ತಂದೆಯ ಗನ್‌ನಿಂದ ಫೈರಿಂಗ್‌ ಮಾಡಿಕೊಂಡು ಯುವಕ ಆತ್ಮಹತ್ಯೆ

ಪೋಷಕರು ತಿರುಪತಿಯಿಂದ ವಾಪಸ್‌ ಮರಳಿ ಬಂದಾಗ ಫಾರ್ಮ್‌ಹೌಸ್‌ನಲ್ಲಿ ಪುತ್ರ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ತಿರುಮಲಶೆಟ್ಟಿ ಪೊಲೀಸ್‌ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಪ್ರಕರಣ ದಾಖಲಿಸಿದ್ದಾರೆ.;

Update: 2025-05-12 12:17 GMT

ಕಾಲ್ಪನಿಕ ಚಿತ್ರ

ಇತ್ತೀಚೆಗಷ್ಟೆ ವಿದೇಶದಿಂದ ವಿದ್ಯಾಭ್ಯಾಸ ಪೂರೈಸಿ ಬಂದಿದ್ದ ಯುವಕನೊಬ್ಬ, ತನ್ನ ತಂದೆಯ ಸಿಂಗಲ್‌ ಬ್ಯಾರಲ್‌ ಗನ್‌ನಿಂದ ಫೈರಿಂಗ್‌ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನಡೆದಿದೆ. 28 ವರ್ಷದ ಬೈಯೇಶ್​ ಆತ್ಮಹತ್ಯೆ ಮಾಡಿಕೊಂಡವರು.

ಬೈಯೇಶ್​ನ ಪೋಷಕರು ಭಾನುವಾರ (ಮೇ 11ರಂದು)  ತಿರುಪತಿಗೆ ತೆರಳಿದ್ದರು.  ಸೋಮವಾರ (ಮೇ12ರಂದು) ವಾಪಸ್‌ ಬಂದಾಗ ಫಾರ್ಮ್‌ ಹೌಸ್‌ನಲ್ಲಿ  ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ತಿರುಮಲಶೆಟ್ಟಿ ಪೊಲೀಸ್‌ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.   

Tags:    

Similar News