ಮುಂಗಾರುಪೂರ್ವ ಮಳೆಯ ಅಬ್ಬರಕ್ಕೆ ಸಿಲಿಕಾನ್ ಬೆಂಗಳೂರು ನಗರ ತತ್ತರಿಸಿದೆ. ಸೋಮವಾರ ರಾತ್ರಿಯಿಡೀ ಸುರಿದ ಭಾರಿ ಮಳೆಯಿಂದಾಗಿ ನಗರದ ಬಹುತೇಕ ರಸ್ತೆಗಳು ಜಲಾವೃತಗೊಂಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಭಾರೀ ಮಳೆಯ ಪರಿಣಾಮ ಮೂವರು ದುರ್ಮರಣ ಹೊಂದಿದ್ದಾರೆ.Bengaluru's record 105.5mm rain on May 19, the highest in 15 years. 3 died: a man(63) and boy(12) electrocuted in Mico Layout, and a woman(35) killed by a wall collapse in Whitefield. IMD forecasts moderate rain till May 23.#BengaluruRains #BengaluruRain #Bangalore pic.twitter.com/iKpXMOZBEj— GeoTechWar (@geotechwar) May 20, 2025 ಮಳೆ ಸಂಬಂಧಿಸಿದ ಅನಾಹುತಗಳಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಸೋಮವಾರ ಬೆಳಗ್ಗೆ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಬಿಟಿಎಂ ಲೇಔಟ್ನ ಎನ್.ಎಸ್.ಪಾಳ್ಯದಲ್ಲಿರುವ ಮಧುವನ ಅಪಾರ್ಟ್ಮೆಂಟ್ನ ಬೇಸ್ಮೆಂಟ್ ಜಲಾವೃತಗೊಂಡಿದ್ದು, ನೀರು ಹೊರಹಾಕಲು ಯತ್ನಿಸುತ್ತಿದ್ದ 55 ವರ್ಷದ ಮನೋಹರ ಕಾಮತ್ ಮತ್ತು 9 ವರ್ಷದ ಬಾಲಕ ದಿನೇಶ್ ವಿದ್ಯುತ್ ಶಾಕ್ನಿಂದ ಸಾವನ್ನಪ್ಪಿದ್ದಾರೆ.ಕೆರೆಗಳಂತಾದ ರಸ್ತೆಗಳು ನಗರದ ಬಹುತೇಕ ರಸ್ತೆಗಳ ಮೇಲೆ ಭಾರಿ ಪ್ರಮಾಣದ ಮಳೆ ನೀರು ನಿಂತುಕೊಂಡಿದ್ದು, ಕೆರೆಗಳಂತಾಗಿವೆ. ಹೀಗಾಗಿ ವಾಹನ ಸಂಚಾರಕ್ಕೆ ಸಂಪೂರ್ಣ ಅಡಚಣೆ ಉಂಟಾಯಿತು. ಮಳೆ ನಿಂತಿದ್ದರೂ, ರಸ್ತೆಗಳ ಮೇಲಿನ ನೀರು ಇಳಿಯುತ್ತಿಲ್ಲ. ಇದರಿಂದಾಗಿ ವಾಹನ ಸವಾರರು ತೀವ್ರ ಪರದಾಡುತ್ತಿದ್ದು, ಎಲ್ಲೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ. ವಿಶೇಷವಾಗಿ ಹೊಸೂರು ರಸ್ತೆ ಮತ್ತು ತುಮಕೂರು ರಸ್ತೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ. ಆಂಬ್ಯುಲೆನ್ಸ್ಗಳು ಸಹ ಟ್ರಾಫಿಕ್ನಲ್ಲಿ ಸಿಲುಕಿಕೊಂಡು ಪರದಾಡುವ ದೃಶ್ಯ ಕಂಡುಬಂದಿದೆ. ಎಲ್ಲೆಲ್ಲಿ ಮಳೆ ಮೆಜೆಸ್ಟಿಕ್ ಸುತ್ತಮುತ್ತಲೂ ಕೆ.ಆರ್. ಮಾರುಕಟ್ಟೆ ಪ್ರದೇಶದಲ್ಲಿ, ಜಯನಗರ, ಜೆಪಿ ನಗರದಲ್ಲಿ ವಿಜಯನಗರ, ಚಂದ್ರಲೇಔಟ್, ನಾಗರಬಾವಿ, ರಾಜಾಜಿನಗರ, ಆರ್.ಟಿ. ನಗರ, ಹೆಬ್ಬಾಳ, ಕೋರಮಂಗಲ, ಆರ್.ಆರ್. ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಭಾರಿ ಮಳೆಯಾಗಿದೆ. ರಾತ್ರಿ ಸುರಿದ ಮಳೆಯು ರಾಜಧಾನಿ ಜನರ ನಿದ್ದೆಗೆಡಿಸಿದೆ. ನಂದಗೋಕುಲ ಬಡಾವಣೆ ತತ್ತರ ನಾಗವಾರದ ಧಣಿಸಂಧ್ರದ ನಂದಗೋಕುಲ ಬಡಾವಣೆಯಲ್ಲಿ ಮಳೆ ಅಬ್ಬರಕ್ಕೆ ಮನೆಯೊಳಗೆ ಸುಮಾರು 4-5 ಅಡಿ ನೀರು ನಿಂತಿದ್ದು, ಬಡಾವಣೆ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಾಜಕಾಲುವೆ ತುಂಬಿ ಹರಿದು ಬಡಾವಣೆಗೆ ನುಗ್ಗಿದೆ. ಇದರಿಂದ ಕೋಪಗೊಂಡ ನಿವಾಸಿಗಳು ಪಾಲಿಕೆ ಅಧಿಕಾರಿಗಳು ಮತ್ತು ಶಾಸಕರ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋರಮಂಗಲದಲ್ಲಿ ಪ್ರವಾಹ ಸನ್ನಿವೇಶ ಕೋರಮಂಗಲದ ಐಷಾರಾಮಿ ಪ್ರದೇಶಗಳೂ ಭಾರಿ ಮಳೆಗೆ ಕೆರೆಯಂತಾಗಿದೆ. ಸುಮಾರು ಮೂರು ಅಡಿ ನೀರು ನಿಂತು ಜನಜೀವನ ಅಸ್ತವ್ಯಸ್ತಗೊಂಡಿದೆ. ಕೋರಮಂಗಲದ ನಾಲ್ಕನೇ ಬ್ಲಾಕ್ ಸಂಪೂರ್ಣ ಜಲಾವೃತಗೊಂಡಿದೆ. ಮನೆಗಳಿಂದ ಹೊರಬರಲು ಸಹ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.