D Gukesha : ಪ್ರಧಾನಿ ಮೋದಿ ಭೇಟಿ ಮಾಡಿದ ಗುಕೇಶ್
D Gukesha: ಚೆಸ್ ಚಾಂಪಿಯನ್ ಮತ್ತು ಭಾರತದ ಹೆಮ್ಮೆಯ ಡಿ ಗುಕೇಶ್ ಅವರನ್ನು ಭೇಟಿಯಾದೆ!" ಎಂದು ಪ್ರಧಾನಿ ಮೋದಿ ತಮ್ಮ ಭೇಟಿಯ ಚಿತ್ರಗಳೊಂದಿಗೆ 'ಎಕ್ಸ್' ನಲ್ಲಿ ಪೋಸ್ಟ್ ಮಾಡಿದ್ದಾರೆ.
ಚೆಸ್ ವಿಶ್ವ ಚಾಂಪಿಯನ್‌ಷಿಪ್ ಪ್ರಶಸ್ತಿ ವಿಜೇತ ಗುಕೇಶ್ ಅವರು ಶನಿವಾರ (ಡಿಸೆಂಬರ್ 28) ನವದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದರು. ಯುವ ಚೆಸ್ ಪಟು ಜತೆ ಅವರ ಪೋಷಕರು ಇದ್ದರು. ಈ ಭೇಟಿಯನ್ನು ಮೋದಿ ಶ್ಲಾಘಿಸಿದ್ದು ಶಾಂತರೂಪದ ಆಟಗಾರ ಎಂದು ಹೊಗಳಿದ್ದಾರೆ.
18 ವರ್ಷದ ಗುಕೇಶ್ ಸಿಂಗಾಪುರದಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿನ್‌ನಲ್ಲಿ ನೆರೆಯ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿ ಅತ್ಯಂತ ಕಿರಿಯ ಚೆಸ್ ವಿಶ್ವ ಚಾಂಪಿಯನ್ ಎಂಬ ಹೆಗ್ಗಳಿಕೆ ಗಿಟ್ಟಿಸಿಕೊಂಡಿದ್ದರು. 1985 ರಲ್ಲಿ 22 ನೇ ವಯಸ್ಸಿನಲ್ಲಿ ಈ ಕಿರೀಟ ಮುಡಿಗೇರಿಸಿಕೊಂಡಿದ್ದ ರಷ್ಯಾದ ಶ್ರೇಷ್ಠ ಗ್ಯಾರಿ ಕಾಸ್ಪರೋವ್ ಅವರನ್ನು ಹಿಂದಿಕ್ಕಿದ್ದರು.
"ಚೆಸ್ ಚಾಂಪಿಯನ್ ಮತ್ತು ಭಾರತದ ಹೆಮ್ಮೆಯ ಡಿ ಗುಕೇಶ್ ಅವರನ್ನು ಭೇಟಿಯಾದೆ!" ಎಂದು ಪ್ರಧಾನಿ ಮೋದಿ ತಮ್ಮ ಭೇಟಿಯ ಚಿತ್ರಗಳೊಂದಿಗೆ 'ಎಕ್ಸ್' ನಲ್ಲಿ ಪೋಸ್ಟ್ ಮಾಡಿದ್ದಾರೆ.
"ಕೆಲವು ವರ್ಷಗಳಿಂದ ಗುಕೇಶ್ ಅವರೊಂದಿಗೆ ನಿಕಟ ಸಂವಹನ ನಡೆಸುತ್ತಿದ್ದೇನೆ. ಅವರ ದೃಢನಿಶ್ಚಯ ಮತ್ತು ಸಮರ್ಪಣೆ.ನನ್ನ ಗಮನಸೆಳೆದಿದೆ. ಗುಕೇಶ್ ಹೊಂದಿರುವ ಆತ್ಮವಿಶ್ವಾಸ ನಿಜವಾಗಿಯೂ ಸ್ಪೂರ್ತಿದಾಯಕ ಎಂದು ಹೇಳಿದ್ದಾರೆ.
ಕೆಲವು ವರ್ಷಗಳ ಹಿಂದೆ ಅವರು ಕಿರಿಯ ವಿಶ್ವ ಚಾಂಪಿಯನ್ ಆಗುತ್ತೇನೆ ಎಂದು ಹೇಳಿಕೊಂಡಿದ್ದ ವಿಡಿಯೊ ನೋಡಿದ್ದು ನನಗೆ ನೆನಪಿದೆ. ಅವರ ಸ್ವಂತ ಪ್ರಯತ್ನಗಳಿಗೆ ಧನ್ಯವಾದಗಳು" ಎಂದು ಮೋದಿ ಬರೆದಿದ್ದಾರೆ.
ವಿಶ್ವನಾಥನ್ ಆನಂದ್ ನಂತರ ವಿಶ್ವ ಪ್ರಶಸ್ತಿ ಗೆದ್ದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಗುಕೇಶ್ ಪಾತ್ರರಾಗಿದ್ದಾರೆ. ಆನಂದ್ ತನ್ನ ಅಕಾಡೆಮಿಯಲ್ಲಿ ಗುಕೇಶ್ ಅವರ ಚೆಸ್ ಪ್ರತಿಭೆಯನ್ನು ಪೋಷಿಸಿದ್ದಾರೆ.
ಟೊರೊಂಟೊದಲ್ಲಿ ನಡೆದ ಕ್ಯಾಂಡಿಡೇಟ್ಸ್ ಟೂರ್ನಮೆಂಟ್ ನಲ್ಲಿನ ಗೆಲುವಿನೊಂದಿಗೆ ಪ್ರಾರಂಭವಾದ ಚೆಸ್ ಪಟು ಅದ್ಭುತ ವರ್ಷ ಕಂಡಿದ್ದಾರೆ. ಈ ವರ್ಷದ ಆರಂಭದಲ್ಲಿ ಬುಡಾಪೆಸ್ಟ್‌ನಲ್ಲಿ ನಡೆದ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತದ ಮೊದಲ ಚಿನ್ನದ ಗೆದ್ದಿತ್ತು. ಈ ತಂಡವನ್ನು ಗುಕೇಶ್ ಮುನ್ನಡೆಸಿದ್ದರು.
ಗುಕೇಶ್ ಅವರ ಪೋಷಕರಾದ ರಜನಿಕಾಂತ್ ಮತ್ತು ಪದ್ಮಾ ಕುಮಾರಿ ಪುತ್ರನಿಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ.
"ಪ್ರತಿಯೊಬ್ಬ ಕ್ರೀಡಾಪಟುವಿನ ಯಶಸ್ಸಿನಲ್ಲಿ, ಅವರ ಪೋಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಯಶಸ್ಸು ಮತ್ತು ಸೋಲಿನ ಸಮಯದಲ್ಲಿ ಅವನನ್ನು ಬೆಂಬಲಿಸಿದ್ದಕ್ಕಾಗಿ ನಾನು ಗುಕೇಶ್ ಅವರ ಹೆತ್ತವರನ್ನು ಅಭಿನಂದಿಸಿದೆ. ಅವರ ಸಮರ್ಪಣೆಯು ಕ್ರೀಡೆಯನ್ನು ವೃತ್ತಿಯಾಗಿ ಮುಂದುವರಿಸುವ ಕನಸು ಕಾಣುವ ಅಸಂಖ್ಯಾತ ಯುವ ಆಕಾಂಕ್ಷಿಗಳ ಪೋಷಕರಿಗೆ ಸ್ಫೂರ್ತಿ ನೀಡುತ್ತದೆ,ʼʼ ಎಂದು ಮೋದಿ ಬರೆದಿದ್ದಾರೆ.
"ಗುಕೇಶ್ ಅವರಿಂದ ಚೆಸ್ ಬೋರ್ಡ್ ಸ್ವೀಕರಿಸಲು ನನಗೆ ಸಂತೋಷವಾಗಿದೆ. ಅವರು ಮತ್ತು ಡಿಂಗ್ ಲಿರೆನ್ ಇಬ್ಬರೂ ಸಹಿ ಮಾಡಿದ ಚೆಸ್ ಬೋರ್ಡ್ ಒಂದು ಅಚ್ಚುಮೆಚ್ಚಿನ ಸ್ಮರಣಿಕೆ" ಎಂದು ಪ್ರಧಾನಿ ಬರೆದಿದ್ದಾರೆ.