ಗೋಬಿ, ಕಬಾಬ್ ಬಳಿಕ ಪಾನಿಪುರಿಯಲ್ಲೂ ಕ್ಯಾನ್ಸರ್‌ಕಾರಕ ಅಂಶ ಪತ್ತೆ

ರಾಜ್ಯದಲ್ಲಿ ಈಗಾಗಲೇ ಗೋಬಿ ಮಂಚೂರಿ, ಕಬಾಬ್​​ಗೆ ಬಳಸುವ ಕೃತಕ ಬಣ್ಣಗಳಲ್ಲಿ ಕ್ಯಾನ್ಸರ್‌ಕಾರಕ ಅಂಶಗಳು ಪತ್ತೆಯಾದ ಹಿನ್ನಲೆಯಲ್ಲಿ ಇವುಗಳಿಗೆ ಬಳಸುವ ಕೃತಕ ಬಣ್ಣವನ್ನು ಬ್ಯಾನ್​​ ಮಾಡಲಾಗಿದೆ.

Update: 2024-06-27 12:10 GMT
ಪಾನಿಪೂರಿಯಲ್ಲಿಯೂ ಕ್ಯಾನ್ಸರ್‌ಕಾರಕ ಅಂಶಗಳು ಇರುವುದು ಪತ್ತೆಯಾಗಿದೆ.
Click the Play button to listen to article

ರಾಜ್ಯದಲ್ಲಿ ಈಗಾಗಲೇ ಗೋಬಿ ಮಂಚೂರಿ, ಕಬಾಬ್​​ಗೆ ಬಳಸುವ ಕೃತಕ ಬಣ್ಣಗಳಲ್ಲಿ ಕ್ಯಾನ್ಸರ್‌ಕಾರಕ ಅಂಶಗಳು ಪತ್ತೆಯಾದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ, ಅವುಗಳಲ್ಲಿ ಬಳಸುವ ಕೃತಕ ಬಣ್ಣವನ್ನು ಬ್ಯಾನ್​​ ಮಾಡಿದೆ.

ಇದೀಗ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಪಾನಿಪುರಿ ಪ್ರಿಯರಿಗೂ ಶಾಕ್​​ ನೀಡಲು ಸದ್ದಿಲ್ಲದೆ ತಯಾರಿ ನಡೆಸಿದೆ. ಗೋಬಿ, ಕಬಾಬ್ ಬಳಿಕ ಈಗ ಪಾನಿಪುರಿಗೆ ಬಳಸುವ ಸಾಸ್​, ಮೀಟಾ ಖಾರದ ಪುಡಿ ಸೇರಿದಂತೆ ಐದು ಬಗೆಯ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿವೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗದಲ್ಲಿನ ಪಾನಿಪುರಿ ಮಾದರಿಗಳನ್ನ ಸಂಗ್ರಹಿಸಿ ಪರಿಶೀಲನೆ ನಡೆಸಿದೆ. ಪರಿಶೀಲನೆ ವೇಳೆ ಪಾನಿಪೂರಿ ತಯಾರಿಕೆಗೆ ಬಳಸುವ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಇರುವುದು ಪತ್ತೆಯಾಗಿದೆ. ಹೀಗಾಗಿ ಶೀಘ್ರದಲ್ಲೆ ಪಾನಿಪೂರಿಗೆ ಬಳಸುವ ಸಾಸ್‌, ಮೀಟಾ ಖಾರದ ಪುಡಿ ಮತ್ತಿತರ ವಸ್ತುಗಳನ್ನು ಬ್ಯಾನ್ ಮಾಡಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಿರ್ಧರಿಸಿದೆ.

ಬೆಂಗಳೂರಿನ 49 ಕಡೆಗಳಲ್ಲಿ ಪಾನಿಪುರಿ ತಯಾರಿಕೆಗೆ ಕ್ಯಾನ್ಸರ್ ಕಾರಕ ಇರುವ ಸಾಸ್ ಮತ್ತು ಮೀಟಾ ಖಾರದ ಪುಡಿ ಬಳಕೆ ಮಾಡುತ್ತಿದ್ದಾರೆ. ಹಾನಿಕಾರಕ ಅಂಶಗಳು ಮನುಷ್ಯನ ದೇಹ ಸೇರಿದರೆ ಆರೋಗ್ಯ ಕ್ಷೀಣಿಸುತ್ತಾ ಹೋಗಲಿದೆ. ಹೀಗಾಗಿ ಕ್ಯಾನ್ಸರ್ ಕಾರಕ ಇರುವ ಸಾಸ್, ಮೀಟಾ ಖಾರದ ಪುಡಿ ಉತ್ಪಾದನೆಯನ್ನೇ ಬ್ಯಾನ್​ ಮಾಡುವ ಬಗ್ಗೆ ಚಿಂತನೆ ನಡೆದಿದೆ.

Tags:    

Similar News