ಉತ್ತರಾಖಂಡದ ಗಂಗೋತ್ರಿಯ ಬಳಿ ಹೆಲಿಕಾಪ್ಟರ್ ದುರಂತ: ಐವರು ಸಾವು
ಹೆಲಿಕಾಪ್ಟರ್ ಏರೋಟ್ರಾನ್ಸ್ ಕಂಪನಿಗೆ ಸೇರಿದ್ದು, ಗುರುವಾರ (ಮೇ 08, 2025) ಬೆಳಿಗ್ಗೆ ಸಹಸ್ರಧಾರಾದಿಂದ ಹೊರಟು ಖರ್ಸಾಲಿಯಿಂದ ಹರ್ಸಿಲ್‌ಗೆ ತೆರಳುತ್ತಿತ್ತು.;
ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಗಂಗೋತ್ರಿಯ ಬಳಿಯ ಗಂಗಾನಿಯ ನಾಗ ಮಂದಿರದ ಭಾಗೀರಥಿ ನದಿಯ ಬಳಿ ಖಾಸಗಿ ಹೆಲಿಕಾಪ್ಟರ್ ಒಂದು ದುರಂತಕ್ಕೀಡಾಗಿದೆ. ಈ ಘಟನೆಯಲ್ಲಿ ಐವರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಹೆಲಿಕಾಪ್ಟರ್ ಏರೋಟ್ರಾನ್ಸ್ ಕಂಪನಿಗೆ ಸೇರಿದ್ದು, ಗುರುವಾರ (ಮೇ 08, 2025) ಬೆಳಿಗ್ಗೆ ಸಹಸ್ರಧಾರಾದಿಂದ ಹೊರಟು ಖರ್ಸಾಲಿಯಿಂದ ಹರ್ಸಿಲ್‌ಗೆ ತೆರಳುತ್ತಿತ್ತು. ಒಟ್ಟು 5ರಿಂದ 6 ಜನರು ಹೆಲಿಕಾಪ್ಟರ್‌ನಲ್ಲಿದ್ದರು ಎಂದು ಎಸ್‌ಡಿಆರ್‌ಎಫ್ ಕಮಾಂಡೆಂಟ್ ಅರ್ಪಣ್ ವೈ ಮಾಹಿತಿ ನೀಡಿದ್ದಾರೆ.
ಹೆಲಿಕಾಪ್ಟರ್ ಗಂಗಾನಿಯ ಬಳಿ ದುರಂತಕ್ಕೀಡಾದಾಗ ಸ್ಥಳೀಯ ಪೊಲೀಸ್, ಭಾರತೀಯ ಸೇನೆ, ವಿಪತ್ತು ನಿರ್ವಹಣಾ ಕ್ವಿಕ್ ರೆಸ್ಪಾನ್ಸ್ ಟೀಮ್ (ಕ್ಯೂಆರ್‌ಟಿ) ನೆರವು ನೀಡಿದೆ. ಗಾಯಗೊಂಡವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದ್ದು, ರಕ್ಷಣಾ ತಂಡಗಳು ಘಟನಾ ಸ್ಥಳದಲ್ಲಿ ತೀವ್ರ ಕಾರ್ಯಾಚರಣೆ ನಡೆಸುತ್ತಿವೆ. ಈ ದುರಂತದ ಬಗ್ಗೆ ಹೆಚ್ಚಿನ ವಿವರಗಳು ಇನ್ನೂ ಬಹಿರಂಗಗೊಂಡಿಲ್ಲ. ಅಧಿಕಾರಿಗಳು ರಕ್ಷಣಾ ಕಾರ್ಯವನ್ನು ತೀವ್ರಗೊಳಿಸಿದ್ದು, ಘಟನೆಯ ಕಾರಣವನ್ನು ತನಿಖೆ ಮಾಡಲಾಗುತ್ತಿದೆ. ಗಂಗೋತ್ರಿಗೆ ತೆರಳುತ್ತಿದ್ದ ಈ ಹೆಲಿಕಾಪ್ಟರ್ ಚಾರ್‌ಧಾಮ್ ಯಾತ್ರೆಯ ಭಾಗವಾಗಿ ಯಾತ್ರಿಗಳನ್ನು ಕೊಂಡೊಯ್ಯುತ್ತಿತ್ತು ಎಂದು ವರದಿಗಳು ತಿಳಿಸಿವೆ.