PUC Result | ನಾಳೆ ದ್ವಿತೀಯ ಪಿಯುಸಿ ಮೂರನೇ ಪರೀಕ್ಷೆಯ ಫಲಿತಾಂಶ

Update: 2024-07-15 14:01 GMT

ದ್ವಿತೀಯ ಪಿಯುಸಿ ಪರೀಕ್ಷೆ-3ರ ಫಲಿತಾಂಶ ಮಂಗಳವಾರ(ಜು.16) ಪ್ರಕಟವಾಗಲಿದೆ.

ಅಂದು ಮಧ್ಯಾಹ್ನ 3 ಗಂಟೆಗೆ ಅಧಿಕೃತ ವೆಬ್​​ ಸೈಟ್​ನಲ್ಲಿ http//karresults.nic.in ಫಲಿತಾಂಶ ಲಭ್ಯವಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಅಧ್ಯಕ್ಷೆ ಎನ್​ ಮಂಜುಶ್ರೀ ತಿಳಿಸಿದ್ದಾರೆ.

ಜೂನ್​ 24ರಿಂದ ಜುಲೈ 05ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ-03 ನಡೆಸಲಾಗಿತ್ತು. ರಾಜ್ಯದ ಜಿಲ್ಲೆ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, ಮೌಲ್ಯಮಾಪನ ನಡೆಸಿದ ಬಳಿಕ ಇದೀಗ ಫಲಿತಾಂಶ ಪ್ರಕಟಿಸಲಾಗುತ್ತಿದೆ.

ಫಲಿತಾಂಶ ತಿಳಿಯಲು ಹೀಗೆ ಮಾಡಿ..

ಅಧಿಕೃತ ಕೆಎಸ್​​​​ಇಎಬಿ (KSEAB) ವೆಬ್‌ಸೈಟ್‌ಗೆ http//karresults.nic.in ಭೇಟಿ ನೀಡಿ

ಇತ್ತೀಚಿನ ಸುದ್ದಿ ವಿಭಾಗದಲ್ಲಿ 2ನೇ ಪಿಯುಸಿ ಪರೀಕ್ಷೆ-3 ಫಲಿತಾಂಶ ಎಂಬ ಲಿಂಕ್ ಮೇಲೆ ಕ್ಲಿಕ್​ ಮಾಡಿ

ನಿಮ್ಮ ನೋಂದಣಿ ಸಂಖ್ಯೆ ಅಥವಾ ಜನ್ಮದಿನಾಂಕ ಮೂಲಕ ಪೋರ್ಟಲ್‌ಗೆ ಲಾಗ್ ಇನ್ ಮಾಡಿ

ಒಮ್ಮೆ ನಿಮ್ಮ ವಿವರಗಳನ್ನು ಸಲ್ಲಿಸಿದ ಬಳಿಕ ಕ್ಯಾಪ್ಚಾವನ್ನು ನಮೂದಿಸಿ ಸಬ್​​ಮಿಟ್​​ ಬಟನ್ ಕ್ಲಿಕ್​ ಮಾಡಿ

ನಿಮ್ಮ ಪರೀಕ್ಷೆಯ ಫಲಿತಾಂಶ ಪರದೆಯ ಮೇಲೆ ಮೂಡಲಿದೆ

ಬಳಿಕ ಫಲಿತಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಿ

Tags:    

Similar News