ಚಿಲ್ಲರೆ ಕೇಳುವ ನೆಪದಲ್ಲಿ ಹಾಲು ವ್ಯಾಪಾರಿಯ ಗಮನ ಸೆಳೆದು 20,000 ರೂ. ದೋಚಿದ್ದ ಖದೀಮ ಸೆರೆ

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದರು. ಖಚಿತ ಮಾಹಿತಿ ಕಲೆಹಾಕಿದ ಪೊಲೀಸರು, ಪಾದರಾಯನಪುರದಲ್ಲಿರುವ ಆತನ ಮನೆಯ ಬಳಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಆರೋಪಿ ತನ್ನ ತಪ್ಪು ಒಪ್ಪಿಕೊಂಡಿದ್ದು, ಕದ್ದ ಹಣವನ್ನು ವಾಪಸ್​ ಒಪ್ಪಿಸಿದ್ದಾನೆ.

Update: 2025-11-06 13:17 GMT

ಬ್ಯಾಂಕ್ ಬಳಿ ಆಟೋಗಾಗಿ ಕಾಯುತ್ತಿದ್ದ ಹಾಲು ಮಾರಾಟಗಾರರೊಬ್ಬರಿಗೆ ಚಿಲ್ಲರೆ ಹಣ ಕೇಳುವ ನೆಪದಲ್ಲಿ ಗಮನ ಬೇರೆಡೆ ಸೆಳೆದು 20,000 ರೂಪಾಯಿ ದೋಚಿದ್ದ ಆರೋಪಿಯನ್ನು ಸುಬ್ರಹ್ಮಣ್ಯನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಕಳವು ಮಾಡಲಾಗಿದ್ದ ಸಂಪೂರ್ಣ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದಲ್ಲಿ ಮನೆಗಳು ಮತ್ತು ಅಂಗಡಿಗಳಿಗೆ ಹಾಲು ಸರಬರಾಜು ಮಾಡುವ ವ್ಯಕ್ತಿಯೊಬ್ಬರು ಮಾರ್ಚ್​ನಲ್ಲಿ ತಮ್ಮ ವ್ಯಾಪಾರದಿಂದ ಬಂದ 20,000 ರೂಪಾಯಿ ಹಣವನ್ನು ಜೇಬಿನಲ್ಲಿ ಇಟ್ಟುಕೊಂಡು ಸುಬ್ರಹ್ಮಣ್ಯನಗರದ ಬ್ಯಾಂಕ್ ಒಂದರ ಬಳಿ ಆಟೋಗಾಗಿ ಕಾಯುತ್ತಿದ್ದರು. ಈ ಸಂದರ್ಭದಲ್ಲಿ, ದ್ವಿಚಕ್ರ ವಾಹನದಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ, 500ಕ್ಕೆ ರೂಪಾಯಿ ಚಿಲ್ಲರೆ ಇದ್ದರೆ ಕೊಡಿ" ಎಂದು ಕೇಳಿದ್ದಾನೆ.

ಹಾಲು ವ್ಯಾಪಾರಿಯು ಜೇಬಿನಲ್ಲಿದ್ದ ಹಣದ ಕಂತೆಯನ್ನು ಹೊರತೆಗೆದು ಚಿಲ್ಲರೆ ನೀಡಲು ಮುಂದಾದಾಗ, ಆರೋಪಿಯು "ಹಣವನ್ನು ಹೀಗೆ ಇಟ್ಟುಕೊಂಡಿದ್ದೀರಲ್ಲ, ನಾನು ಸರಿಯಾಗಿ ಜೋಡಿಸಿಕೊಡುತ್ತೇನೆ" ಎಂದು ನಂಬಿಸಿ ಹಣದ ಕಂತೆಯನ್ನು ಪಡೆದುಕೊಂಡಿದ್ದಾನೆ. ಬಳಿಕ, ನೋಟುಗಳನ್ನು ಜೋಡಿಸುವಂತೆ ನಟಿಸುತ್ತಾ, ವ್ಯಾಪಾರಿಯ ಗಮನವನ್ನು ಬೇರೆಡೆಗೆ ಸೆಳೆದು ಕ್ಷಣಮಾತ್ರದಲ್ಲಿ ಹಣವನ್ನು ಕದ್ದು ಪರಾರಿಯಾಗಿದ್ದ. ಈ ಮರುದಿನ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಕಾರ್ಯಾಚರಣೆ ಮತ್ತು ಬಂಧನ

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದರು. ಖಚಿತ ಮಾಹಿತಿ ಕಲೆಹಾಕಿದ ಪೊಲೀಸರು, ಪಾದರಾಯನಪುರದಲ್ಲಿರುವ ಆತನ ಮನೆಯ ಬಳಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಆರೋಪಿ ತನ್ನ ತಪ್ಪು ಒಪ್ಪಿಕೊಂಡಿದ್ದು, ಕದ್ದ ಹಣವನ್ನು ವಾಪಸ್​ ಒಪ್ಪಿಸಿದ್ದಾನೆ.

Tags:    

Similar News