ಮಗುವಿಗೆ ಕೈದಿ ಬಟ್ಟೆ ಹಾಕಿ ಪೋಟೋಶೂಟ್ ಮಾಡಿದವರಿಗೆ ಕಾನೂನು ಕಂಟಕ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಅವರಿಗೆ ನೀಡಲಾಗಿರುವ ಕೈದಿ ನಂಬರ್ 6106 ಬಹಳಷ್ಟು ಟ್ರೆಂಡ್ ಆಗುತ್ತಿದ್ದು, ಅಭಿಮಾನಿಗಳು ವಾಹನಗಳ ಮೇಲೆ ಸ್ಟಿಕ್ಕರ್, ಕೈ ಮೇಲೆ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದಾರೆ.;
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಅವರಿಗೆ ನೀಡಲಾಗಿರುವ ಕೈದಿ ನಂಬರ್ 6106 ಬಹಳಷ್ಟು ಟ್ರೆಂಡ್ ಆಗುತ್ತಿದ್ದು, ಅಭಿಮಾನಿಗಳು ವಾಹನಗಳ ಮೇಲೆ ಸ್ಟಿಕ್ಕರ್, ಕೈ ಮೇಲೆ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದಾರೆ.
ಈ ನಡುವೆ ಇತ್ತೀಚೆಗೆ ಮಗುವಿಗೆ ಕೈದಿ 6106 ಫೋಟೋ ಶೂಟ್ ಮಾಡಿಸಿದವರಿಗೆ ಇದೀಗ ಕಾನೂನು ಕಂಟಕ ಎದುರಾಗಿದೆ. ಬಾಲ ನ್ಯಾಯ ಕಾಯ್ದೆ ಉಲ್ಲಂಘನೆ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕೇಸ್ ದಾಖಲಿಸಿಕೊಂಡಿದ್ದು, ಕೈದಿ ಫೋಟೊ ಶೋಟ್ ಮಾಡಿಸಿದವರಿಗೆ ನೋಟಿಸ್ ನೀಡಿದೆ.
ಮಕ್ಕಳಿಗೆ ಸಂಬಂಧಿಸಿದಂತೆ ಯಾವುದೇ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಹಾಗಿಲ್ಲ. ಕುಟುಂಬಸ್ಥರಿಗೆ ಸಮನ್ಸ್ ಜಾರಿ ಮಾಡುತ್ತೇವೆ. ಈ ಬಗ್ಗೆ ಪೊಲೀಸ್ ಐಟಿ ಸೆಲ್‌ಗೆ ಪತ್ರ ಬರೆಯಲಾಗಿದೆ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೊಸಂಬೆ ತಿಳಿಸಿದ್ದಾರೆ.
ಪೋಷಕರ ನಡೆಯಿಂದ ಮಗುವಿನ ಭವಿಷ್ಯಕ್ಕೆ ತೊಂದರೆ ಉಂಟಾಗಲಿದೆ. ಮುಂದೆ ಆ ಮಗುವನ್ನು ಕೈದಿ ಎಂದು ಕರೆಯಬಹುದು. ಇದು ಮಗುವಿನ ಮಾನಸಿಕ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ಡ್ರೆಸ್ ಹಾಕಿರುವುದು ಮಗುವಿನ ಆಯ್ಕೆಯಾಗಿರಲ್ಲ. ಇದು ಮಕ್ಕಳ ಹಕ್ಕುಗಳ ಉಲ್ಲಂಘನೆ ಮಾಡಿದಂತೆ. ಇದೇ ಕಾರಣಕ್ಕೆ ಆಯೋಗ ಕೇಸ್ ದಾಖಲಿಸಿಕೊಂಡಿದೆ.