ತಮ್ಮ ಒಂದೂವರೆ ವರ್ಷದ ಮಗನನ್ನು ಟ್ರೋಲ್ ಮಾಡಿದವರಿಗೆ ತಿರುಗೇಟು ನೀಡಿದ ಸಂಜನಾ ಗಣೇಶನ್
ತನ್ನ ಅಪ್ಪ ವಿಕೆಟ್ ಪಡೆದಾಗ ಪುಟಾಣಿ ಅಂಗದ್ ಸಂಭ್ರಮಿಸಿದ್ದ. ಈ ಮುಖಭಾವನೆಯನ್ನು ಕೆಲವರು ಗಾಯ ಎಂದು ಹೇಳಿದ್ದರೆ, ಇನ್ನೂ ಕೆಲವರು 'ಖಿನ್ನತೆ' ಎಂದು ಬರೆದುಕೊಂಡಿದ್ದರು. ಈ ಕಾಮೆಂಟ್ಗಳು ಸಂಜನಾ ಅವರನ್ನು ಸಿಟ್ಟಿಗೇಳಿಸಿದೆ.;
ಎಕ್ಸ್ನಿಂದ ಪಡೆದ ಚಿತ್ರ.
ಸೋಶಿಯಲ್ ಮೀಡಿಯಾಗಳ ಮೂಲಕ ತಮ್ಮ ಒಂದೂವರೆ ವರ್ಷದ ಪುತ್ರ ಅಂಗದ್ನನ್ನು ಟ್ರೋಲ್ ಮಾಡಿದವರಿಗೆ ಜಸ್‌ಪ್ರೀತ್ ಬುಮ್ರಾ ಅವರ ಪತ್ನಿ ಮತ್ತು ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ತಿರುಗೇಟು ಕೊಟ್ಟಿದ್ದಾರೆ. ಈ ವೇಳೆ ಅವರು ಅನಗತ್ಯವಾಗಿ ಸುಳ್ಳು ಸುದ್ದಿ ಹರಡುವ ಜನರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ ಮುಂಬೈ ಇಂಡಿಯನ್ಸ್ (ಎಂಐ) ಮತ್ತು ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ನಡುವಿನ ಪಂದ್ಯದ ವೇಳೆ ನೆಟ್ಟಿಗರು ಅನಗತ್ಯ ತರ್ಲೆ ಮಾಡಿದ್ದರು. ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಆಂಗದ್ನ ಮುಖದ ಭಾವನೆಯ ಕಿರು ವಿಡಿಯೋವೊಂದು ವೈರಲ್ ಆಗಿತ್ತು. ತನ್ನ ಅಪ್ಪ ವಿಕೆಟ್ ಪಡೆದಾಗ ಪುಟಾಣಿ ಅಂಗದ್ ಸಂಭ್ರಮಿಸಿರಲಿಲ್ಲ. ಸಂಜನಾ ಒತ್ತಾಯಪೂರ್ವಕವಾಗಿ ಚಪ್ಪಾಳೆ ತಟ್ಟಿಸಿದ್ದರು. ಆದಾಗ್ಯೂ ಆತನ ಮುಖದಲ್ಲಿ ಕಳೆ ಇರಲಿಲ್ಲ. ಈ ಮುಖಭಾವನೆಯನ್ನು ಕೆಲವರು 'ಖಿನ್ನತೆ' ಎಂದು ಬರೆದುಕೊಂಡಿದ್ದರು. ಈ ಕಾಮೆಂಟ್ಗಳು ಸಂಜನಾ ಅವರನ್ನು ಸಿಟ್ಟಿಗೇಳಿಸಿದೆ.
"ನಮ್ಮ ಮಗ ನಿಮ್ಮೆಲ್ಲರ ಮನರಂಜನೆಯ ವಸ್ತುವಲ್ಲ. ನಾವು ಆಂಗದ್ನನ್ನು ಸಾಮಾಜಿಕ ಜಾಲತಾಣದಿಂದ ದೂರವಿಡಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದೇವೆ. ಇಂಟರ್ನೆಟ್ ವೇದಿಕೆಗಳು ಅಪಾಯಕಾರಿ ಸ್ಥಳವಾಗಿದೆ. ಆದಾಗ್ಯೂ ಕ್ರಿಕೆಟ್ ಕ್ರೀಡಾಂಗಣದಲ್ಲಿ ಕ್ಯಾಮೆರಾಗಳಲ್ಲಿ ಆತ ಕಾಣಿಸಿಕೊಳ್ಳುವುದು ಅನಿವಾರ್ಯವಾಯಿತು. ನಾನು ಮತ್ತು ಆಂಗದ್ ಅಲ್ಲಿಗೆ ಬಂದಿದ್ದು, ಜಸ್ಪ್ರಿತ್ ಬುಮ್ರಾಗೆ ಬೆಂಬಲ ನೀಡುವುದಕ್ಕೆ. ಅದನ್ನೇ ತಪ್ಪಾಗಿ ವಿವರಿಸಬಾರದು, ಎಂದು ಅವರು ಹೇಳಿದ್ದಾರೆ.
"ಮೂರು ಸೆಕೆಂಡ್‌ಗಳ ವಿಡಿಯೋ ಆಧರಿಸಿ ಆಂಗದ್ನ ವ್ಯಕ್ತಿತ್ವ ನಿರ್ಧರಿಸುವ ಕೀಬೋರ್ಡ್ ವಾರಿಯರ್‌ಗಳಿಗೆ ಯಾವುದೇ ನಿಯಂತ್ರಣವಿಲ್ಲ. ಒಂದೂವರೆ ವರ್ಷದ ಮಗುವನ್ನು 'ಖಿನ್ನತೆ ಉಳ್ಳವ' ಮತ್ತು 'ಗಾಯಗೊಂಡವ' ಎಂದು ಕರೆಯುವುದು ಅಪಾಯಕಾರಿ." ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಆಂಗದ್ನ ವಿಡಿಯೋವನ್ನು ಕೆಲವರು 2023ರ ವಿಶ್ವಕಪ್ ಫೈನಲ್‌ನಲ್ಲಿ ಬುಮ್ರಾ ತೋರ್ಪಡಿಸಿದ್ದ ನಿರಾಸೆಯ ಭಾವಕ್ಕೆ ಹೋಲಿಸಿದ್ದರು. ನಮ್ಮ ಮಗನ ಬಗ್ಗೆ, ನಮ್ಮ ಜೀವನದ ಬಗ್ಗೆ ನಿಮಗೇನೂ ಗೊತ್ತಿಲ್ಲ. ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು ನಿಮ್ಮಲ್ಲಿಯೇ ಇಟ್ಟುಕೊಳ್ಳಿ. ಸ್ವಲ್ಪ ಪ್ರಾಮಾಣಿಕತೆ ಮತ್ತು ಕರುಣೆಯಿಂದ ಈ ಜಗತ್ತಿನಲ್ಲಿ ದೊಡ್ಡ ಬದಲಾವಣೆ ತರಬಹುದು," ಎಂದು ಹೇಳಿದ್ದಾರೆ.
ಸಂಜನಾ ಮತ್ತು ಜಸ್‌ಪ್ರೀತ್ 2021ರಲ್ಲಿ ವಿವಾಹವಾಗಿದ್ದರು. 2023ರ ಸೆಪ್ಟೆಂಬರ್‌ನಲ್ಲಿ ಆಂಗದ್ ಜನಿಸಿದ್ದ. ಸಂಜನಾ ಅವರ ಸಂದೇಶ ನೋಡಿದ ಕೆಲವರು ಅವರ ಬಗ್ಗೆ ಕರುಣೆ ವ್ಯಕ್ತಪಡಿಸಿದ್ದಾರೆ. ಅನಗತ್ಯ ಟ್ರೋಲ್ ಮಾಡುವವರ ಬೆಂಡೆತ್ತಿದ್ದಾರೆ.