ಕಳ್ಳತನ ಆರೋಪ ಹೊರಿಸಿ, ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿಸಿದ ಶಿಕ್ಷಕಿ: ನೊಂದ ವಿದ್ಯಾರ್ಥಿನಿ ಆತ್ಮಹತ್ಯೆ
ವಿದ್ಯಾರ್ಥಿನಿಯೊಬ್ಬಳ ಮೇಲೆ ಶಿಕ್ಷಕಿಯೊಬ್ಬರು ಕಳ್ಳತನದ ಆರೋಪ ಮಾಡಿ ಬಟ್ಟೆ ಬಿಚ್ಚಿ ಪರಿಶೀಲಿಸಿದ್ದು, ಇದರಿಂದ ಅವಮಾನಿತಳಾದ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಕದಂಪುರದಲ್ಲಿ ನಡೆದಿದೆ.;
By : The Federal
Update: 2024-03-18 12:06 GMT
ಬಾಗಲಕೋಟೆ: ಶಿಕ್ಷಕಿಯೊಬ್ಬರು ತನ್ನ ಮೇಲೆ ಕಳ್ಳತನದ ಆರೋಪ ಮಾಡಿ ಬಟ್ಟೆ ಬಿಚ್ಚಿ ಪರಿಶೀಲಿಸಿದ್ದಕ್ಕೆ ಮನನೊಂದ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಕದಂಪುರದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ನಿರ್ಭಯ ಬಾರಕೇರ (14, ಹೆಸರು ಬದಲಿಸಿದೆ) ಎಂದು ಗುರುತಿಸಲಾಗಿದ್ದು ಕದಾಂಪುರ ಗ್ರಾಮದ ಪ್ರೌಢಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಈ ಘಟನೆ ಮಾರ್ಚ್ 16ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಶಾಲಾ ಶಿಕ್ಷಕಿ ಮಿಶ್ರಿಕೋಟಿ ಹಾಗೂ ಮುಖ್ಯ ಶಿಕ್ಷಕ ಮುಜಾವರ ವಿರುದ್ಧ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿನಿಯ ಪೋಷಕರು ಪ್ರಕರಣ ದಾಖಲಿಸಿದ್ದಾರೆ.