ಸಂಚಾರ ಆ್ಯಪ್‌ಗಳಲ್ಲಿ ನಮ್ಮ ಮೆಟ್ರೋ ಕ್ಯೂಆರ್ ಟಿಕೆಟ್‌ ಲಭ್ಯ

ಪ್ರಯಾಣಿಕರಿಗೆ ಡಿಜಿಟಲ್ ವಾಣಿಜ್ಯದ ಓಪನ್ ನೆಟ್ವರ್ಕ್ ಪ್ಲಾಟ್ ಫಾರ್ಮ್​​ ಆಧಾರಿತ ಮೆಟ್ರೋ ಕ್ಯೂಆರ್ ಟಿಕೆಟ್ ಸೇವೆಯನ್ನು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಗುರುವಾರ ಉದ್ಘಾಟಣೆ ಮಾಡಿದ್ದಾರೆ.;

Update: 2025-07-11 05:21 GMT

ನಮ್ಮ ಮೆಟ್ರೋ 

ರ‍್ಯಾಪಿಡೋ, ನಮ್ಮಯಾತ್ರಿ, ರೆಡ್‌ ಬಸ್ ಸೇರಿದಂತೆ ಪ್ರಮುಖ ಸಂಚಾರ ಆ್ಯಪ್‌ಗಳಲ್ಲಿ ನೇರವಾಗಿ ಮೆಟ್ರೋ ಕ್ಯೂಆರ್ ಟಿಕೆಟ್‌ಗಳನ್ನು ಪಡೆಯಬಹುದು.

ಪ್ರಯಾಣಿಕರಿಗೆ ಡಿಜಿಟಲ್ ವಾಣಿಜ್ಯದ ಓಪನ್ ನೆಟ್ವರ್ಕ್  ಪ್ಲಾಟ್ ಫಾರ್ಮ್​​ ಆಧಾರಿತ ಮೆಟ್ರೋ ಕ್ಯೂಆರ್ ಟಿಕೆಟ್ ಸೇವೆಯನ್ನು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಗುರುವಾರ ಉದ್ಘಾಟನೆ ಮಾಡಿದ್ದಾರೆ. 

ಈ ಬಗ್ಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ತನ್ನ ಎಕ್ಸ್‌ ಖಾತೆಯ ಮೂಲಕ ಮಾಹಿತಿ ನೀಡಿದ್ದು, ಸಚಿವ ಪ್ರಿಯಾಂಕ್ ಖರ್ಗೆ ಅವರು  ಬಿಎಂಆ‌ರ್​ಸಿ​ಎಲ್ ಸಂಸ್ಥೆಯ ಡಿಜಿಟಲ್ ವಾಣಿಜ್ಯದ ಓಪನ್ ನೆಟ್ವರ್ಕ್ ಪ್ಲಾಟ್ ಫಾರ್ಮ್ ಆಧಾರಿತ ಮೆಟ್ರೋ ಕ್ಯೂಆರ್ ಟಿಕೆಟ್ ಸೇವೆಯನ್ನು ಉದ್ಘಾಟಿಸಿದರು. ಈ ನೂತನ ತಂತ್ರಜ್ಞಾನದ ಮೂಲಕ ರ‍್ಯಾಪಿಡೋ, ನಮ್ಮ ಯಾತ್ರಿ, ಟಮ್ಮಾಕ್, ರೆಡ್‌ ಬಸ್ ಸೇರಿದಂತೆ ಪ್ರಮುಖ ಸಂಚಾರ ಆ್ಯಪ್‌ಗಳಲ್ಲಿ ನೇರವಾಗಿ ಮೆಟ್ರೋ ಕ್ಯೂಆರ್ ಟಿಕೆಟ್‌ಗಳನ್ನು ಪಡೆಯಬಹುದಾಗಿದೆ ಎಂದು ತಿಳಿಸಿದೆ. 

ಬಿಎಂಆ‌ಸಿಎಲ್ ವತಿಯಿಂದ ಸಿಸ್ಟಾ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಶಂಕರ್ ಎ.ಎಸ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನಮ್ಮ ಮೆಟ್ರೋ ನಗರದ ಜನರ ಜೀವನಾಡಿಯಾಗಿದೆ. ಈಗಾಗಲೇ ಮೆಟ್ರೋ ಟಿಕೆಟ್‌ ಖರೀದಿಸಲು ಕ್ಯೂ ಆರ್‌ ಕೋಡ್‌, ವಾಟ್ಸಾಪ್‌ಗಳ ಮೂಲಕ ಟಿಕೆಟ್‌ ಪಡೆಯಬಹುದಾಗಿದೆ. ಇದೀಗ ಸಂಚಾರ ಆ್ಯಪ್‌‌ಗಳ ಮೂಲಕ ಟಿಕೆಟ್‌ಗೆ ವ್ಯವಸ್ಥೆ ಮಾಡಿರುವುದು ಜನರಿಗೆ ಇನ್ನು ಹೆಚ್ಚು ಲಾಭವಾಗಿಸಿದೆ. 

Tags:    

Similar News