ನನ್ನ ಮಾತಿನಲ್ಲಿ ತಪ್ಪು ಹುಡುಕುವವರೇ ಹೆಚ್ಚು: ಡಿ.ಕೆ. ಶಿವಕುಮಾರ್

ಕೆಲವರು ನನ್ನನ್ನು 'ಬಂಡೆ' ಎಂದು ಕರೆಯುತ್ತಾರೆ. ಬಂಡೆ ಎಂಬುದು ಪ್ರಕೃತಿ, ಅದನ್ನು ಕಡಿದರೆ ಆಕೃತಿಯಾಗುತ್ತದೆ, ಪೂಜಿಸಿದರೆ ಸಂಸ್ಕೃತಿಯಾಗುತ್ತದೆ ಎಂದು ಡಿಕೆ ಶಿವಕುಮಾರ್​ ಹೇಳಿದರು.;

Update: 2025-08-31 03:58 GMT

ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ 64ನೇ ಜನ್ಮನಕ್ಷತ್ರೋತ್ಸವದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, "ನಾನು ಏನು ಮಾತನಾಡಿದರೂ ಅದರಲ್ಲಿ ತಪ್ಪು ಕಂಡುಹಿಡಿಯುವವರೇ ಹೆಚ್ಚಾಗಿದ್ದಾರೆ. ಹೀಗಾಗಿ ನನ್ನ ಬಾಯಿಂದ ಯಾವುದೇ ತಪ್ಪು ನುಡಿ ಬರದಂತೆ ಶ್ರೀಕೃಷ್ಣನಲ್ಲಿ ಪ್ರಾರ್ಥಿಸುತ್ತೇನೆ," ಎಂದರು.

ಕೆಲವರು ನನ್ನನ್ನು 'ಬಂಡೆ' ಎಂದು ಕರೆಯುತ್ತಾರೆ. ಬಂಡೆ ಎಂಬುದು ಪ್ರಕೃತಿ, ಅದನ್ನು ಕಡಿದರೆ ಆಕೃತಿಯಾಗುತ್ತದೆ, ಪೂಜಿಸಿದರೆ ಸಂಸ್ಕೃತಿಯಾಗುತ್ತದೆ. ಒಂದು ಬಂಡೆಯಿಂದ ಮೆಟ್ಟಿಲು, ಆಧಾರ ಸ್ತಂಭ, ಜಲ್ಲಿ ಅಥವಾ ವಿಗ್ರಹವನ್ನೂ ಮಾಡಬಹುದು. ಅದೇ ರೀತಿ, ನೀವು ನನ್ನನ್ನು ಹೇಗೆ ಬೇಕಾದರೂ ಬಳಸಿಕೊಳ್ಳಬಹುದು ಎಂದು ಡಿಸಿಎಂ ತಿಳಿಸಿದರು.

ಧರ್ಮ ಮತ್ತು ನಂಬಿಕೆ ಆಯ್ಕೆ ಎಂದ ಡಿಕೆಶಿ 

ಧರ್ಮ, ಪೂಜೆ, ಮತ್ತು ಭಕ್ತಿಗಳು ಪ್ರದರ್ಶನದ ವಸ್ತುಗಳಲ್ಲ, ಬದಲಾಗಿ ಎಲ್ಲರ ಆಚಾರ-ವಿಚಾರಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ ಎಂದು ಅವರು ಹೇಳಿದರು. ತಾವು ಈ ಹಿಂದೆ ಹಲವು ಬಾರಿ ಕೃಷ್ಣ ಮಠಕ್ಕೆ ಭೇಟಿ ನೀಡಿರುವುದಾಗಿ ಸ್ಮರಿಸಿದ ಅವರು, "ಶ್ರೀಗಳು ನನಗೆ ಕೃಷ್ಣನ ವಿಶ್ವರೂಪ ದರ್ಶನವನ್ನು ತೋರಿಸಿದರು. ಅದನ್ನು ನೋಡಿದಾಗ ನನ್ನ 50-60 ವರ್ಷಗಳ ಬದುಕಿನ ನೆನಪುಗಳು ತಲೆಯಲ್ಲಿ ಸುಳಿದವು," ಎಂದರು. ಈ ಸಂದರ್ಭದಲ್ಲಿ ಅವರು ಭಗವದ್ಗೀತೆಯ ಶ್ಲೋಕ ಪಠಿಸಿದರು:

ಪುತ್ತಿಗೆ ಶ್ರೀಗಳು ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣವನ್ನು ಉಲ್ಲೇಖಿಸಿದ ಶಿವಕುಮಾರ್, "ನಾವು ಧರ್ಮಕ್ಕೆ ಅಂಟಿಕೊಳ್ಳಬಾರದು ಅಥವಾ ಬಂಧಿಸಲ್ಪಡಬಾರದು, ಬದಲಾಗಿ ನಾವು ಬಯಸುವ ಧರ್ಮವನ್ನು ಆಯ್ಕೆ ಮಾಡಿಕೊಳ್ಳಬೇಕು' ಎಂಬ ಅವರ ಮಾತನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ," ಎಂದು ಹೇಳಿದರು.

ಇದೇ ಸಂದರ್ಭದಲ್ಲಿ, ಶ್ರೀಕೃಷ್ಣನ ದರ್ಶನ ಪಡೆದು, ಶ್ರೀಗಳ ಜೊತೆಯಲ್ಲಿ ಮಧ್ವಾಚಾರ್ಯರ ಅಂಚೆಚೀಟಿ ಬಿಡುಗಡೆ ಮಾಡುವ ಅವಕಾಶ ಸಿಕ್ಕಿದ್ದು ತಮ್ಮ ಭಾಗ್ಯ ಎಂದು ಅವರು ಭಾವನೆ ವ್ಯಕ್ತಪಡಿಸಿದರು.

Tags:    

Similar News