ಮಹಾರಾಷ್ಟ್ರ: 100 ರೂ. ವಾಚ್ ಕಳವು, ವಿದ್ಯಾರ್ಥಿಗೆ ಕ್ರೂರ ಶಿಕ್ಷೆ
By : The Federal
Update: 2024-03-01 08:53 GMT
ಔರಂಗಾಬಾದ್,ಮಾ.1- 100 ರೂ. ಮೌಲ್ಯದ ಗಡಿಯಾರವನ್ನು ಕದ್ದ ಆರೋಪದ ಮೇಲೆ 16 ವರ್ಷದ ವಿದ್ಯಾರ್ಥಿಗೆ ಕ್ರೂರ ಶಿಕ್ಷೆ ವಿಧಿಸಿದ ಮದರಸಾದ ಧರ್ಮಗುರು ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಜಾಮಿಯಾ ಬುರ್ಹಾನುಲ್ ಉಲೂಮ್ ಮದರಸಾದ ಧರ್ಮಗುರು ವಿದ್ಯಾರ್ಥಿಯನ್ನು ಅರೆಬೆತ್ತಲೆ ಮಾಡಿ, ಇತರ ಮಕ್ಕಳಿಗೆ ಹೊಡೆಯಲು ಮತ್ತು ಉಗುಳಲು ಆದೇಶಿಸಿದ್ದರು.
ಛತ್ರಪತಿ ಸಂಭಾಜಿ ನಗರ ಎಂದು ಮರುನಾಮಕರಣ ಮಾಡಲಾದ ಔರಂಗಾಬಾದ್‌ನ ಮದ್ರಸಾದಲ್ಲಿದ್ದ ಸೂರತ್ ಮೂಲದ ಬಾಲಕ ಹತ್ತಿರದ ಅಂಗಡಿಯಿಂದ ಸ್ವಯಂಚಾಲಿತ ಗಡಿಯಾರ ಕದ್ದಿದ್ದಾನೆ ಎಂದು ಮಾಲೀಕ ದೂರು ನೀಡಿದ್ದರು. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಾಚ್ ಅಂಗಡಿಯವರಿಗೆ ಹಿಂತಿರುಗಿಸಲಾಯಿತು. ಆದರೆ, ಮದರಸಾದ ಧರ್ಮಗುರು ಮೌಲಾನಾ ಸೈಯದ್ ಒಮರ್ ಅಲಿ, ಶಿಕ್ಷ ನೀಡಲು ನಿರ್ಧರಿಸಿದರು.
ಬಾಲಕನ ಪೋಷಕರು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ. ಮೌಲ್ವಿ ವಿರುದ್ಧ ಅಪ್ರಾಪ್ತ ವಯಸ್ಕರ ಸಂರಕ್ಷಣಾ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ.