Caste survey : ʼಪವರ್‌ʼ ಕಳೆದುಕೊಳ್ಳಲಿವೆಯಾ ಪ್ರಬಲ ಸಮುದಾಯಗಳು?

Caste survey : ಜಾತಿ ಸಮೀಕ್ಷೆಯ ಕುರಿತು ಅಪಸ್ವರ ಎತ್ತಿರುವ ಸಿದ್ದಗಂಗಾ ಮಠದ ಶ್ರೀಗಳು ಇದರ ವೈಜ್ಞಾನಿಕತೆಯ ಕುರಿತು ಪ್ರಶ್ನೆ ಎತ್ತಿದ್ದಾರೆ. ಸಮೀಕ್ಷೆಯ ಭಾಗವಾಗಿ ಯಾರೂ ಕೂಡ ತಮ್ಮ ಬಳಿ ಬಂದು ಮಾಹಿತಿಯನ್ನು ಪಡೆದುಕೊಂಡಿಲ್ಲ ಎಂದಿದ್ದಾರೆ.;

Update: 2025-01-11 09:52 GMT
ಬಸವ ಜಯ ಮೃತ್ಯುಂಜಯ ಸ್ವಾಮೀಜಿ.

ಕರ್ನಾಟಕದಲ್ಲಿ ಇಲ್ಲಿಯವರೆಗೆ ʼʼಜಾತಿ ಸಮೀಕ್ಷೆ-2024ʼʼ( ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ವರದಿ) ದತ್ತಾಂಶಗಳನ್ನು ಬಿಡುಗಡೆ ಮಾಡಲಾಗಿಲ್ಲ. ಈ ವರದಿಯಲ್ಲಿನ ಅಂಶಗಳು ಇದೀಗ ರಾಜ್ಯದ ಬಹುತೇಕ ಜಾತಿಗಳಿಗೆ ಕುತೂಹಲವನ್ನು ಹುಟ್ಟಿಸಿದೆ.

ಪ್ರಬಲ ಜಾತಿಗಳನ್ನು ಆತಂಕಕ್ಕೆ ದೂಡಿದ ದತ್ತಾಂಶಗಳು

ಸುಮಾರು 7 ಕೋಟಿ ಜನಸಂಖ್ಯೆ ಹೊಂದಿರುವ ಕರ್ನಾಟಕದಲ್ಲಿ, ಪ್ರಬಲ ಜಾತಿಗಳ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿರುವ ಒಕ್ಕಲಿಗ ಹಾಗೂ ಲಿಂಗಾಯಿತ ಸಮುದಾಯಗಳಿಗೆ ಜಾತಿ ಸಮೀಕ್ಷೆಯಲ್ಲಿ ವರದಿ ಆತಂಕಕ್ಕೆ ದೂಡಿವೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಸದ್ಯ ಎರಡು ಜಾತಿಗಳು ಒಟ್ಟಾರೆ ಜನಸಂಖ್ಯೆಯಲ್ಲಿ ಕ್ರಮೇಣ ಶೇ.17 ಹಾಗೂ ಶೇ.14 ರಷ್ಟನ್ನು ಒಳಗೊಂಡಿವೆ ಎಂದು ಹೇಳಲಾಗುತ್ತದೆ. ಆದರೆ ಸದ್ಯದ ಹೊಸ ವರದಿಗಳ ದತ್ತಾಂಶ ಪ್ರಕಟಗೊಂಡಲ್ಲಿ ಇದು ಶೇ.10ಕ್ಕೆ ಇಳಿಯುವ ಸಾಧ್ಯತೆಗಳು ದಟ್ಟವಾಗಿವೆ ಎನ್ನಲಾಗಿದೆ. ಇನ್ನೊಂದೆಡೆ ಮುಸ್ಲಿಂ ಸಮುದಾಯವನ್ನು ಒಳಗೊಂಡಂತೆ, ಜಾತಿ ಗಣತಿ ಸಮೀಕ್ಷೆಯ ವರದಿಯನ್ನು ಆದಷ್ಟು ಬೇಗ ಬಿಡುಗಡೆಗೊಳಿಸಬೇಕು ಎಂದು, ಪರಿಶಿಷ್ಟ ಜಾತಿಯ ನಾಯಕತ್ವವನ್ನು ಹೊಂದಿರುವ ಗುಂಪುಗಳು ಒಕ್ಕೂರಲಿನಿಂದ ಬೇಡಿಕೆಯಿಟ್ಟಿವೆ.

ಜಾತಿ ಸಮೀಕ್ಷೆ ದತ್ತಾಂಶಗಳು ಬೆಳಕಿಗೆ ಬರುವ ಮುನ್ನವೇ ಅದನ್ನು ತಡೆಹಿಡಿಯುವ ಪ್ರಬಲ ಜಾತಿಗಳ ಪ್ರಯತ್ನಗಳು ಸದ್ಯದ ಬೆಳವಣಿಗೆಯಲ್ಲಿ ಖಂಡಿತ ಅಚ್ಚರಿ ಎನ್ನಿಸುವುದಿಲ್ಲ. ಈ ಸಂಖ್ಯೆಗಳು ಪ್ರಬಲ ಜಾತಿಗಳನ್ನು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಕುಗ್ಗಿಸುತ್ತದೆಯೆ? ಖಂಡಿತವಾಗಿಯೂ ಇಲ್ಲ. ರಾಜಕೀಯವಾಗಿ ಅವರ ಬಲದ ಮೇಲೆ ಕೊಂಚ ಪರಿಣಾಮ ಬೀರುವುದರ ಮೂಲಕ ಮೀಸಲಾತಿಯ ಮೇಲಿನ ಹಕ್ಕನ್ನು ಇನ್ನಷ್ಟು ದುರ್ಬಲಗೊಳಿಸಬಹುದು.

ʼಜಾತಿ ಸಮೀಕ್ಷೆ-2024ʼʼ ವರದಿಗೆ ವೈಜ್ಞಾನಿಕತೆಯ ಸವಾಲು

ಜಾತಿ ಸಮೀಕ್ಷೆಯ ಕುರಿತು ಅಪಸ್ವರ ಎತ್ತಿರುವ ಸಿದ್ದಗಂಗಾ ಮಠದ ಶ್ರೀಗಳು ಇದರ ವೈಜ್ಞಾನಿಕತೆಯ ಕುರಿತು ಪ್ರಶ್ನೆ ಎತ್ತಿದ್ದಾರೆ. ಸಮೀಕ್ಷೆಯ ಭಾಗವಾಗಿ ಯಾರೂ ಕೂಡ ತಮ್ಮ ಬಳಿ ಬಂದು ಮಾಹಿತಿಯನ್ನು ಪಡೆದುಕೊಂಡಿಲ್ಲ ಎಂದಿದ್ದಾರೆ. ಪ್ರಬಲ ಲಿಂಗಾಯತ-ವೀರಶೈವ ಮಹಾಸಭಾ ಕೂಡ 'ವೈಜ್ಞಾನಿಕ' ಸಮೀಕ್ಷೆಗೆ ಒತ್ತಾಯಿಸಿ ಬೇಡಿಕೆಯನ್ನಿಟ್ಟಿದೆ. ಅಷ್ಟೇ ಅಲ್ಲದೆ ಈ ಗಣತಿಯ ವೇಳೆ ಉಪ-ಜಾತಿ ವಿವರಗಳನ್ನು ನಮೂದಿಸದಂತೆ ನಿರ್ದೇಶನ ನೀಡಿದ್ದು, ಗಣತಿಯ ಫಾರಂಗಳಲ್ಲಿ 'ವೀರಶೈವ ಲಿಂಗಾಯತ' ಎಂದಷ್ಟೆ ಬಳಸುವಂತೆ ಕಟ್ಟಾಜ್ಞೆಯನ್ನು ಕೂಡ ಹೊರಡಿಸಿದಂತಿದೆ.

ರಾಜ್ಯದಲ್ಲಿ ಅತಿದೊಡ್ಡ ಲಿಂಗಾಯತ ಉಪಜಾತಿಯಾದ ಪಂಚಮಸಾಲಿಗಳನ್ನು 'ತುಲನಾತ್ಮಕವಾಗಿ ಹಿಂದುಳಿದ' ವರ್ಗ ಎಂದು ವರ್ಗೀಕರಿಸಲು ಯತ್ನಗಳು ನಡೆಯುತ್ತಿವೆ. ಪಂಚಮಸಾಲಿ ಗುರುಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರ ನೇತೃತ್ವದಲ್ಲಿ ಶೇ.5 ರಷ್ಟು ಮೀಸಲಾತಿ ಕೋರಿ ಉಗ್ರ ಹೋರಾಟಗಳು ನಡೆಯುತ್ತಲೇ ಬಂದಿವೆ. ಇದು ಒಟ್ಟು 32 ಪ್ರತಿಶತ OBC ಮೀಸಲಾತಿಯಲ್ಲಿ 15 ಪ್ರತಿಶತವನ್ನು ನಿಗದಿಪಡಿಸಲಾಗಿದೆ. ಪ್ರಸ್ತುತ, ಅವರು ಇತರ ಲಿಂಗಾಯತರೊಂದಿಗೆ ತುಲನಾತ್ಮಕವಾಗಿ ಹಿಂದುಳಿದವರು ಎಂದು ಗುರುತಿಸಲ್ಪಟ್ಟಿದ್ದಾರೆ. ಜನಸಂಖ್ಯೆ ಮತ್ತು ರಾಜಕೀಯ ಪ್ರಾಮುಖ್ಯತೆಯಲ್ಲಿ ಮೂರನೇ ಪ್ರಮುಖ ಸಮುದಾಯವಾದ ಕುರುಬರು ಪರಿಶಿಷ್ಟ ಪಂಗಡವಾಗಿ (3 ಶೇಕಡಾ ಮೀಸಲಾತಿಯೊಂದಿಗೆ) ಮರುವರ್ಗೀಕರಣಗೊಳ್ಳಲು ಬಯಸುತ್ತಿದೆ. ಈ ಸಮುದಾಯವು ಇದೀಗ ರಾಜ್ಯದಲ್ಲಿ ಹೆಚ್ಚು ಹಿಂದುಳಿದ ವರ್ಗವಾಗಿ (15 ಪ್ರತಿಶತ ಮೀಸಲಾತಿಯೊಂದಿಗೆ) ಇದೆ.

ಸಮುದಾಯದ ಜನಸಂಖ್ಯೆ ಹೆಚ್ಚಳಕ್ಕೆ ರಾಘವೇಶ್ವರ ಭಾರತಿ ಶ್ರೀ ಕರೆ

ಇತ್ತೀಚಿಗೆ ಬೆಂಗಳೂರಿನಲ್ಲಿ ಅಖಿಲ ಹವ್ಯಕ ಮಹಾಸಭಾದಿಂದ ಆಯೋಜನೆಗೊಂಡಿದ್ದ ಕರ್ನಾಟಕ ಹವ್ಯಕ ಸಮ್ಮೇಳನದಲ್ಲಿ ಭಾಗವಹಿಸಿದ್ದ,ರಾಘವೇಶ್ವರ ಭಾರತಿ ಶ್ರೀಸ್ವಾಮೀಜಿಗಳು ಹವ್ಯಕ ಸಮುದಾಯದಲ್ಲಿ ಕಡಿಮೆ ಜನಸಂಖ್ಯೆ ಕುರಿತು ವಿಷಾದ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೆ ಸಮುದಾಯದ ಯುವ ಜನರು ಮದುವೆ ಹಾಗೂ ಪೋಷಕತ್ವದ ಜವಾಬ್ದಾರಿಯಿಂದ ದೂರವಾಗುತ್ತಿದ್ದಾರೆ. ಜೊತೆಗೆ ಒಂದೇ ಮಗು ಎಂಬ ನಿರ್ಧಾರಕ್ಕೆ ಬರುತ್ತಿದ್ದಾರೆ. ಈ ಸಂದರ್ಭದಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚಿನ ಮಕ್ಕಳನ್ನು ಹೆರುವ ಮಹಿಳೆಯರಿಗೆ ʼʼವೀರ ಮಾತಾʼʼ ಎಂಬ ಪ್ರಶಸ್ತಿ ನೀಡುವುದಾಗಿ ಘೋಷಿಸಿದ್ದು, ನಮ್ಮ ಬಳಿ ಸಾಕಷ್ಟು ಜನಸಂಖ್ಯೆಯ ಕೊರತೆಯಿಂದ ನಾವು ರಾಜಕೀಯವಾಗಿ ಹಿಂದುಳಿದಿರುವುದಾಗಿ ಹೇಳಿದರು.

2022 ರಲ್ಲಿ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಚಿತ್ರದುರ್ಗದ ಶಿವಶರಣ ಮಾದಾರ ಚನ್ನಯ್ಯ ಮಠಕ್ಕೆ ಭೇಟಿ ನೀಡಿದ್ದರು. ಆ ಮೂಲಕ ಮಠಾಧೀಶರಾದ ಬಸವಮೂರ್ತಿ ಮಾದಾರ ಚನ್ನಯ್ಯ ಅವರು ತಮ್ಮ ರಾಜಕೀಯ ಗುರಿಯನ್ನು ಈ ಈ ಹಿಂದೆಯೇ ಸಾರ್ವಜನಿಕವಾಗಿ ಬಹಿರಂಗಗೊಳಿಸಿದ್ದರು. ಸಮುದಾಯದ ಸಂಖ್ಯೆಗಳು ಕುಟುಂಬ/ಕುಲದ ಸಂತಾನೋತ್ಪತ್ತಿಯ ಕಾರ್ಯಗಳನ್ನು ವಿಸ್ತರಣೆ ಮಾಡುವಂತ ಬೇಜವಾಬ್ದಾರಿಯ ಘೋಷಣೆಗಳಿಗೆ ಸೀಮಿತಗೊಂಡಿಲ್ಲ. ಅಳವಿನಂಚಿನಲ್ಲಿರುವ ಸಮುದಾಯಗಳು ಭಿನ್ನ ರೂಪಗಳನ್ನು ಪಡೆದುಕೊಂಡು ಹಿಂದೂ ಎಲ್ಲ ಒಂದು ಎಂಬ ಆಶಯದಡಿಯಲ್ಲಿ ಒಂದಾಗುತ್ತಿವೆ.

ತಾರತಮ್ಯ, ಅಸಮಾನತೆಯ ನಡುವೆ ಅಖಂಡ ಹಿಂದೂ ರಾಷ್ಟ್ರದ ಕೂಗು

ಕರ್ನಾಟಕದಲ್ಲಿ ಮಾದಿಗರು ನಿತ್ಯ ಅನುಭವಿಸುತ್ತಿರುವ ಅಸಮಾನತೆಗಳು, ತಾರತಮ್ಯ ಮತ್ತು ಸಾಮಾಜಿಕ ಅನ್ಯಾಯಗಳ ಬಗ್ಗೆ ತಾಳ್ಮೆಯಿಂದಿರಿ. "ಇದು ಕೇವಲ ಸಮಯದ ವಿಷಯವಾಗಿದೆ," ಭಾಗವತ್‌ಅವರು ಸ್ವಾಮೀಜಿಗೆ ಹೇಳಿದ್ದರು. ಆದರೆ ಈ ಮಾತನ್ನು ಹೇಳಿ ಅಲ್ಲಿಂದ "ಅವರು ಕಣ್ಮರೆಯಾಗುವ ಮೊದಲು" ಸಮಾಜವನ್ನು ಅರಿತುಕೊಂಡು ಸರಿಪಡಿಸಲು, ಯಾವ ಪ್ರಕ್ರಿಯೆ, ಶಾಸನ ಅಥವಾ ಸಾಮಾಜಿಕ ಚಳುವಳಿ ಸಹಾಯ ಮಾಡುತ್ತದೆ ಪ್ರಮಾಣಿಕ ಭರವಸೆಯನ್ನು ನೀಡಲಿಲ್ಲ. ಆದರೆ ಹಿರಿಯ ಆರ್‌ಎಸ್‌ಎಸ್‌ನಾಯಕರ ಮಾತುಗಳಲ್ಲಿ ಸ್ಪಷ್ಟತೆ ಪ್ರಜ್ವಲಿಸುತ್ತಿರುವುದನ್ನು ನಾವಿಲ್ಲಿ ಕಾಣಬಹುದು. ಹೌದು ದಲಿತರ ಎದುರಿಸುತ್ತಿರುವ ಅವಮಾನಗಳು ಹಾಗೂ ಶೋಷಣೆಗಳಿಗಿಂತ ಹಿಂದೂ ನಾವೆಲ್ಲ ಒಂದು ಎಂಬ ಏಕತೆಯ ಘೋಷ ವಾಖ್ಯ ಪ್ರಮುಖವಾಗಿತ್ತು.

2 ವರ್ಷಗಳ ಬಳಿಕ ನಡೆದ ಕೆಲವು ಘಟನೆಗಳು, ದಲಿತರ ಮೇಲಿನ ಅವಮಾನಗಳು ಮಾದಾರ ಚೆನ್ನಯ್ಯ ಶ್ರೀಗಳ ಮನ: ಪರಿವರ್ತನೆಯನ್ನು ಮಾಡಿತೇ ಎಂಬುದು ಇನ್ನು ನಿಗೂಢವಾಗಿಯೇ ಉಳಿದುಕೊಂಡಿದೆ. ಇದಕ್ಕೆ ಕಾರಣ ಎಂಬಂತೆ ಹೊಸಪೇಟೆಯಲ್ಲಿ ಮತಾಂತರ ಕುರಿತು ನೀಡಿದ ಹೇಳಿಕೆಯನ್ನು ಇಲ್ಲಿ ಸ್ಮರಿಸಬಹುದು.

ಮುರುಘಾ ಮಠದ ಸ್ವಾಮಿಗಳ ಪ್ರಭಾವದಿಂದ ಮಾದಿಗ ಮಠದ ಪೀಠಾಧ್ಯಕ್ಷರಾಗಿದ್ದ ಮಾದಾರ ಚೆನ್ನಯ್ಯ ಶ್ರೀಗಳು ರಾಜಕೀಯ ಪ್ರಾಬಲ್ಯ ಸಾಧಿಸಿದ್ದರೂ, ಕೂಡ ತಮ್ಮನ್ನು ತಾವು ಪರೋಕ್ಷವಾಗಿ ಪೇಜಾವರ ಮಠದ ಸ್ವಾಮೀಜಿಯ ಅನುಯಾಯಿಯಾಗಿ ಬಿಂಬಿಸಿಕೊಂಡಿದ್ದಾರೆ. ಜಾತಿ ವಿಷಯಗಳು ಮನೆಗೆ ಸೀಮಿತವಾಗಿರಬೇಕು ಎನ್ನುವ ಸ್ವಾಮಿಗಳು, ದೇವಾಲಯ ಪ್ರವೇಶ, ಸಾರ್ವಜನಿಕ ಅವಮಾನ ಮತ್ತು ರಾಜಕೀಯ ಪ್ರಾತಿನಿಧ್ಯದ ವಿಷಯಗಳಲ್ಲಿ ದಲಿತರ ತಾರತಮ್ಯವನ್ನು ಕಂಡರೂ ಕೂಡ ಅದರ ಮುಂದೆ ಅಖಂಡ ಹಿಂದೂ ರಾಷ್ಟ್ರದ ಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಹುಟ್ಟಿನಿಂದಲೇ ಬಳುವಳಿಯಾಗಿ ಬಂದ ಅಸಮಾನತೆ, ತಾರತಮ್ಯ

ಆಧ್ಯಾತ್ಮಿಕ ನಾಯಕನ ಪಟ್ಟ ತ್ಯಜಿಸಿ ನ್ಯಾಯ ಸಮಾನತೆಯೆಯ ಹಾದಿ ತುಳಿದ ವಿಶ್ವಗುರು ಬಸವಣ್ಣನವರ ಕಾಳಜಿಯನ್ನು ಅರ್ಥಮಾಡಿಕೊಳ್ಳುವುದರಲ್ಲಿ ಸಂದೇಹವೇನಿಲ್ಲ. ಪ್ರಾಯಶಃ ಇದು ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಜಾತಿಗಳ ನಡುವಿನ ದೊಡ್ಡ ದೌರ್ಬಲ್ಯವನ್ನು ಗುರುತಿಸಿ, ಅವರು ಎದುರಿಸುತ್ತಿರುವ ದಬ್ಬಾಳಿಕೆಯ ವಿರುದ್ಧ ಹೋರಾಡಲು ಸಣ್ಣ ಸಮುದಾಯಗಳನ್ನು ಒಟ್ಟುಗೂಡಿಸಲು, ಬೇಲಿಮಠದ ಶಿವರುದ್ರ ಸ್ವಾಮೀಜಿಗಳು ಭಿನ್ನ ರೀತಿಯ ಏಕತೆಯನ್ನು ಸೃಷ್ಟಿಸಲು ಕರೆ ನೀಡಿದರು.

ಘನತೆ ಅಥವಾ ಹಿಂದೂ ರಾಷ್ಟ್ರೀಯತೆಯ ಶರಣಾಗತಿಯ (ತಾತ್ಕಾಲಿಕವಾಗಿ ಮಾತ್ರ) ಹೋರಾಟಕ್ಕಾಗಿ - ಇವುಗಳಲ್ಲಿ ಏಕತೆಯ ಕರೆಗಳಲ್ಲಿ ಯಾವುದು ಅಂತಿಮವಾಗಿ ಜಯಗಳಿಸುತ್ತದೆ ಎಂಬುದು ಅನಿಶ್ಚಿತತೆಯಿಂದ ಕೂಡಿದೆ. ವಿರೋಧಾತ್ಮಕ ಎಳೆತಗಳು ಶತಮಾನಗಳಿಂದ ಮೂಲಭೂತವಾಗಿ ವಿಭಜಿತ ಧಾರ್ಮಿಕ ಸಂಪ್ರದಾಯದ ಪುನರಾವರ್ತಿತ ಲಕ್ಷಣವಾಗಿದೆ ಎಂಬುದು ಇಲ್ಲಿ ಸ್ಪಷ್ಟವಾಗಿದೆ.

ಕನ್ನಡದ ಖ್ಯಾತ ಬರಹಗಾರ ಪಿ. ಲಂಕೇಶ್ ಹೇಳುವಂತೆ, ʼʼಮನುಷ್ಯನ ಸ್ಥಾನಮಾನವನ್ನು ಹುಟ್ಟಿನಿಂದ ನಿರ್ಧರಿಸುವುದನ್ನು ನೋಡಿ ಬುದ್ಧನು ದುಃಖಿತನಾಗಿದ್ದನುʼʼ ಸಾವಿರಾರು ವರ್ಷಗಳ ಹಿಂದೆ ಬುದ್ಧನು ಕಂಡ ಈ ಅನ್ಯಾಯವು ಇನ್ನೂ ಮುಂದುವರಿದಿದೆ ಎಂಬುದು ಈ ಕಾಲದ ಸಾರ್ವಕಾಲಿಕ ಸತ್ಯವೇ ಸರಿ.!  

Tags:    

Similar News