ಭಾರತ- ಪಾಕಿಸ್ತಾನದಲ್ಲಿ ಮೂರು ಬಲಿಷ್ಠ ದೇಶಗಳ ಹೂಡಿಕೆಗಳಿರುವುದೇ ಸದ್ಯದ ಸಮಾಧಾನ

ಭಾರತ ಮತ್ತು ಪಾಕಿಸ್ತಾನದ ನಡುವಿನ ಪ್ರಸ್ತುತ ಸಂಘರ್ಷದ ಜಾಗತಿಕ ಬಿಕ್ಕಟ್ಟಿಗೆ ಕಾರಣವಾಗಿದೆ. ಪ್ರಬಲದ ದೇಶಗಳ ಯಾವುದೇ ಹೇಳಿಕೆ ನೀಡಲಾಗದೆ ಅಥವಾ ಒತ್ತಡ ಹೇರಲಾಗದೆ ಮೌನಕ್ಕೆ ಶರಣಾಗಿದೆ.;

Update: 2025-05-10 11:40 GMT

ವಿಶ್ವದ ಮೂರು ಪ್ರಮುಖ ಶಕ್ತಿಗಳೆಂದು ಕರೆಸಿಕೊಂಡಿರುವ ಅಮೆರಿಕ, ಚೀನಾ ಮತ್ತು ರಷ್ಯಾ ಪ್ರಸ್ತುತ ಮಿಲಿಟರಿ ಸಂಘರ್ಷದಲ್ಲಿ ಸಿಲುಕಿರುವ ಭಾರತ ಮತ್ತು ಪಾಕಿಸ್ತಾನ ಎರಡರಲ್ಲೂ ಗಣನೀಯವಾಗಿ ಹೂಡಿಕೆ ಮಾಡಿರುವುದು ಒಂದು ಆಶಾದಾಯಕ ಬೆಳವಣಿಗೆ ಎಂದೇ ಹೇಳಬಹುದು. ಆದರೆ, ಉದ್ವಿಗ್ನ ಸ್ಥಿತಿಯಲ್ಲಿ ಈ ಮೂರು ದೇಶಗಳು ಸೇರಿದಂತೆ ಜಗತ್ತನ್ನು ಒಂದು ಇಕ್ಕಟ್ಟಿಗೆ ಸಿಲುಕಿಸಿದೆ ಎಂದರೆ ತಪ್ಪಾಗಲಾರದು.

ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದ ಉಂಟಾದ ಈ ಸಂಘರ್ಷವು ಮುಂದುವರಿಯುತ್ತಿದ್ದರೂ, ಈ ಮೂರು ಸೂಪರ್​ ಪವರ್​ಗಳಿಗೆ ಯಾವುದೇ ಸ್ಪಷ್ಟ ಹೇಳಿಕೆ ನೀಡಲಾಗದೆ ಅಥವಾ ಮತ್ತೊಂದು ಕಡೆಯಿಂದ ಒತ್ತಡ ಹೇರಲಾಗದೆ ತೊಂದರೆಯಲ್ಲಿ ಸಿಲುಕಿವೆ. ದೊಡ್ಡ ಶಕ್ತಿಗಳು ಕೇವಲ ಸಂಯಮದ ಮಾತನ್ನು ಬಿಟ್ಟರೆ ಬೇರೇನನ್ನೂ ಹೇಳುತ್ತಿಲ್ಲ.

ಮಹಾನ್​​ ಶಕ್ತಿಗಳ ಬುದ್ಧಿವಂತಿಕೆ

ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರ ಹೇಳಿಕೆ ಈ ರೀತಿ ಇದೆ. "ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಸಂಘರ್ಷ ನಮಗೆ ಸಂಬಂಧವೇ ಇಲ್ಲದ ವಿಷಯ. ತಮ್ಮ ತಮ್ಮ ಜಗಳವನ್ನು ಅವರವರೇ ಕೊನೆಗಾಣಿಸಿಕೊಳ್ಳಬೇಕು. ಅವರ ಹೇಳಿಕೆ ಅಮೆರಿಕವು ಬಿಕ್ಕಟ್ಟಿನ ಸ್ಥಿತಿಯನ್ನು ಎದುರಿಸುತ್ತಿರುವುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಪಾಕಿಸ್ತಾನ ಮತ್ತು ಇತ್ತೀಚಿನ ವರ್ಷಗಳಲ್ಲಿ ಭಾರತ ಎರಡೂ ಅಮೆರಿಕದ ಮಿತ್ರರಾಷ್ಟ್ರಗಳು. ಎರಡೂ ದೇಶಗಳನ್ನು ಸಂಪೂರ್ಣವಾಗಿ ದೂರವಿಡಲು ಅಮೆರಿಕಕ್ಕೆ ಸಾಧ್ಯವಿಲ್ಲ.

ಪಾಕಿಸ್ತಾನದ ಭೌಗೋಳಿಕ ಪ್ರದೇಶ, ವಿಶೇಷವಾಗಿ ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದಂತೆ ಅಮೆರಿಕಕ್ಕೆ ನಿರ್ಣಾಯಕ ತಾಣ. ಅಫ್ಘಾನಿಸ್ತಾನ ಮೇಲೆ ನಿಯಂತ್ರಣ ಸಾಧಿಸಲು ಅಮೆರಿಕ ನಡೆಸಿರುವ ಎಲ್ಲ ಚಟುವಟಿಕೆಗಳು ಪಾಕಿಸ್ತಾನದ ಮೂಲಕವೇ ನಡೆದಿವೆ, ತಾಲಿಬಾನ್, ಆಫ್ಘನ್​ ನೆಲದಲ್ಲಿ ಅಧಿಕಾರಕ್ಕೆ ಮರಳಿದ ನಂತರ ಈ ಸಂಬಂಧ ಇನ್ನಷ್ಟು ಪ್ರಮುಖ ಎನಿಸಿದೆ. ಇನ್ನೊಂದೆಡೆ ಅಮೆರಿಕವು ಭಾರತದ ಮೇಲಿನ ತನ್ನ ಪ್ರಭಾವ ಕಾಯ್ದುಕೊಳ್ಳಲು ಪಾಕಿಸ್ತಾನದೊಂದಿಗಿನ ತನ್ನ ಸಂಬಂಧವನ್ನು ಒಂದು ಸಾಧನವಾಗಿ ಬಳಸಿಕೊಳ್ಳುತ್ತದೆ. ಭಾರತವು ಇತ್ತೀಚಿನ ದಿನಗಳಲ್ಲಿ ಅಮೆರಿಕಕ್ಕೆ ಸನಿಹವಾಗಿದ್ದರೂ, ರಷ್ಯಾದೊಂದಿಗಿನ ದಶಕಗಳ ಗಾಢ ಸ್ನೇಹ ಮುಂದುವರಿದಿದೆ.

ಇಂಥದ್ದೇ ಪರಿಸ್ಥಿತಿ ರಷ್ಯಾ ಮತ್ತು ಚೀನಾಗಳಿಗೂ ಉಂಟಾಗಿದೆ. ರಷ್ಯಾ- ಭಾರತ ನಡುವಿನ ಸ್ನೇಹ ಸಂಬಂಧವು ಶೀತಲ ಸಮರದ ಕಾಲದಿಂದಲೂ ಸ್ಥಿರವಾಗಿದೆ, ಭಾರತ 1990ರ ದಶಕದಲ್ಲಿ ಅಮೆರಿಕಕ್ಕೆ ಹತ್ತಿರವಾದ ನಂತರವೂ ಹಳೆ ಸಂಬಂಧ ಮಸುಕಾಗಲಿಲ್ಲ.  ರಷ್ಯಾವು ಕೆಲವು ವರ್ಷಗಳಿಂದೀಚೆಗೆ ಪಾಕಿಸ್ತಾನದೊಂದಿಗೆ ಮಿಲಿಟರಿ ವ್ಯಾಪಾರದ ಜತೆಗೆ ಇನ್ನಲವು ಕ್ಷೇತ್ರಗಳಲ್ಲಿ ಹೊಸ ಸಂಬಂಧಗಳನ್ನು ಬೆಳೆಸಿಕೊಂಡಿದೆ.

ಇನ್ನು ಚೀನಾದ ಕತೆ ಈ ಮೂರರಲ್ಲಿ ಗೊಂದಲಕಾರಿಯಾಗಿದ್ದರು. ಇತ್ತೀಚಿನ ವರ್ಷಗಳಲ್ಲಿ ಭಾರತ ಮತ್ತು ಚೀನಾ ನಡುವೆ ದಾಖಲೆಯ ಮಟ್ಟದ ಪರಸ್ಪರ ವ್ಯಾಪಾರ ನಡೆದಿದೆ. ಇದೇ ವೇಳೆ, ಬೆಲ್ಟ್ ಆ್ಯಂಡ್ ರೋಡ್ ಇನಿಷಿಯೇಟಿವ್‌ನ ಭಾಗವಾಗಿ, ಚೀನಾವು ಪಾಕಿಸ್ತಾನದೊಂದಿಗೆ ಆಪ್ತ ಸಂಬಂಧ ಬೆಳೆಸಿಕೊಂಡಿದ್ದು, ದಿನ ಕಳೆದಂತೆ ಇನ್ನಷ್ಟು ಬಲವಾಗುತ್ತಿದೆ ಇತ್ತೀಚಿನ ವರ್ಷಗಳಲ್ಲಿ ಇನ್ನಷ್ಟು ಬಲಪಡಿಸಿಕೊಂಡಿದೆ. ಕಳೆದ ಕೆಲವು ತಿಂಗಳುಗಳಲ್ಲಿ, ಚೀನಾ ಮತ್ತು ಭಾರತ ತಮ್ಮ ದೀರ್ಘಕಾಲದ ಗಡಿ ವಿವಾದದ ಕೆಲವು ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿದೆ. ಈ ಗಡಿಯಲ್ಲಿನ ತ್ವೇಷಮಯ ಸ್ಥಿತಿ ಕಡಿಮೆಯಾಗಿದೆ.

ಪ್ರಸ್ತುತ ಸಂಘರ್ಷದ ಸಮಯದಲ್ಲಿ, ಚೀನಾವು ಪಾಕಿಸ್ತಾನವನ್ನು ಬೆಂಬಲಿಸುವ ನಿರೀಕ್ಷಿತ ಹೇಳಿಕೆಗಳನ್ನು ನೀಡಿದ್ದರೂ, ಸಂಪೂರ್ಣವಾಗಿ ಅದಕ್ಕೆ ಬದ್ಧವಾದಂತೆ ಕಾಣುವುದುಇಲ್ಲ. ಆ ಎರಡೂ ದೇಶಗಳಿಗೆ ಸಂಯಮ ವಹಿಸುವಂತೆ ಕೋರಿದೆ. ಶಿ ಜಿನ್‌ಪಿಂಗ್ ಸರ್ಕಾರವು ಭಾರತದ ಕ್ಷಿಪಣಿ ದಾಳಿಯನ್ನು "ದುರಂತ" ಎಂದು ಹೇಳಿದರೂ ಪರಿಸ್ಥಿತಿಯನ್ನು ಶಾಂತಗೊಳಿಸಲು ರಚನಾತ್ಮಕ ಪಾತ್ರ ವಹಿಸಲು ಸಿದ್ಧ ಎಂದು ತಿಳಿಸಿದೆ.

 ಸಂಯಮದ ಕರೆ ಮತ್ತು ಭಾರತದ ದೃಢ ನಿಲುವು

ಮೂರು ದೊಡ್ಡ ಶಕ್ತಿಗಳು ಎರಡೂ ದೇಶಗಳಿಗೆ ಹತ್ತಿರವಿರುವುದು ಹಾಗೂ ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿರುವುದು ಈ ಸಂಘರ್ಷವು ಹೆಚ್ಚಾಗದಿರಲಿ ಎಂದು ಬಯಸುವವರಿಗೆ ಆಶಾದಾಯಕ ಸಂಗತಿ. ಆದಾಗ್ಯೂ, ಸಂಘರ್ಷದ ಕಾರಣ ಎಲ್ಲ ದೇಶಗಳಿಗೂ ಗೊತ್ತಿದೆ. ಪಹಲ್ಗಾಮ್‌ನಲ್ಲಿ ನಡೆದ ನಿರಪರಾಧಿಗಳ ಹತ್ಯೆಯ ಬಗ್ಗೆ ಭಾರತಕ್ಕೆ ಎಷ್ಟು ಕೋಪವಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಆ ದೇಶಗಳಿಗೆ ದೊಡ್ಡ ಸಂಶೋಧನೆ ಏನೂ ಬೇಕಾಗಿಲ್ಲ. ಈ ಹತ್ಯೆಗಳಲ್ಲಿ ತನ್ನ ಇಲ್ಲ ಎಂದು ಪಾಕಿಸ್ತಾನವು ಹೇಳುತ್ತಿದ್ದು, ಅದಕ್ಕೆ ಸಾಕ್ಷಿ ಕೇಳುತ್ತಿದೆ. ಭಾರತವು ಮುಂಬೈ ದಾಳಿ ಮತ್ತು ಸಂಸತ್ ಭವನದ ಮೇಲಿನ ದಾಳಿಯಂತಹ ಹಿಂದಿನ ಘಟನೆಗಳ ಆಧಾರದ ಮೇಲೆ ತನ್ನ ನಿಲುವನ್ನು ಗಟ್ಟಿಯಾಗಿ ಪ್ರತಿಪಾದಿಸಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವಿಶೇಷ ಅಧಿವೇಶನದಲ್ಲಿ ಯಾವುದೇ ನಿರ್ಣಯಕ್ಕೆ ಬರಲಾಗಲಿಲ್ಲಲ. ಅದು ಕೂಡ ಸಮಾಧಾನದ ಮಾತುಗಳಿಗೆ ಸೀಮಿತವಾಯಿತು. ಈ ಜಾಗತಿಕ ಇಕ್ಕಟ್ಟನ್ನು ಸೂಕ್ತ ಉದಾಹರಣೆ.

ಮೋದಿ ಸರ್ಕಾರವು. ಪಹಲ್ಗಾಮ್ ಹತ್ಯೆಯೇ ಈ ಉದ್ವಿಗ್ನ ಸ್ಥಿತಿಗೆ ಮೂಲ. ನಮ್ಮಿಂದ ಯಾವುದೇ ತಪ್ಪಾಗಿಲ್ಲ ಎಂಬ ನಿಲುವಿಗೆ ಬದ್ಧವಾಗಿದೆ. ಭಯೋತ್ಪಾದನೆ ಮತ್ತು ಭಯೋತ್ಪಾದಕ ಕೃತ್ಯಗಳಿಂದ ಬೇಸತ್ತಿರುವ ವಿಶ್ವವು ಈ ನಿಲುವನ್ನು ವಿರೋಧಿಸಲು ಖಂಡಿತಾ ಸಾಧ್ಯವಾಗಿಲ್ಲ.

ಜಾಗತಿಕ ಪ್ರಭಾವದ ಇತಿಹಾಸ ಮತ್ತು ವರ್ತಮಾನ

ಕಳೆದ ಮೂರು ದಶಕಗಳಲ್ಲಿ, ಅಮೆರಿಕವು ಈ ಎರಡು ಪರಮಾಣು ಶಕ್ತಿ ಹೊಂದಿರುವ ರಾಷ್ಟ್ರಗಳ ಮೇಲಿನ ತನ್ನ ರಾಜತಾಂತ್ರಿಕ ಪ್ರಭಾವ ಬಳಸಿ ಯುದ್ಧಗಳನ್ನು ತಪ್ಪಿಸಿದೆ. 1999ರ ಕಾರ್ಗಿಲ್ ಯುದ್ಧವು ಸೀಮಿತವಾಗಿ ಉಳಿಯಲು ಬಿಲ್ ಕ್ಲಿಂಟನ್ ಆಡಳಿತ ಕಾರಣವಾಗಿತ್ತು. ಪಾಕಿಸ್ತಾನದೊಂದಿಗೆ ಸೇರಿ ಕೆಲಸ ಮಾಡಿ ಯುದ್ಧವನ್ನು ಕೊನೆಗೊಳಿಸಿತ್ತು. .

ಬುಶ್​ ಪ್ರಯತ್ನವೂ ಇದೆ

ಡಿಸೆಂಬರ್ 2001ರಲ್ಲಿ ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳು ಭಾರತದ ಸಂಸತ್ ಭವನದ ಮೇಲೆ ದಾಳಿ ನಡೆಸಿದಾಗ, ಎರಡೂ ದೇಶಗಳ ಸೇನೆಗಳು ಗಡಿಯಲ್ಲಿ ಸಜ್ಜಾಗಿದ್ದವು. ಆಗ ಜಾರ್ಜ್ ಡಬ್ಲ್ಯೂ. ಬುಷ್ ಆಡಳಿತವು ಮಧ್ಯಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಿತು. 2008ರ ಮುಂಬೈ ದಾಳಿಯ ನಂತರವೂ ಇದೇ ಪರಿಸ್ಥಿತಿ ಇತ್ತು; ಅಜ್ಮಲ್ ಕಸಾಬ್‌ನ ಬಂಧನವು ಪಾಕಿಸ್ತಾನದ ಪಾತ್ರವನ್ನು ಸ್ಪಷ್ಟಪಡಿಸಿತು, ಆಗ ಪಾಕಿಸ್ತಾನವು ಭಾರತದೊಂದಿಗೆ ಸ್ವಲ್ಪ ಮಟ್ಟಿಗೆ ಸಹಕರಿಸಿತು. ಅಮೆರಿಕ ಮತ್ತೊಮ್ಮೆ ಮಧ್ಯವರ್ತಿಯಾಗಿ ಯುದ್ಧವನ್ನು ತಪ್ಪಿಸಿತು.

2019ರ ಪುಲ್ವಾಮಾ ದಾಳಿಯ ನಂತರ, ಕಳೆದ ಮೂರು ದಶಕಗಳಲ್ಲಿ ಮೊದಲ ಬಾರಿಗೆ ಅಮೆರಿಕವು ಭಾರತವನ್ನು ಪಾಕಿಸ್ತಾನದ ವಿರುದ್ಧ ಕಾರ್ಯನಿರ್ವಹಿಸದಂತೆ ತಡೆಯಲು ವಿಫಲವಾಯಿತು. ಆದಾಗ್ಯೂ, ಬಾಲಕೋಟ್ ದಾಳಿಯು ಸೀಮಿತವಾಗಿತ್ತು, ಕೇವಲ ಗುಂಡಿನ ಚಕಮಕಿ ಮತ್ತು ಒಬ್ಬ ಪೈಲಟ್‌ನ ಬಂಧನದೊಂದಿಗೆ ಕೊನೆಗೊಂಡಿತು. ಆಗಿನ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್‌ರ ಸೌಹಾರ್ದದಿಂದ ಪೈಲಟ್ ಅಭಿನಂದನ್ ವರ್ಧಮಾನ್‌ನನ್ನು ಬಿಡುಗಡೆ ಮಾಡಿದ್ದು ಪರಿಸ್ಥಿತಿಯನ್ನು ಸಂಪೂರ್ಣವಾಗಿ ತಿಳಿಗೊಳಿಸಿತು.

ಜಾಗತಿಕ ಸಂಧಾನಕ್ಕೆ ಕಿಮ್ಮತ್ತಿಲ್ಲ 

ಪಹಲ್ಗಾಮ್ ದಾಳಿಯ ನಂತರದ ಪ್ರಸ್ತುತ ಮಿಲಿಟರಿ ಸಂಘರ್ಷವು ಭಾರತದ ದೃಢವಾದ ನಿಲುವನ್ನು ಮತ್ತು ಎರಡೂ ದೇಶಗಳ ಮೇಲಿನ ಬಾಹ್ಯ ಶಕ್ತಿಗಳ ಪ್ರಭಾವ ಕಡಿಮೆಯಾಗಿರುವುದಕ್ಕೆ ಸೂಚಕ. ಮುಖ್ಯವಾಗಿ, ಪ್ರಸ್ತುತ ಸಂಘರ್ಷವು ವಿಶ್ವಸಂಸ್ಥೆಯಂತಹ ಪ್ರಮುಖ ಸಂಸ್ಥೆಗಳ ತೂಕ ಮತ್ತು ವಿಶ್ವಾಸಾರ್ಹತೆಯ ಕೊರತೆಯನ್ನೂ ಎತ್ತಿ ತೋರಿಸಿದೆ. ಇಂತಹ ಬಿಕ್ಕಟ್ಟುಗಳನ್ನು ತಡೆಯುವುದೇ ಇವುಗಳ ಉದ್ದೇಶವಾಗಿದ್ದರೂ ಅದರು ಕೈಗೂಡುತ್ತಿಲ್ಲ. ಗಾಜಾದಲ್ಲಿ ಇಸ್ರೇಲ್ ನಡೆಸಿದ ಕೃತ್ಯಗಳು (ಕೆಲವರಿಂದ ಜನಾಂಗೀಯ ನಿರ್ಮೂಲನೆ ಎಂದು ಕರೆಯಲ್ಪಟ್ಟಿವೆ) ಮತ್ತು ಯುಕ್ರೇನ್-ರಷ್ಯಾ ಯುದ್ಧ ತಡೆಯುವಲ್ಲಿ ಎದುರಿಸಿದ ಅಸಮರ್ಥತೆಯಿಂದಾಗಿ ವಿಶ್ವಸಂಸ್ಥೆಯ ಶಕ್ತಿ ಬಯಲಾಗಿದೆ. ಜತೆಗೆ ಜಾಗತಿಕ ಶಕ್ತಿಗಗಳು ಈ ವಿಚಾರದಲ್ಲಿ ರಾಜಿ ಮಾಡಿಕೊಂಡಿವೆ ಹಾಗೂ ವಿಶ್ವಾಸಾರ್ಹತೆ ಕಳೆದುಕೊಂಡಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. .

ಭಾರತ-ಪಾಕಿಸ್ತಾನ ಸಂಘರ್ಷವು ಗಾಜಾ ಮತ್ತು ಯುಕ್ರೇನ್‌ಗಿಂತ ಭಿನ್ನವಾಗಿದೆ. ಇದರಲ್ಲಿ ಯಾವುದೇ ದೊಡ್ಡ ಶಕ್ತಿಯ ನೇರ ಹಿತಾಸಕ್ತಿ ಅಥವಾ ಪಾಲ್ಗೊಳ್ಳುವಿಕೆ ಇಲ್ಲ. ಹೀಗಾಗಿ ಆಶಾದಾಯಕವಾಗಿ, ರಾಜತಾಂತ್ರಿಕತೆಗೆ ಉತ್ತಮ ಫಲಿತಾಂಶಗಳನ್ನು ನೀಡಬಹುದು ನಿರೀಕ್ಷಿಸಬಹುದು.

Tags:    

Similar News