ಚಂಡೀಗಢ, ಮಾರ್ಚ್. 7-ತಾವು ವೈಯಕ್ತಿಕ ಕಾರಣದಿಂದಾಗಿ ರಾಜೀನಾಮೆ ನೀಡಿರುವುದಾಗಿ ಪಂಜಾಬ್ ಗವರ್ನರ್ ಮತ್ತು ಚಂಡೀಗಢದ ಆಡಳಿತಾಧಿಕಾರಿ ಬನ್ವಾರಿಲಾಲ್ ಪುರೋಹಿತ್ ಅವರು ಗುರುವಾರ ಹೇಳಿದ್ದಾರೆ.
ರಾಜೀನಾಮೆಗೆ ನಿಜವಾದ ಕಾರಣವನ್ನು ಕೇಳಿದಾಗ, ʻನಾನು ರಾಜೀನಾಮೆ ಕಳುಹಿಸಿದ್ದೇನೆ. ಆದರೆ, ಅವರು ನನ್ನನ್ನು ಬಿಡುತ್ತಿಲ್ಲ ಮತ್ತು ಉಳಿದುಕೊಂಡು ಕೆಲಸ ಮಾಡು ಎಂದೂ ಹೇಳುತ್ತಿಲ್ಲ. ರಾಜೀನಾಮೆ ಸ್ವೀಕರಿಸುವುದಿಲ್ಲಎಂದಿದ್ದಾರೆ,ʼ ಎಂದು ಹೇಳಿದರು.
ʻರಾಜೀನಾಮೆಗೆ ಕಾರಣ ವೈಯಕ್ತಿಕ. ನಾಗ್ಪುರದಿಂದ ಆಗಮಿಸಿದ್ದ ಪತ್ನಿ 10 ದಿನಗಳ ಬಳಿಕ ವಾಪಸಾದರು. ನನ್ನ ಕುಟುಂಬಕ್ಕೆ ನನ್ನ ಅಗತ್ಯವಿದೆ. ನಾನು ಭಾರತೀಯ ವಿದ್ಯಾಭವನದ ಅಂತಾರಾಷ್ಟ್ರೀಯ ಉಪಾಧ್ಯಕ್ಷ ಮತ್ತು 1984 ರಲ್ಲಿ ನಾಗ್ಪುರ ಕೇಂದ್ರವನ್ನು ಪ್ರಾರಂಭಿಸಿದೆʼ ಎಂದು ಹೇಳಿದರು.
ಪುರೋಹಿತ್ ಕಳೆದ ತಿಂಗಳು ಅಧ್ಯಕ್ಷ ದ್ರೌಪದಿ ಮುರ್ಮು ಅವರಿಗೆ ವೈಯಕ್ತಿಕ ಕಾರಣಗಳನ್ನು ನೀಡಿ ರಾಜೀನಾಮೆ ಸಲ್ಲಿಸಿದ್ದರು. ಅವರನ್ನು ಆಗಸ್ಟ್ 2021 ರಲ್ಲಿ ಪಂಜಾಬ್ ಗವರ್ನರ್ ಮತ್ತು ಚಂಡೀಗಢದ ಆಡಳಿತಾಧಿಕಾರಿಯಾಗಿ ನೇಮಿಸಲಾಯಿತು.
2016- 2017 ರವರೆಗೆ ಅಸ್ಸಾಂ ಮತ್ತು 2017- 2021 ರವರೆಗೆ ತಮಿಳುನಾಡಿನ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. 1984, 1989 ಮತ್ತು 1996 ರಲ್ಲಿ ನಾಗ್ಪುರದಿಂದ ಮೂರು ಬಾರಿ ಲೋಕಸಭೆ ಸದಸ್ಯರಾಗಿದ್ದರು.