ದೆಹಲಿಯಲ್ಲಿ ಸತತ 3ನೇ ಮಂಜು ಕವಿದ ವಾತಾವರಣ: 160 ವಿಮಾನಗಳು, 51 ರೈಲುಗಳ ಸಂಚಾರಕ್ಕೆ ಅಡಚಣೆ

ದೆಹಲಿಯ ಗಾಳಿಯ ಗುಣಮಟ್ಟವು ತುಂಬಾ ಕಳಪೆಯಾಗಿದೆ. ಬೆಳಿಗ್ಗೆ 9 ಗಂಟೆಗೆ 372 ರಷ್ಟಿತ್ತು. ಪಾಲಂ ಮತ್ತು ಸಫ್ದರ್‌ಜಂಗ್‌ ವಿಮಾನ ನಿಲ್ದಾಣಗಳಲ್ಲಿ ಸಾಮಾನ್ಯ ಗೋಚರತೆ ಬೆಳಿಗ್ಗೆ 7.30 ಕ್ಕೆ ಸೊನ್ನೆಗೆ ಇಳಿದಿದೆ.;

Update: 2025-01-05 05:48 GMT
ದೆಹಲಿಯಲ್ಲಿ ಮಂಜು ಕವಿದ ವಾತಾವರಣ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸತತ ಮೂರನೇ ದಿನವೂ ಮಂಜು ತುಂಬಿದ ವಾತಾವರಣವಿತ್ತು.ದಟ್ಟ ಮಂಜು ಆವರಿಸಿದ್ದ ಕಾರಣ ವಿಮಾನ ಮತ್ತು ರೈಲು ಸಂಚಾರದ ವೇಳಾಪಟ್ಟಿ ಅಸ್ತವ್ಯಸ್ತಗೊಂಡಿತು.

ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಐಜಿಐಎ) 160 ಕ್ಕೂ ಹೆಚ್ಚು ವಿಮಾನಗಳ ಹಾರಾಟದ ಪರಿಣಾಮ ಬೀರಿದೆ. 155ಕ್ಕೂ ಹೆಚ್ಚು ವಿಳಂಬವಾಗಿದೆ ಮತ್ತು ಕನಿಷ್ಠ ಎಂಟು ವಿಮಾನಗಳನ್ನು ರದ್ದುಪಡಿಸಲಾಗಿದೆ. ಒಟ್ಟು 51 ರೈಲುಗಳು ವಿಳಂಬವಾಗಿವೆ ಎಂದು ಮೂಲಗಳು ತಿಳಿಸಿವೆ.

ಶೂನ್ಯ ಗೋಚರತೆ

ಬೆಳಿಗ್ಗೆ 4ರಿಂದ 7.30ರ ನಡುವೆ ಪಾಲಂ ಪ್ರದೇಶದಲ್ಲಿ ಶೂನ್ಯ ಗೋಚರತೆ ಇತ್ತು ಎಂದು ಹವಾಮಾನ ಕಚೇರಿ ತಿಳಿಸಿದೆ. ಶನಿವಾರವೂ ಈ ಪ್ರದೇಶದಲ್ಲಿ ಗೋಚರತೆ ಕಡಿಮೆಯಾಗಿತ್ತು.

ಸಫ್ದರ್‌ಜಂಗ್‌ನಲ್ಲಿ ಬೆಳಿಗ್ಗೆ 5.30 ಕ್ಕೆ ಗೋಚರತೆ 50 ಮೀಟರ್‌ನಷ್ಟಿತ್ತು. ಪಾಲಂ ಮತ್ತು ಸಫ್ದರ್‌ಜಂಗ್‌ ವಿಮಾನ ನಿಲ್ದಾಣಗಳಲ್ಲಿ ಸಾಮಾನ್ಯ ಗೋಚರತೆ ಬೆಳಿಗ್ಗೆ 7.30 ಕ್ಕೆ ಶೂನ್ಯಕ್ಕೆ ಇಳಿದಿತ್ತು. ಸುಧಾರಿತ ಸಿಎಟಿ 3 ನ್ಯಾವಿಗೇಷನ್ ವ್ಯವಸ್ಥೆಗಳನ್ನು ಹೊಂದಿರದ ವಿಮಾನಗಳನ್ನು ಹೊಂದಿರುವ ವಿಮಾನಗಳನ್ನು ವಿಳಂಬಗೊಳಿಸಬೇಕಾಯಿತು ಮತ್ತು ರದ್ದು ಮಾಡಬೇಕಾಯಿತು.

ಪ್ರಯಾಣಿಕರು ತಮ್ಮ ರೈಲಿನ ಸ್ಥಿತಿಯನ್ನು ಪರಿಶೀಲಿಸಿದ ನಂತರವೇ ಪ್ರಯಾಣಿಸುವಂತೆ ರೈಲ್ವೆ ಇಲಾಖೆ ಹೇಳಿದೆ.

ಕಳಪೆ ಗುಣಮಟ್ಟದ ವಾತಾವರಣ

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿಅಂಶಗಳ ಪ್ರಕಾರ, ರಾಷ್ಟ್ರ ರಾಜಧಾನಿಯ ಗಾಳಿಯ ಗುಣಮಟ್ಟವು "ತುಂಬಾ ಕಳಪೆ" ಯಾಗಿತ್ತು,. ಬೆಳಿಗ್ಗೆ 9 ಗಂಟೆಗೆ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 372 ರಷ್ಟು ಇತ್ತು .

ಗಾಳಿಯ ಗುಣಮಟ್ಟವನ್ನು ಸೊನ್ನೆಯಿಂದ 50ರ ನಡುವೆ "ಉತ್ತಮ", 51 ರಿಂದ 100 "ತೃಪ್ತಿಕರ", 101 ರಿಂದ 200 "ಮಧ್ಯಮ", 201 ರಿಂದ 300 "ಕಳಪೆ", 301 ರಿಂದ 400 "ತುಂಬಾ ಕಳಪೆ", ಮತ್ತು 401 ಮತ್ತು 500 "ಗಂಭೀರ " ಎಂದು ಪರಿಗಣಿಸಲಾಗುತ್ತದೆ. ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಎರಡು ಡಿಗ್ರಿ ಸೆಲ್ಸಿಯಸ್ ಹೆಚ್ಚು 9.4 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಹಗಲಿನಲ್ಲಿಯೂ ದಟ್ಟ ಮಂಜು ಕವಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗರಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ.

Tags:    

Similar News