Naxals Surrender | ನಕ್ಸಲ್‌ ಶರಣಾಗತಿ ಸಮಿತಿಗೆ ಹೊಸ ವರ್ಷದ ಗ್ರೀಟಿಂಗ್‌ ನೀಡಿ ಸ್ವಾಗತಿಸಿದ ನಕ್ಸಲರು

ನಕ್ಸಲ್‌ ನಾಯಕಿ ಮುಂಡಗಾರು ಲತಾ ನೇತೃತ್ವದ ತಂಡದ ಸದಸ್ಯರಾದ ಸುಂದರಿ, ವಸಂತ್‌, ಜಯಣ್ಣ, ಜಿಶಾ, ವನಜಾಕ್ಷಿ ಅವರು ಡಾ.ಬಂಜಗೆರೆ ಜಯಪ್ರಕಾಶ್‌ ನೇತೃತ್ವದ ಶರಣಾಗತಿ ಹಾಗೂ ಪುನರ್ವಸತಿ ಸಮಿತಿಯನ್ನು ಕಾಡಂಚಿನಲ್ಲಿ ಬರಮಾಡಿಕೊಂಡರು.;

Update: 2025-01-08 06:56 GMT
ನಕ್ಸಲ್ ಶರಣಾಗತಿ ಸಮಿತಿಗೆ ಹೊಸ ವರ್ಷದ ಶುಭಾಶಯದ ಗ್ರೀಟಿಂಗ್ ನೀಡಿ ಸ್ವಾಗತಿಸಿದ ಮುಂಡಗಾರು ಲತಾ ಹಾಗೂ ಇತರೆ ನಕ್ಸಲ್‌ ಸದಸ್ಯರು

ಶಸ್ತ್ರತ್ಯಾಗ ಮಾಡಿ ಶರಣಾಗುತ್ತಿರುವ ಆರು ಮಂದಿ ನಕ್ಸಲರು ಬುಧವಾರ ಶರಣಾಗತಿಗೂ ಮುನ್ನ ನಕ್ಸಲ್‌ ಶರಣಾಗತಿ ಹಾಗೂ ಪುನವರ್ಸತಿ ಸಮಿತಿಯ ಸದಸ್ಯರಿಗೆ ಹೊಸ ವರ್ಷದ ಶುಭಾಶಯ ಕೋರುವ ಕೈ ಬರಹದ ಗ್ರೀಟಿಂಗ್ ನೀಡಿ ಸ್ವಾಗತಿಸಿದರು. 

ನಕ್ಸಲ್‌ ನಾಯಕಿ ಮುಂಡಗಾರು ಲತಾ ನೇತೃತ್ವದ ತಂಡದ ಸದಸ್ಯರಾದ ಸುಂದರಿ, ವಸಂತ್‌, ಜಯಣ್ಣ, ಜಿಶಾ, ವನಜಾಕ್ಷಿ ಅವರು ಡಾ.ಬಂಜಗೆರೆ ಜಯಪ್ರಕಾಶ್‌ ನೇತೃತ್ವದ ಶರಣಾಗತಿ ಹಾಗೂ ಪುನರ್ವಸತಿ ಸಮಿತಿಯನ್ನು ಕಾಡಂಚಿನಲ್ಲಿ ಬರಮಾಡಿಕೊಂಡರು. ಇಲ್ಲಿಂದ ನಕ್ಸಲರನ್ನು ಸಮಿತಿಯು ಚಿಕ್ಕಮಗಳೂರು ಜಿಲ್ಲಾಡಳಿತ ಕಚೇರಿಗೆ ಕರೆ ತಂದು ಶರಣಾಗತಿ ಪ್ರಕ್ರಿಯೆ ಪೂರ್ಣಗೊಳಿಸಲಿದೆ. ನಕ್ಸಲರನ್ನು ಕರೆತರಲು ಸಮಿತಿಯ ಸದಸ್ಯರಾದ ನೂರ್‌ ಶ್ರೀಧರ್, ಪಾರ್ವತೀಶ ಬಿಳಿದಾಳೆ, ಡಾ.ಬಂಜಗೆರೆ ಜಯಪ್ರಕಾಶ್ ತೆರಳಿದ್ದರು. 

ಚಿಕ್ಕಮಗಳೂರಿನ ಜಿಲ್ಲಾಡಳಿತ ಕಚೇರಿಯಲ್ಲಿ ಮಧ್ಯಾಹ್ನ 12.30 ರ ಸುಮಾರಿಗೆ ಆರು ಮಂದಿ ನಕ್ಸಲರು ಶರಣಾಗಲಿದ್ದಾರೆ. ಆರು ಮಂದಿ ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವಲ್ಲಿ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿ ಮಧ್ಯಸ್ಥಿಕೆ ವಹಿಸಿದೆ. 

ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್‌ ಬಳಿಕ ನಕ್ಸಲರ ಶರಣಾಗತಿಗೆ ಸರ್ಕಾರ ಕರೆ ನೀಡಿತ್ತು. ಅದರಂತೆ ಚಿಂತಕ ಡಾ ಬಂಜಗೆರೆ ಜಯಪ್ರಕಾಶ್, ವಕೀಲ  ಕೆ.ಪಿ ಶ್ರೀಪಾಲ್, ಪತ್ರಕರ್ತ ಪಾರ್ವತೀಶ್ ಬಿಳಿದಾಳೆ ನೇತೃತ್ವದ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿ ಶರಣಾಗತಿ ಪ್ರಕ್ರಿಯೆ ಆರಂಭಿಸಿತ್ತು.

ನಕ್ಸಲರು ಕೂಡ ಸರ್ಕಾರದ ನಡುವೆ ಹಲವು ಸುತ್ತಿನ ಸಭೆಗಳನ್ನು ನಡೆಸಿತ್ತು. ನಕ್ಸಲರು ಮುಂದಿಟ್ಟಿದ್ದ  ಹಲವು ಷರತ್ತುಗಳಿಗೆ  ಸರ್ಕಾರ ಒಪ್ಪಿಗೆ ಸೂಚಿಸಿದ ಬಳಿಕ ಆರು ಮಂದಿ ನಕ್ಸಲರನ್ನು ಶರಣಾಗಲು ಸಮ್ಮತಿ ಸೂಚಿಸಿದ್ದರು. 

ತಮ್ಮ ವಿರುದ್ಧದ ಪ್ರಕರಣಗಳ ಶೀಘ್ರ ವೀಲೇವಾರಿ, ಪುನವರ್ಸತಿ ಪ್ಯಾಕೇಜ್, ನಾಗರಿಕ ಹೋರಾಟಕ್ಕೆ ಅವಕಾಶ ಸೇರಿದಂತೆ ಹಲವು ಬೇಡಿಕೆಗಳ ಕುರಿತು ಸರ್ಕಾರದೊಂದಿಗೆ ಚರ್ಚಿಸಲಾಗಿತ್ತು. ಸಿಎಂ ಸಿದ್ದರಾಮಯ್ಯ ಅವರು ಕೂಡ ನಕ್ಸಲರ ಶರಣಾಗತಿಗೆ ಸೂಚಿಸಿದ್ದರು.

Tags:    

Similar News