Bomb Threat | ತಿರುಪತಿಯ ಮೂರು ಹೋಟೆಲ್‌ಗೆ ಬಾಂಬ್ ಬೆದರಿಕೆ
ತಿರುಪತಿಯ ಲೀಲಾ ಮಹಲ್, ಕಪಿಲ ತೀರ್ಥಂ ಮತ್ತು ಅಲಿಪಿರಿ ಎಂಬ ಹೊಟೇಲ್ ಗಳಿಗೆ ಗುರುವಾರ ಸಂಜೆ ಇ-ಮೇಲ್ ಮೂಲಕ ಸಂದೇಶ ಕಳುಹಿಸಿದ್ದಾರೆ.
ವಿಮಾನಯಾನ ಸಂಸ್ಥೆ, ಶಾಲೆಗಳನ್ನು ಗುರಿಯಾಗಿಸಿಕೊಂಡು ಬಾಂಬ್ ಬೆದರಿಕೆ ಸಂದೇಶ ಕಳುಹಿಸುತ್ತಿದ್ದ ದುಷ್ಕರ್ಮಿಗಳು ಈಗ ಪ್ರಸಿದ್ಧ ತಿರುಪತಿ ತಿರುಮಲದ ಮೂರು ಖಾಸಗಿ ಹೋಟೆಲ್‌ಗಳಿಗೂ ಬೆದರಿಕೆ ಹಾಕಿದ್ದಾರೆ.
ತಿರುಪತಿಯ ಲೀಲಾ ಮಹಲ್, ಕಪಿಲ ತೀರ್ಥಂ ಮತ್ತು ಅಲಿಪಿರಿ ಎಂಬ ಹೊಟೇಲ್ ಗಳಿಗೆ ಗುರುವಾರ ಸಂಜೆ ಇ-ಮೇಲ್ ಮೂಲಕ ಸಂದೇಶ ಕಳುಹಿಸಿದ್ದಾರೆ. ಪಾಕಿಸ್ತಾನ ಐಎಸ್ಐ ಪಟ್ಟಿಯಲ್ಲಿರುವ ಹೋಟೆಲ್‌ಗಳಲ್ಲಿ ಸುಧಾರಿತ ಬಾಂಬ್ ಸಕ್ರಿಯಗೊಳಿಸಲಾಗುವುದು ಎಂದು ಹೇಳಿರುವುದು ಆತಂಕಕ್ಕೆ ಕಾರಣವಾಗಿತ್ತು.
ವೆಂಕಟೇಶ್ವರ ದೇವಸ್ಥಾನದಿಂದ ಅನತಿ ದೂರದ ಈ ಮೂರು ಹೋಟೆಲ್‌ಗಳಿಗೆ ತಕ್ಷಣವೇ ಧಾವಿಸಿದ ಪೊಲೀಸರು ಹಾಗೂ ಶ್ವಾನದಳದ ಸಿಬ್ಬಂದಿ ತೀವ್ರ ತಪಾಸಣೆ ನಡೆಸಿದರು. ಆದರೆ, ಯಾವುದೇ ಬಾಂಬ್ ಪತ್ತೆಯಾಗದ ಕಾರಣ ಹುಸಿ ಬೆದರಿಕೆ ಎಂಬ ನಿರ್ಧಾರಕ್ಕೆ ಬರಲಾಯಿತು.
ಬೆದರಿಕೆ ಸಂದೇಶದ ಜಾಡು ಹಿಡಿದಿರುವ ಪೊಲೀಸರು, ತನಿಖೆ ತೀವ್ರಗೊಳಿಸಿದ್ದಾರೆ.
ಸಂದೇಶದಲ್ಲಿ ಡಿಎಂಕೆ ಪ್ರಸ್ತಾಪ?
ಈಚೆಗೆ ತಮಿಳುನಾಡಿನಲ್ಲಿ ಬಂಧನಕ್ಕೊಳಗಾದ ಡಿಎಂಕೆ ಮಾಜಿ ಕಾರ್ಯಾಧ್ಯಕ್ಷ ಜಾಫರ್ ಸಿದ್ಧಕಿ ಅವರ ಹೆಸರು ಉಲ್ಲೇಖಿಸಿ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ರಾತ್ರಿ 11 ಗಂಟೆಗೆ ಹೋಟೆಲ್ ಖಾಲಿ ಮಾಡಿ. ಇದರಲ್ಲಿ ಟಿಎನ್ ಸಿಎಂ ಕೂಡ ಸೇರಿದ್ದಾರೆ ಎಂಬುದು ಸಂದೇಶದಲ್ಲಿದೆ.