ಮೀಟರ್ ಬಡ್ಡಿ ದಂಧೆ: ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ
ಸಾಲಗಾರರ ಕಿರುಕುಳದಿಂದ ಬೇಸತ್ತು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಹುಬ್ಬಳ್ಳಿಯ ಚೇತನಾ ಕಾಲೋನಿಯಲ್ಲಿ ನಡೆದಿದೆ.
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮೀಟರ್ ವಂಚನೆ ಬೇರೂರಿದೆ. ಮೀಟರ್ ಬಡ್ಡಿ ದಂಧೆಯಿಂದ ಎಷ್ಟೋ ಬಡ ಕುಟುಂಬಗಳು ಪ್ರಾಣ ಕಳೆದುಕೊಂಡಿವೆ. ಈ ನಿಟ್ಟಿನಲ್ಲಿ ಮೀಟರ್ ಬಡ್ಡಿ ದಂಧೆಗೆ ಬ್ರೇಕ್ ಹಾಕಲು ಪೊಲೀಸ್ ಆಯುಕ್ತರು ನಿರ್ಧರಿಸಿದ್ದಾರೆ. ಇಷ್ಟಾದರೂ ಮೀಟರ್ ಬಡ್ಡಿ ದಂಧೆಯ ಕತ್ತಲು ಕಳೆಗಟ್ಟಿಲ್ಲ. ಸಾಲಗಾರರ ಕಿರುಕುಳದಿಂದ ಬೇಸತ್ತು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಬೆಂಗೇರಿಯ ಚೇತನಾ ಕಾಲೋನಿಯಲ್ಲಿ ನಡೆದಿದೆ.
ಮೃತರನ್ನು ಜಮಖಂಡಿ ಮೂಲದ ಸುಜಿತ್ ಗುಲ್ಲಾದ್ ಎಂದು ಗುರುತಿಸಲಾಗಿದ್ದು, ಇವರು ಕಂಪ್ಯೂಟರ್ ಮಾರಾಟ ಮತ್ತು ಸೇವಾ ವ್ಯವಹಾರ ನಡೆಸುತ್ತಿದ್ದರು. ಸುಜಿತ್ ವ್ಯಾಪಾರ ನಡೆಸಲು ಸಾಕಷ್ಟು ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲು ಸಾಲಗಾರರಿಂದ ವಾರದ ಬಡ್ಡಿಗೆ ಹಣ ಪಡೆದಿದ್ದ ಎನ್ನಲಾಗಿದೆ. ಸಾಲಬಾಧೆಯಿಂದ ಬೇಸತ್ತು ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುಜಿತ್ ಕುಟುಂಬಸ್ಥರು ಆರೋಪಿಸಿದ್ದಾರೆ.
ಸುಜಿತ್ ಇನ್ನೂ ಸಾಲದ ಹಣವನ್ನು ಮರುಪಾವತಿಸದೇ ಇದ್ದಾಗ ಸಾಲಗಾರರು ಕಿರುಕುಳ ನೀಡಲಾರಂಭಿಸಿದ್ದು, ಸಾಲಗಾರರ ಕಿರುಕುಳ ತಾಳಲಾರದೆ ಸುಜಿತ್ ಡೆತ್ ನೋಟ್‌ನಲ್ಲಿ ಸಾಲ ನೀಡಿದವರ ಹೆಸರನ್ನು ಬರೆದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಎನ್.ಸಶಿಕುಮಾರ್ ಭೇಟಿ ನೀಡಿ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಶ್ವಾಪುರ ಠಾಣೆ ಪೊಲೀಸರಿಗೆ ಸೂಚನೆ ನೀಡಿದರು. ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೀಟರ್ ಬಡ್ಡಿ ದಂಧೆಗೆ ಪೊಲೀಸ್ ಕಮಿಷನರ್ ಬ್ರೇಕ್ ಹಾಕಲು ಯತ್ನಿಸುತ್ತಿದ್ದರೂ ಮೀಟರ್ ಬಡ್ಡಿ ದಂಧೆಯ ಕತ್ತಲು ತಗ್ಗಿಲ್ಲ.