ರಮ್ಯಾ ಪೋಸ್ಟ್‌ಗೆ ಅಶ್ಲೀಲ ಕಾಮೆಂಟ್‌: ಮೂವರು ದರ್ಶನ್‌ ಅಭಿಮಾನಿಗಳು ವಶಕ್ಕೆ

ಸಾಮಾಜಿಕ ಜಾಲತಾಣಗಳ ಐಡಿಗಳ ಪರಿಶೀಲನೆ ನಡೆಸಿದ ಪೊಲೀಸರು ವಿಳಾಸ ಪತ್ತೆ ಹಚ್ಚಿದ್ದು, ಇದರ ಆಧಾರದ ಮೇಲೆ ಆಗಸ್ಟ್ 1ರಂದು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.;

Update: 2025-08-02 04:25 GMT

ನಟಿ ರಮ್ಯಾ

ನಟಿ ರಮ್ಯಾ ಅವರಿಗೆ ಅಶ್ಲೀಲ ಪದಗಳಿಂದ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಕ್ರೈಮ್ ಪೊಲೀಸರು ಮೂವರು ದರ್ಶನ್‌ ಅಭಿಮಾನಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅಶ್ಲೀಲ ಪದ ಬಳಸಿ ಕಾಮೆಂಟ್ ಮಾಡಿದ ಆರೋಪದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.  

ಪೊಲೀಸರು ಸಾಮಾಜಿಕ ಜಾಲತಾಣಗಳ ಐಡಿಗಳನ್ನು ಪರಿಶೀಲನೆ ನಡೆಸಿ ವಿಳಾಸ ಪತ್ತೆ ಮಾಡಿದ್ದು, ಅದರ ಆಧಾರದ ಮೇಲೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದ್ದನ್ನು ಸುಪ್ರೀಂಕೋರ್ಟ್ ಟೀಕಿಸಿತ್ತು. ಈ ಬೆಳವಣಿಗೆಯ ನಂತರ ನಟಿ ರಮ್ಯಾ ಅವರು, "ಸುಪ್ರೀಂಕೋರ್ಟ್ ಜನಸಾಮಾನ್ಯರ ಪಾಲಿಗೆ ಭರವಸೆಯ ಬೆಳಕಾಗಿದೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ಭರವಸೆ ಮೂಡಿದೆ," ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.

ಈ ಪೋಸ್ಟ್‌ನಿಂದ ಆಕ್ರೋಶಗೊಂಡಿದ್ದ ದರ್ಶನ್ ಅಭಿಮಾನಿಗಳು, ರಮ್ಯಾ ವಿರುದ್ಧ ತೀವ್ರ ನಿಂದನೀಯ ಹಾಗೂ ಅಶ್ಲೀಲ ಕಾಮೆಂಟ್‌ಗಳನ್ನು ಹಾಕಲು ಆರಂಭಿಸಿದ್ದರು. ಈ ಬಗ್ಗೆ ನಟಿ ರಮ್ಯಾ ಅವರು ಸೈಬರ್ ಕ್ರೈಮ್ ವಿಭಾಗ ಮತ್ತು ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು.

ನಟಿ ರಮ್ಯಾ ನೀಡಿದ ದೂರಿನ ಅನ್ವಯ ಎಫ್ಐಆರ್ ದಾಖಲಾಗಿತ್ತು. ಸೈಬರ್ ಕ್ರೈಂ ಪೊಲೀಸರು ಪ್ರಮೋದ ಗೌಡ ಎಂಬ ವ್ಯಕ್ತಿಗೆ ಸೇರಿದ 43 ಅಕೌಂಟ್ ಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. 

Tags:    

Similar News