ವಿಶ್ವ ಹಿಂದೂ ಪರಿಷತ್​ ಕಾರ್ಯಕ್ರಮದಲ್ಲಿ ಏಕರೂಪ ನಾಗರಿಕ ಸಂಹಿತೆ ಶ್ಲಾಘಿಸಿದ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ

ವಿಶ್ವ ಹಿಂದೂ ಪರಿಷತ್​ "ಏಕರೂಪ ನಾಗರಿಕ ಸಂಹಿತೆ, ಸಾಂವಿಧಾನಿಕ ಅವಶ್ಯಕತೆ" ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ಆಯೋಜಿಸಿತ್ತು.ಅಲಹಾಬಾದ್ ಹೈಕೋರ್ಟ್​​ನ ಗ್ರಂಥಾಲಯ ಸಭಾಂಗಣದಲ್ಲಿನಡೆದ ನಾಲ್ಕು ದಿನಗಳ ಕಾರ್ಯಾಗಾರ ಇದಾಗಿತ್ತು.;

Update: 2024-12-09 07:02 GMT
Allahabad HC judge praises UCC at VHP event

ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಸಾಂವಿಧಾನಿಕ ಅಗತ್ಯ ಎಂದು ಅಲಹಾಬಾದ್​ ಹೈಕೋರ್ಟ್​​ ನ್ಯಾಯಮೂರ್ತಿ ಶೇಖರ್​ ಕುಮಾರ್ ಯಾದವ್​ ಅಭಿಪ್ರಾಯಪಟ್ಟಿದ್ದಾರೆ. ವಿಶ್ವ ಹಿಂದೂ ಪರಿಷತ್ ಭಾನುವಾರ (ಡಿಸೆಂಬರ್ 8) ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಮದುವೆ, ಉತ್ತರಾಧಿಕಾರ, ವಿಚ್ಛೇದನ, ದತ್ತು ಮುಂತಾದ ವೈಯಕ್ತಿಕ ವಿಷಯಗಳಲ್ಲಿ ಎಲ್ಲಾ ಧಾರ್ಮಿಕ ಸಮುದಾಯಗಳಿಗೆ ಅನ್ವಯವಾಗುವ ಸಾಮಾನ್ಯ ಕಾನೂನು ರೂಪಿಸಬೇಕು ಎಂದು ಹೇಳಿದ್ದಾರೆ.

ವಿಶ್ವ ಹಿಂದೂ ಪರಿಷತ್​ "ಏಕರೂಪ ನಾಗರಿಕ ಸಂಹಿತೆ, ಸಾಂವಿಧಾನಿಕ ಅವಶ್ಯಕತೆ" ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ಆಯೋಜಿಸಿತ್ತು.ಅಲಹಾಬಾದ್ ಹೈಕೋರ್ಟ್​​ನ ಗ್ರಂಥಾಲಯ ಸಭಾಂಗಣದಲ್ಲಿನಡೆದ ನಾಲ್ಕು ದಿನಗಳ ಕಾರ್ಯಾಗಾರ ಇದಾಗಿತ್ತು. .

ಯಾವುದೇ ಧಾರ್ಮಿಕ ಸಮುದಾಯದಲ್ಲಿ ಮದುವೆ, ಆನುವಂಶಿಕತೆ, ವಿಚ್ಛೇದನ ಮತ್ತು ದತ್ತು ಸ್ವೀಕಾರದ ಸಂದರ್ಭದಲ್ಲಿ ಸೂಕ್ತ ಕಾನೂನುಗಳನ್ನು ಏಕರೂಪ ನಾಗರಿಕ ಸಂಹಿತೆ ವ್ಯಾಖ್ಯಾನಿಸುತ್ತದೆ. ಅದೇ ರೀತಿ ಪ್ರಸ್ತುತ ವಿವಿಧ ಧಾರ್ಮಿಕ ಸಮುದಾಯಗಳಲ್ಲಿ ಇರುವ ವೈಯಕ್ತಿಕ ಕಾನೂನುಗಳನ್ನು ಬದಲಾಯಿಸುವ ಗುರಿಯನ್ನು ಹೊಂದಲಾಗಿದೆ ಎಂದು ಅವರು ಹೇಳಿದ್ದಾರೆ.

ಸಮುದಾಯಗಳ ನಡುವೆ ಮಾತ್ರವಲ್ಲದೆ ಸಮುದಾಯದೊಳಗೆ ಕಾನೂನುಗಳ ಏಕರೂಪವನ್ನು ಖಚಿತಪಡಿಸಿಕೊಳ್ಳುವುದು ಈ ಸಂಹಿತೆಯ ಉದ್ದೇಶ ಎಂದು ಅವರು ಹೇಳಿದರು. ಸಮಾನತೆ, ನ್ಯಾಯ ಮತ್ತು ಜಾತ್ಯತೀತತೆಯ ತತ್ವಗಳನ್ನು ಆಧರಿಸಿದ ಏಕರೂಪ ನಾಗರಿಕ ಸಂಹಿತೆ ಭಾರತದಲ್ಲಿ ದೀರ್ಘಕಾಲದಿಂದ ಚರ್ಚೆಯ ವಿಷಯವಾಗಿದೆ.

ಜಾಮೀನು ನಿರಾಕರಿಸಿದ್ದ ನ್ಯಾಯಮೂರ್ತಿ ಯಾದವ್

2021ರಲ್ಲಿ ನ್ಯಾಯಮೂರ್ತಿ ಯಾದವ್ ಅವರು ಗೋಹತ್ಯೆ ಪ್ರಕರಣವೊಂದರಲ್ಲಿ ಬಂಧನಕ್ಕೆ ಒಳಗಾಗಿದ್ದ ವ್ಯಕ್ತಿಗೆ ಜಾಮೀನು ನಿರಾಕರಿಸಿದ್ದರು. ಗೋವು "ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗ ಮತ್ತು ಅದನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು" ಎಂದು ಅರ್ಜಿ ವಿಚಾರಣೆ ವೇಳೆ ಅಭಿಪ್ರಾಯಪಟ್ಟಿದ್ದರು .

ಮತ್ತೊಂದು ಆದೇಶದಲ್ಲಿ, ರಾಮ, ಕೃಷ್ಣ, ರಾಮಾಯಣ ಮತ್ತು ಗೀತೆಯನ್ನು ಭಾರತದ ಪರಂಪರೆಯ ಅವಿಭಾಜ್ಯ ಅಂಗವೆಂದು ಘೋಷಿಸಲು ಸಂಸತ್ತು ಕಾನೂನನ್ನು ಅಂಗೀಕರಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದರು.

ವಿಶ್ವ ಹಿಂದೂ ಪರಿಷತ್​ನ ಕಾನೂನು ಘಟಕದ ರಾಷ್ಟ್ರೀಯ ಸಹ-ಸಂಚಾಲಕ ಮತ್ತು ಕಾರ್ಯಾಗಾರದ ಉದ್ಘಾಟನಾ ಅಧಿವೇಶನದ ಮುಖ್ಯ ಅತಿಥಿ ಅಭಿಷೇಕ್ ಆತ್ರೇಯ, ಕಳೆದ ಕೆಲವು ತಿಂಗಳುಗಳಲ್ಲಿ ಬಾಂಗ್ಲಾದೇಶವು ಹೇಗೆ "ಎರಡನೇ ಕಾಶ್ಮೀರ" ವಾಗಿ ಮಾರ್ಪಟ್ಟಿದೆ ಎಂಬುದಾಗಿ ಮಾತನಾಡಿದ್ದರು.

ನೆರೆಯ ದೇಶದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರು ಮತ್ತು ದೇವಾಲಯಗಳ ಮೇಲೆ ನಡೆಯುತ್ತಿರುವ ದಾಳಿಗಳ ಬಗ್ಗೆ ಮಾತನಾಡಿದ ಅವರು, ಜನರು ತಮ್ಮ ಹೆಗ್ಗುರತನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದ್ದರು. 

Tags:    

Similar News