾತನಾಡಬೇಕಿದ್ದ ತೃಣಮೂಲ ಕಾಂಗ್ರೆಸ್ ಮತ್ತು ಕಾಂಗ್ರೆಸ್, ಸುಳ್ಳನ್ನು ಪ್ರಸಾರ ಮಾಡಲು ನಿರ್ಧರಿಸಿದ್ದು ಆಶ್ಚರ್ಯವೇನಲ್ಲ,ʼ ಎಂದು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಹೇಳಿದ್ದಾರೆ. 

ʻಜೂನ್ 8 ರಂದು ನನ್ನ ವಕೀಲರು ಸಿನ್ಹಾ ಅವರಿಗೆ ಷರತ್ತುಬದ್ಧ ಕ್ಷಮೆಯಾಚನೆಗೆ ಒತ್ತಾಯಿಸಿ, ನೋಟಿಸ್ ನೀಡಿದರು. ಜೂನ್ 11, 2024 ರಂದು ಸಿನ್ಹಾ ಅವರು ತಮ್ಮ ಹೇಳಿಕೆಯನ್ನು ಹಿಂಪಡೆಯುತ್ತಿರುವುದಾಗಿ ಹೇಳಿದರು. ಅವರ ಕ್ಷಮಾಪಣೆ ಸಮಸ್ಯಾತ್ಮಕ ಮತ್ತು ಸಮರ್ಪಕವಾಗಿಲ್ಲ,ʼ ಎಂದು ಹೇಳಿದ್ದಾರೆ. 

ಸಂತನು ಸಿನ್ಹಾ ಮಂಗಳವಾರ ತಮ್ಮ ಹೇಳಿಕೆಯನ್ನು ʻತಪ್ಪಾಗಿ ಅರ್ಥೈಸಲಾಗಿದೆʼ ಎಂದಿದ್ದಾರೆ. ಜತೆಗೆ, ಪೋಸ್ಟ್ ಅನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. 

Tags:    

Similar News