ಯುವ ವಿಚ್ಚೇದನ ಪ್ರಕರಣ: ಯುವ ಪತ್ನಿ ಶ್ರೀ ದೇವಿ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!
ಯುವ ಹಾಗೂ ಪತ್ನಿ ಶ್ರೀದೇವಿ ಭೈರಪ್ಪ ವಿಚ್ಚೇದನ ಪ್ರಕರಣದಲ್ಲಿ ಕಾಂತಾರ ಬೆಡಗಿ ನಟಿ ಸಪ್ತಮಿ ಗೌಡ ಅವರ ಹೆಸರು ಕೇಳಿಬಂದಿದ್ದು, ಸಪ್ತಮಿ ಗೌಡ ಕುಟುಂಬ ಕಾನೂನು ಹೋರಾಟಕ್ಕೆ ಮುಂದಾಗಿದೆ.;
By : The Federal
Update: 2024-06-11 10:38 GMT
ವರನಟ ರಾಜ್‌ಕುಮಾರ್ ಅವರ ಮೊಮ್ಮಗ ರಾಘವೇಂದ್ರ ರಾಜ್ ಕುಮಾರ್ ಅವರ ಪುತ್ರ ಯುವ ಹಾಗೂ ಪತ್ನಿ ಶ್ರೀದೇವಿ ಭೈರಪ್ಪ ವಿಚ್ಚೇದನ ಪ್ರಕರಣದಲ್ಲಿ ಕಾಂತಾರ ಬೆಡಗಿ ನಟಿ ಸಪ್ತಮಿ ಗೌಡ ಅವರ ಹೆಸರು ಕೇಳಿಬಂದ ಹಿನ್ನಲೆಯಲ್ಲಿ ಸಪ್ತಮಿ ಗೌಡ ಕುಟುಂಬ ಕಾನೂನು ಹೋರಾಟಕ್ಕೆ ಮುಂದಾಗಿದೆ.
ಶ್ರೀದೇವಿ ಬೈರಪ್ಪ ತಮ್ಮ ವಕೀಲರ ಮೂಲಕ ರಿಪ್ಲೈ ನೋಟಿಸ್ ನೀಡಿದ್ದರು. ಇದರಲ್ಲಿ 'ಯುವ' ಜೊತೆ ನಟಿಸಿದ ಸಪ್ತಮಿ ಗೌಡ ಹೆಸರನ್ನು ಉಲ್ಲೇಖ ಮಾಡಲಾಗಿದೆ ಈ ಕಾರಣಕ್ಕೆ ಸಪ್ತಮಿ ಗೌಡ ಕುಟುಂಬ ಮಾನಹಾನಿ ನಷ್ಟಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟ ಮಾಡಲು ಮುಂದಾಗಿದ್ದಾರೆ.
ಯುವ ರಾಜ್‌ಕುಮಾರ್ ಮೇಲೆ ಶ್ರೀದೇವಿ ಬೈರಪ್ಪ ಹಲವು ಆರೋಪಗಳನ್ನು ಮಾಡಿದ್ದಾರೆ. ಮಾನಸಿಕ ಹಿಂಸೆ, ಆರ್ಥಿಕ ನಿರ್ಬಂಧ, ಸಹ ನಟಿ ಸಪ್ತಮಿ ಗೌಡ ಜೊತೆ ಸಂಬಂಧದಂತಹ ಆರೋಪಗಳನ್ನು ಮಾಡಿದ್ದಾರೆ.