ರಷ್ಯಾದಲ್ಲಿ ಎಲ್‌ ಜಿಬಿಟಿ ಚಳವಳಿ ನಿಷೇಧ

ಸುಪ್ರೀಂ ಕೋರ್ಟ್‌ ಆದೇಶದ ನಂತರ, ಎಲ್‌ ಜಿಬಿಟಿ ಜನರ ಪ್ರತಿನಿಧಿಗಳು ಬಂಧನ ಮತ್ತು ಇತರ ಕಾನೂನು ಕ್ರಮಗಳಿಗೆ ಭಯಪಡುತ್ತಿದ್ದಾರೆ.;

Update: 2024-02-05 06:30 GMT

ರಷ್ಯಾದ ಸರ್ವೋಚ್ಚ ನ್ಯಾಯಾಲಯವು ʼಅಂತರರಾಷ್ಟ್ರೀಯ ಎಲ್‌ ಜಿಬಿಟಿ (LGBT) ಚಳವಳಿಯ ಮೇಲೆ ನಿಷೇಧ ಹೇರಿದೆ ಮತ್ತು ಅದರ ಎಲ್‌ ಜಿಬಿಟಿ ಕಾರ್ಯಕರ್ತರನ್ನು ʼಉಗ್ರಗಾಮಿʼಗಳೆಂದು ಕರೆಯುವಂತೆ ಸೂಚಿಸಿದೆ. ಸುಪ್ರೀಂ ಕೋರ್ಟ್‌ ಆದೇಶದ ನಂತರ, ಎಲ್‌ ಜಿಬಿಟಿ ಜನರ ಪ್ರತಿನಿಧಿಗಳು ಬಂಧನ ಮತ್ತು ಇತರ ಕಾನೂನು ಕ್ರಮಗಳಿಗೆ ಭಯಪಡುತ್ತಿದ್ದಾರೆ.

ʼಅಂತರರಾಷ್ಟ್ರೀಯ ಎಲ್‌ ಜಿಬಿಟಿ ಸಾಮಾಜಿಕ ಚಳವಳಿʼ ಎಂದು ಕರೆಯುವುದನ್ನು ನಿಷೇಧಿಸಲು ರಷ್ಯಾದ ಕಾನೂನು ಸಚಿವಾಲಯದ ವಿನಂತಿಯನ್ನು ಅನುಮೋದಿಸಿದ್ದೇವೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಈ ಆದೇಶದಿಂದ ವ್ಯಕ್ತಿಗಳು ಅಥವಾ ಗುಂಪುಗಳ ಮೇಲೆ ಪರಿಣಾಮ ಬೀರುವ ಬಗ್ಗೆ ನ್ಯಾಯಾಲಯ ಏನನ್ನೂ ಹೇಳಿಲ್ಲ.

“ಅಂತರರಾಷ್ಟ್ರೀಯ ಎಲ್‌ ಜಿಬಿಟಿ ಸಾರ್ವಜನಿಕ ಚಳವಳಿ ಮತ್ತು ಅದರ ಉಪವಿಭಾಗಗಳನ್ನು ಉಗ್ರಗಾಮಿಗಳು” ಎಂದು ನ್ಯಾಯಾಧೀಶರು ತೀರ್ಪು ನೀಡಿದರು ಮತ್ತು "ರಷ್ಯಾದಲ್ಲಿ ಚಟುವಟಿಕೆಗಳ ಮೇಲೆ ನಿಷೇಧʼʼ ಹೇರಿದರು. ಎಲ್‌ ಜಿಬಿಟಿ ಜನರ ವಿರುದ್ಧದ ತೀರ್ಪಿನ ವಿರುದ್ಧ ಧ್ವನಿ ಎತ್ತಿದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿಯು, ʼʼ ಎಲ್‌ ಜಿಬಿಟಿ ಸಮುದಾಯದ ಪರಿಸ್ಥಿತಿ ಕೆಟ್ಟದಾಗಿದೆ. ಇದೀಗ ರಶಿಯಾ ಅವರನ್ನು ಮತ್ತಷ್ಟು ಕೆಳಮಟ್ಟಕ್ಕೆ ದೂಡುತ್ತಿದೆʼʼ ಎಂದು ಹೇಳಿದೆ.


ʼʼಮಾನವ ಹಕ್ಕುಗಳ ರಕ್ಷಕರ ಕೆಲಸದ ಮೇಲೆ ಅನುಚಿತ ನಿರ್ಬಂಧಗಳನ್ನು ಅಥವಾ ಎಲ್‌ ಜಿಬಿಟಿ ಜನರ ವಿರುದ್ಧ ತಾರತಮ್ಯವನ್ನುಂಟುಮಾಡುವ ಕಾನೂನುಗಳನ್ನು ತಕ್ಷಣವೇ ರದ್ದುಗೊಳಿಸುವಂತೆ ನಾನು ರಷ್ಯಾದ ಅಧಿಕಾರಿಗಳಿಗೆ ಕರೆ ನೀಡುತ್ತೇನೆʼʼ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥ ವೋಲ್ಕರ್ ಟರ್ಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ಈ ತೀರ್ಪನ್ನು ʼನಾಚಿಕೆಗೇಡಿನ ಮತ್ತು ಅಸಂಬದ್ಧʼ ಎಂದು ಅಮ್ನೆಸ್ಟಿ ಇಂಟರ್ನ್ಯಾಷನಲ್ ಕರೆದಿದೆ. ಈ ಆದೇಶವು ಎಲ್‌ ಜಿಬಿಟಿ ಸಂಘಟನೆಗಳ ಸಂಪೂರ್ಣ ನಿಷೇಧಕ್ಕೆ ಕಾರಣವಾಗಬಹುದು ಎಂದು ಅದು ಹೇಳಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ. ಸಂಘಟನೆ, ಶಾಂತಿಯುತ ಸಭೆ ಮತ್ತು ತಾರತಮ್ಯಕ್ಕೆ ಕಾರಣವಾಗುತ್ತದೆ” ಎಂದು ಅಲ್ ಜಜೀರಾ ವರದಿ ಮಾಡಿದೆ.

ಉದಾರವಾದಿ ಗುಂಪುಗಳನ್ನು ರಷ್ಯಾ ದಮನ ಮಾಡುತ್ತಿದೆ ಮತ್ತು ಜನರ ಹಕ್ಕುಗಳನ್ನು ಮೊಟಕುಗೊಳಿಸುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ರಷ್ಯಾದಲ್ಲಿ, 100 ಕ್ಕೂ ಹೆಚ್ಚು ಗುಂಪುಗಳನ್ನು ಈಗಾಗಲೇ ʼಉಗ್ರಗಾಮಿʼ ಸಃಘಟನೆಗಳೆಂದು ಘೋಷಿಸಿ ಎಂದು ನಿಷೇಧಿಸಲಾಗಿದೆ.

Tags:    

Similar News