ಪಾಕಿಸ್ತಾನ: ಇಮ್ರಾನ್ ಖಾನ್ ಪಕ್ಷದ ನೂತನ ಅಧ್ಯಕ್ಷರಾಗಿ ಗೋಹರ್ ಅಲಿ ಆಯ್ಕೆ
ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷ ಸ್ಥಾಪನೆಯಾದಾಗಿನಿಂದ ಇಮ್ರಾನ್ ಅವರೇ ಅಧ್ಯಕ್ಷರಾಗಿದ್ದರು.;
ಇಸ್ಲಾಮಾಬಾದ್, ಡಿ 2 (ಪಿಟಿಐ): ಸದ್ಯ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷವು ಶನಿವಾರ ಬ್ಯಾರಿಸ್ಟರ್ ಗೋಹರ್ ಅಲಿ ಖಾನ್ ಅವರನ್ನು ಹೊಸ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ.
ಪಕ್ಷವು ತನ್ನ ಚುನಾವಣಾ ಚಿಹ್ನೆಯಾಗಿ 'ಬ್ಯಾಟ್' ಅನ್ನು ಉಳಿಸಿಕೊಳ್ಳಲು ಮತ್ತು ಪಕ್ಷದ ಆಂತರಿಕ ಚುನಾವಣೆಗಳನ್ನು ನಡೆಸಲು ಉನ್ನತ ಚುನಾವಣಾ ಸಂಸ್ಥೆಯ ಗಡುವು ನೀಡಿತ್ತು. ಹಾಗಾಗಿ ಬ್ಯಾರಿಸ್ಟರ್ ಗೋಹರ್ ಅಲಿ ಖಾನ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.
ಕ್ರಿಕೆಟಿನಿಂದ ರಾಜಕಾರಣದತ್ತ ಮುಖಮಾಡಿದ್ದ ಇಮ್ರಾನ್ ಖಾನ್ ಅವರು 1996 ರಲ್ಲಿ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷವನ್ನು ಸ್ಥಾಪಿಸಿದರು. ಸ್ಥಾಪನೆಯಾದಾಗಿನಿಂದ ಇಮ್ರಾನ್ ಅವರೇ ಅಧ್ಯಕ್ಷರಾಗಿದ್ದರು. ಇದೇ ಮೊದಲ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಬೇರೆಯವರನ್ನು ಆಯ್ಕೆ ಮಾಡಲಾಗಿದೆ.
ಪಕ್ಷದ ನೂತನ ಅಧ್ಯಕ್ಷ ಬ್ಯಾರಿಸ್ಟರ್ ಗೋಹರ್ ಅಲಿ ಖಾನ್ ಅವರು ವೃತ್ತಿಯಲ್ಲಿ ವಕೀಲರಾಗಿದ್ದು, ಮೃದು ಸ್ವಭಾವದವರಾಗಿದ್ದಾರೆ. ಪೇಶಾವರದಲ್ಲಿ ನಡೆದ ಆಂತರಿಕ ಪಕ್ಷದ ಚುನಾವಣೆಯಲ್ಲಿ ಅವರ ವಿರುದ್ಧ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತೋಷಾ ಖಾನಾ ಪ್ರಕರಣದಲ್ಲಿ ಇಮ್ರಾನ್ ಖಾನ್ ವಿರುದ್ಧದ ಭ್ರಷ್ಟಾಚಾರ ಆರೋಪ ಸಾಬೀತಾಗಿದ್ದು, ಇಮ್ರಾನ್ ಖಾನ್ 2023ರ ಆಗಸ್ಟ್ 5 ರಂದು ಜೈಲು ಸೇರಿದ್ದಾರೆ. ಜೈಲಿನಲ್ಲಿದ್ದುಕೊಂಡೆ ಗೋಹರ್ ಅವರನ್ನು ಆಗಾಗ್ಗೆ ಭೇಟಿಯಾಗಿ, ನಿಷ್ಠಾವಂತ ವಕೀಲರೊಂದಿಗೆ ಸಮಾಲೋಚಿಸಿ, ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಚಿಹ್ನೆ ʼಬ್ಯಾಟ್ʼಅನ್ನು ಉಳಿಸಿಕೊಳ್ಳಲು ನವೆಂಬರ್ 23 ರಂದು ಪಾಕಿಸ್ತಾನದ ಚುನಾವಣಾ ಆಯೋಗವು (ಇಸಿಪಿ) 20 ದಿನಗಳ ನರ‍್ದೇಶನ ನೀಡಿತ್ತು. ಅದರ ಅನುಸಾರ ಗೋಹರ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಯಿತು. ರಾಜಕೀಯದಲ್ಲಿ ಅಪರಿಚಿತ ಮುಖವಾದ ಗೋಹರ್ ಅವರಿಗೆ ವಿಶೇಷವಾಗಿ ಖಾನ್ ಅವರ ಅನುಪಸ್ಥಿತಿಯಲ್ಲಿ ಪಕ್ಷವನ್ನು ಸುರಕ್ಷಿತವಾಗಿ ಮುನ್ನಡೆಸಲು ಜವಾಬ್ದಾರಿ ನೀಡಲಾಗಿದೆ.
ಗೋಹರ್ ಖಾನ್ ಅವರು ಸುಪ್ರೀಂ ಕರ‍್ಟ್ನ ವಕೀಲರಾಗಿದ್ದಾರೆ. ಅವರು Uಏ ಯ ವಾಲ್ರ‍್ಹ್ಯಾಂಪ್ಟನ್ ವಿಶ್ವವಿದ್ಯಾಲಯದಿಂದ ಕಾನೂನು ಪದವೀಧರರಾಗಿದ್ದು, USಂಯ ವಾಷಿಂಗ್ಟನ್ ಸ್ಕೂಲ್ ಆಫ್ ಲಾದಿಂದ ಐಐ.ಒ ಪದವಿ ಪಡೆದಿದ್ದಾರೆ.
ಗೋಹರ್ ಅವರು 2008 ರಲ್ಲಿ ಪಾಕಿಸ್ತಾನ್ ಪೀಪಲ್ಸ್ ಪರ‍್ಟಿ(ಪಿಪಿಪಿ)ಯಿಂದ ಸ್ರ‍್ಧಿಸಿ ಚುನಾವಣೆಯಲ್ಲಿ ಸೋತಿದ್ದರು. ಈ ಸೋಲಿನ ಬಳಿಕ ಅವರು ರಾಜಕೀಯದಿಂದ ದೂರ ಉಳಿದು, ತಮ್ಮ ವಕೀಲಿ ವೃತ್ತಿಯತ್ತ ಗಮನ ಹರಿಸಿದರು.
ಪೇಶಾವರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಗೋಹರ್, ಖಾನ್ ಅವರ ಪ್ರತಿನಿಧಿಯಾಗಿ ತಮ್ಮ ಜವಾಬ್ದಾರಿಯನ್ನು ಪೂರೈಸಲು ಪ್ರಯತ್ನಿಸುತ್ತೇವೆ. ಚುನಾವಣೆಗಳು ನಡೆದಾಗ ನಾವು ಎಲ್ಲರನ್ನೂ ಸೋಲಿಸುತ್ತೇವೆ ಎಂದು ಹೇಳಿದರು.
ಈ ಮಧ್ಯೆ ತೆಹ್ರೀಕ್-ಎ-ಇನ್ಸಾಫ್ ಪಕ್ಷ ತನ್ನ ಪ್ರಧಾನ ಕರ‍್ಯರ‍್ಶಿಯಾಗಿ ಒಮರ್ ಅಯೂಬ್ ಖಾನ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದು, ಬಲೂಚಿಸ್ತಾನದ ಪಕ್ಷದ ಅಧ್ಯಕ್ಷರಾಗಿ ಮುನೀರ್ ಅಹ್ಮದ್ ಬಲೂಚ್ ಆಯ್ಕೆಯಾದರು. ಸಿಂಧ್ನ ಹಲೀಮ್ ಆದಿಲ್ ಶೇಖ್, ಖೈಬರ್ ಪಖ್ತುಂಖ್ವಾದ ಅಲಿ ಅಮೀನ್ ಗಂದಪುರ್ ಮತ್ತು ಪಕ್ಷದ ಪಂಜಾಬ್ ಅಧ್ಯಕ್ಷರಾಗಿ ಡಾ ಯಾಸ್ಮಿನ್ ರಶೀದ್ ಆಯ್ಕೆ ಆಗಿದ್ದಾರೆ.