ಶಿಸ್ತು ಮಕ್ಕಳ ಜೀವಕ್ಕೆ ಎರವಾಗದಿರಲಿ: ಹೈಕೋರ್ಟ್‌ ಕಟ್ಟೆಚ್ಚರ

ಶಿಸ್ತು ಹೇರುವ ಭರದಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಅಮಾಯಕ ಜೀವಗಳಿಗೆ ಹಾನಿಯಾಗುವಂತೆ ನಡೆದುಕೊಳ್ಳಬಾರದು ಎಂದು ಹೈಕೋರ್ಟ್‌ ಕಳವಳಿ ವ್ಯಕ್ತಪಡಿಸಿದೆ.;

Update: 2024-07-07 10:06 GMT
ಹೈಕೋರ್ಟ್‌
Click the Play button to listen to article

ʼಶಿಸ್ತು ಹೇರುವ ಭರದಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಅಮಾಯಕ ಜೀವಗಳಿಗೆ ಹಾನಿಯಾಗುವಂತೆ ನಡೆದುಕೊಳ್ಳಬಾರದು' ಎಂದು ಹೈಕೋರ್ಟ್‌ ಕಳವಳಿ ವ್ಯಕ್ತಪಡಿಸಿದೆ.

ವಿದ್ಯಾರ್ಥಿನಿಯೊಬ್ಬರಿಗೆ ಬೆದರಿಕೆ ಹಾಕಿ ಆಕೆಯ ಆತ್ಮಹತ್ಯೆಗೆ ಕಾರಣವಾದ ಆರೋಪ ಹೊತ್ತ ಇಬ್ಬರು ಶಿಕ್ಷಕರ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಸ್ಪಷ್ಟವಾಗಿ ನಿರಾಕರಿಸಿದೆ.

'ನಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಬೇಕು' ಎಂದು ಕೋರಿ ಧರ್ಮಸ್ಥಳದ ಎಸ್.ಡಿ.ಎಂ ಪ್ರೌಢಶಾಲೆ ಶಿಕ್ಷಕರಾದ ರೂಪೇಶ್ (34) ಮತ್ತು ಸದಾನಂದ (44) ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ತಿರಸ್ಕರಿಸಿದೆ.

'ಶಿಕ್ಷಕ ಸದಾನಂದ ಅವರು, ನೀನು ಯುವಕನನ್ನು ಚುಂಬಿಸುತ್ತಿರುವ ವಿಡಿಯೋ ನನ್ನ ಬಳಿ ಇದೆ. ಅದನ್ನು ಎಲ್ಲರಿಗೂ ತಿಳಿಯುವಂತೆ ಪ್ರಸಾರ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾಗಿ ಮೃತ ವಿದ್ಯಾರ್ಥಿನಿ ಮರಣಪೂರ್ವ ಹೇಳಿಕೆ ನೀಡಿದ್ದಾರೆ. ಇದನ್ನು ಗಮನಿಸಿದಾಗ, ಮಕ್ಕಳ ವಿಚಾರದಲ್ಲಿ ಶಿಕ್ಷಕರು ಹೊಂದಿರುವ ಸಂಕುಚಿತ ದೃಷ್ಟಿಕೋನದ ಬಗ್ಗೆ ಆತಂಕ ಮೂಡುತ್ತದೆ' ಎಂದು ಪೀಠ ಹೇಳಿದೆ.

'ವಿದ್ಯಾರ್ಥಿನಿ ಯುವಕನನ್ನು ಮಾತನಾಡಿಸುವುದನ್ನೇ ಅಶಿಸ್ತು ಎಂದು ಪರಿಗಣಿಸಲು ಸಾಧ್ಯವಿಲ್ಲ. ಇದೊಂದು ಸೂಕ್ಷ್ಮ ಪ್ರಕರಣವಾಗಿದ್ದು, ಘಟನೆಯ ಕುರಿತು ವಿಸ್ತ್ರತ ವಿಚಾರಣೆ ನಡೆಯಬೇಕಾದ ಅಗತ್ಯವಿದೆ' ಎಂದು ಹೇಳಿದೆ.

'ಶಿಕ್ಷಕರು ಹದಿವಯಸ್ಸಿನ ಮಕ್ಕಳಿಗೆ ಬೋಧಿಸುವಾಗ ಅವರ ಮಾನಸಿಕ ತುಮುಲಗಳನ್ನು ಅರಿತಿರಬೇಕು. ಅವರ ಮುಗ್ಧ ಮತ್ತು ಅರಳುವ ತಾರುಣ್ಯದ ಕನಸುಗಳಿಗೆ ಸರಿದಾರಿ ತೋರಿಸಬೇಕು. ಎಳೆಮಕ್ಕಳ ನಡವಳಿಕೆಗಳನ್ನು ವಿಶಾಲ ದೃಷ್ಟಿಕೋನದಿಂದ ಅರ್ಥ ಮಾಡಿಕೊಳ್ಳಬೇಕು' ಎಂದಿದೆ.

ಪ್ರಕರಣವೇನು?

'ದಕ್ಷಿಣಕನ್ನಡ ಜಿಲ್ಲೆಯ ಧರ್ಮಸ್ಥಳದ ಎಸ್ ಡಿ ಎಂ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಮೃತ ಬಾಲಕಿ, ಅದೇ ಶಾಲೆಯಲ್ಲಿನ ಯುವಕನ ಜೊತೆ ನಿರಂತರವಾಗಿ ಮಾತನಾಡುತ್ತಿದ್ದರು. ಇದನ್ನು ಶಿಕ್ಷಕರು ಶಾಲೆಯ ಮುಖ್ಯ ಶಿಕ್ಷಕರು ಹಾಗೂ ವಿದ್ಯಾರ್ಥಿನಿಯ ತಾಯಿಯ ಗಮನಕ್ಕೆ ತಂದಿದ್ದರು. ಈ ಬಗ್ಗೆ ಶಾಲೆಗೆ ತೆರಳಿದ್ದ ವಿದ್ಯಾರ್ಥಿನಿಯ ತಾಯಿ, ನನ್ನ ಮಗಳ ಬಗ್ಗೆ ಏನೇ ಆರೋಪ ಇದ್ದರೂ, ಅದನ್ನು ಇತರೆ ಮಕ್ಕಳ ಮುಂದೆ ಬಹಿರಂಗಪಡಿಸಿ ಅವಮಾನಿಸದೆ ನನ್ನ ಗಮನಕ್ಕೆ ತನ್ನಿ. ಯಾವುದೇ ಕಾರಣಕ್ಕೂ ಮಗಳ ಘನತೆಗೆ ಮಸಿ ಬಳಿಯಬೇಡಿʼ ಎಂದು ಮನವಿ ಮಾಡಿದ್ದರು.

Tags:    

Similar News