Naxal Free Karnataka: ನಕ್ಸಲ್ ಕೋಟೆಹೊಂಡ ರವೀಂದ್ರ ಇಂದು, ತೊಂಬಟ್ಟು ಲಕ್ಷ್ಮಿ ನಾಳೆ ಶರಣು

Naxal Surrender : ಜನವರಿ ೮ರಂದು ಲತಾ ಮುಂಡಗಾರು, ವನಜಾಕ್ಷಿ ಬಾಳೆಹೊಳೆ, ಸುಂದರಿ ಕುತ್ತೂರು, ಮಾರಪ್ಪ ಅರೋಲಿ, ಕೆ.ವಸಂತ(ತಮಿಳುನಾಡು), ಟಿ.ಎನ್.ಜಿಷಾ(ಕೇರಳ) ನಕ್ಸಲ್‌ ಚಟುವಟಿಕೆ ತೊರೆದು ಮುಖ್ಯವಾಹಿನಿಗೆ ಬಂದಿದ್ದರು.;

Update: 2025-02-01 04:03 GMT
ಕೋಟೆಕೊಂಡ ರವೀಂಧ್ರ

ನಕ್ಸಲ್ ಚಳುವಳಿಯಲ್ಲಿ ಸಕ್ರಿಯರಾಗಿದ್ದ ಶೃಂಗೇರಿ ತಾಲೂಕಿನ ಕಿನ ಕಿಗ್ಗಾ ಗ್ರಾಮದ ಕೋಟೆಹೊಂಡ ರವೀಂದ್ರ ಇಂದು ಮುಖ್ಯವಾಹಿನಿಗೆ ಬರಲಿದ್ದಾರೆ.  ಉಳಿದವರ ಸಂಪರ್ಕ ತಪ್ಪಿದ ಬಳಿಕ ಕಾಡಿನಲ್ಲೇ ಉಳಿದಿದ್ದ ಅವರು ನಕ್ಸಲ್‌ ಚಟುವಟಿಕೆಯಲ್ಲಿದ್ದ ಮಲೆನಾಡಿನ ಊರಿನವರು. ಇನ್ನೊಬ್ಬರು ನಕ್ಸಲ್‌ ಮಹಿಲೆ ತೊಂಬಟ್ಟು ಲಕ್ಷ್ಮಿ ಭಾನುವಾರ ಶರಣಾಗಳಿದ್ದಾಳೆ. 

ಆ ಮೂಲಕ ಸರ್ಕಾರಿ ದಾಖಲೆಗಳ ಪ್ರಕಾರ, ಕರ್ನಾಟಕ ಅಧಿಕೃತವಾಗಿ ನಕ್ಸಲ್‌ ಮುಕ್ತ ರಾಜ್ಯವಾಗಲಿದೆ. ಶನಿವಾರ ಬೆಳಗ್ಗೆ 11 ಗಂಟೆಗೆ ಚಿಕ್ಕಮಗಳೂರಿನ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಶರಣಾಗಲಿದ್ದಾರೆ.

ಕಳೆದ ವರ್ಷ, ನಕ್ಸಲ್ ನಾಯಕ ವಿಕ್ರಮ್ ಗೌಡ ಎನ್‌ಕೌಂಟರ್‌ ಬಳಿಕ ಉಳಿದ ಹೋರಾಟಗಾರರ ಜೀವ ಉಳಿಸಬೇಕು ಎಂದು ಪ್ರಗತಿಪರ ಚಿಂತಕರು ಆಗ್ರಹಿಸಿದ್ದರು. ದಮನಿತರ ಪರವಾಗಿ ಹೋರಾಡುತ್ತಿರುವವರನ್ನು ಮುಖ್ಯವಾಹಿನಿಗೆ ಕರೆತರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹಾಕಿದ್ದರು.

ಜನವರಿ 8ರಂದು ಲತಾ ಮುಂಡಗಾರು, ವನಜಾಕ್ಷಿ ಬಾಳೆಹೊಳೆ, ಸುಂದರಿ ಕುತ್ತೂರು, ಮಾರಪ್ಪ ಅರೋಲಿ, ಕೆ.ವಸಂತ(ತಮಿಳುನಾಡು), ಟಿ.ಎನ್.ಜಿಷಾ(ಕೇರಳ) ನಕ್ಸಲ್‌ ಚಟುವಟಿಕೆ ತೊರೆದು ಮುಖ್ಯವಾಹಿನಿಗೆ ಬಂದಿದ್ದರು. ಬೆಂಗಳೂರಿನಲ್ಲಿ ಸಿಎಂ ನಿವಾಸದಲ್ಲಿಅವರೆಲ್ಲರನ್ನು ಶರಣಾಗತಿಯಾಗಿದ್ದು, ಈಗ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಆರಂಭದಲ್ಲಿ ಇವರೊಂದಿಗೆ ಇದ್ದ  ರವೀಂದ್ರ ಅವರು ಶರಣಾಗತಿ ವೇಳೆ ಸಂಪರ್ಕ ಕಡಿತ ಮಾಡಿಕೊಂಡಿದ್ದರು. ಹೀಗಾಗಿ ಅವರು ಆ ವೇಳೆ ಮುಖ್ಯವಾಹಿನಿಗೆ ಬಂದಿರಲಿಲ್ಲ.

 ರವೀಂದ್ರ ಕುಟುಂಬದ ಮನವಿ

ಎಲ್ಲರೂ ಬಂದಿದ್ದರೂ ರವೀಂದ್ರ ವಾಪಸ್‌ ಬರದಿರುವುದಕ್ಕೆ ಅವರ ಕುಟುಂಬ  ಬೇಸರ ವ್ಯಕ್ತಪಡಿಸಿತ್ತು. ರವೀಂದ್ರ ಕುಟುಂಬ ಈಗಲೂ ಶೃಂಗೇರಿಯ ಕಾಡಂಚಿನ ಗ್ರಾಮದಲ್ಲಿ ಬದುಕು ಸಾಗಿಸುತ್ತಿದೆ. ರವೀಂದ್ರ ಶರಣಾದರೆ ಸಂತೋಷದಿಂದ ಸ್ವೀಕರಿಸುತ್ತೇವೆ ಎಂದು ಕುಟುಂಬದವರು ಮಾಧ್ಯಮಗಳಿಗೆ ಹಿಂದೆ ತಿಳಿಸಿದ್ದರು.

ಶಾಂತಿಗಾಗಿ ನಾಗರಿಕ ವೇದಿಕೆ ಮತ್ತು ನಕ್ಸಲ್ ಶರಣಾಗತಿ ಸಮಿತಿ ಅವರನ್ನು ಪತ್ತೆ ಹಚ್ಚಿ ಉಳಿದವರು ಶರಣಾಗತಿಯಾದಂತೆ ಅವರಿಗೂ ಮುಖ್ಯವಾಹಿನಿಗೆ ಬರುವಂತೆ ಆಹ್ವಾನ ಕೊಟ್ಟಿತ್ತು., ಬಳಿಕ ಅಧಿಕಾರಿಗಳ ಜತೆ ಮಾತನಾಡಿ ಶರಣಾಗತಿಗೆ ಸಮಯ ನಿಗದಿ ಮಾಡಿದ್ದಾರೆ. ಇಂದು ಬೆಳಿಗ್ಗೆ 11 ಗಂಟೆ ವೇಳೆಗೆ ಎಸ್ಪಿ ಕಚೇರಿಯಲ್ಲಿ ಶರಣಾಗಲಿದ್ದಾರೆ ಎಂದು ನಕ್ಸಲ್ ಶರಣಾಗತಿ ಸಮಿತಿ ಸದಸ್ಯ ಕೆ.ಪಿ.ಶ್ರೀಪಾಲ್ ಮತ್ತು ಕೆ.ಎಲ್.ಅಶೋಕ್ ತಿಳಿಸಿದ್ದಾರೆ.

ಸರ್ಕಾರದ ಪ್ರಕಟಣೆ

ಇದುವರೆಗೆ ತಲೆಮರೆಸಿಕೊಂಡಿದ್ದ ನಕ್ಸಲ್ ಕೋಟೆಹೊಂಡ ರವಿ ಶೃಂಗೇರಿಯಿಂದ 4 ಕಿ.ಮೀ ದೂರದಲ್ಲಿರುವ ನೆಮ್ಮಾರ್ ಅರಣ್ಯ ಪ್ರದೇಶದಲ್ಲಿ ಶರಣಾಗಿದ್ದಾರೆ ಎಂದು ಪ್ರಕಟಿಸಲು ಸಂತೋಷವಾಗಿದೆ. ಅಲ್ಲಿಂದ ಶರಣಾಗತಿ ಪ್ರಕ್ರಿಯೆಗಾಗಿ ಚಿಕ್ಕಮಗಳೂರಿಗೆ ಸಾಗಿಸುತ್ತಿದ್ದೇವೆ.ಬಹುದಿನಗಳಿಂದ ತಲೆಮರೆಸಿಕೊಂಡಿರುವ ನಕ್ಸಲ್ ತೊಂಬಟ್ಟು ಲಕ್ಷ್ಮಿ ನಾಳೆ ಚಿಕ್ಕಮಗಳೂರು ಅಥವಾ ಉಡುಪಿಯಲ್ಲಿ ಶರಣಾಗಲಿದ್ದಾರೆ ಎಂದು ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ.

ಪೊಲೀಸರಿಗೆ ಪದಕ

ಕರ್ನಾಟಕವನ್ನು ನಕ್ಸಲ್ ಮುಕ್ತ ರಾಜ್ಯವನ್ನಾಗಿ ಮಾಡಲು ಶ್ರಮಿಸಿದ 22 ಪೊಲೀಸ್ ಅಧಿಕಾರಿಗಳ ತಂಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳ ಪದಕ ಘೋಷಿಸಿದ್ದಾರೆ.

Tags:    

Similar News