ಮೇಕೆದಾಟು: ಸಂಗಮದಲ್ಲಿ ಮುಳಗಿ ಐವರು ವಿದ್ಯಾರ್ಥಿಗಳ ಸಾವು

Update: 2024-04-29 14:46 GMT

ಕನಕಪುರದ ಮೇಕೆದಾಟು ನೋಡಲು ಹೋಗಿದ್ದ ಕಾಲೇಜು ವಿದ್ಯಾರ್ಥಿಗಳು ಕಾಲು ಜಾರಿ ನದಿಯಲ್ಲಿ ಬಿದ್ದು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಸಾವಿಗೀಡಾದ ವಿದ್ಯಾರ್ಥಿಗಳು ಬೆಂಗಳೂರಿನ ಪೀಣ್ಯಾ ಸೆಕೆಂಡ್​ ಸ್ಟೇಜ್‌ನಲ್ಲಿರುವ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಗಳೆಂದು ಗುರುತಿಸಲಾಗಿದೆ. ಒಟ್ಟು 12 ಜನ ವಿದ್ಯಾರ್ಥಿಗಳು ಪ್ರವಾಸಕ್ಕೆ ಹೋಗಿದ್ದರು. ಈ ಪೈಕಿ 5 ಜನ ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಅದೃಷ್ಟವಶಾತ್ 7 ವಿದ್ಯಾರ್ಥಿಗಳು ಬದುಕುಳಿದಿದ್ದಾರೆ.

12 ಜನ ವಿದ್ಯಾರ್ಥಿಗಳು ಟಿಟಿ ವಾಹನದಲ್ಲಿ ಮೇಕೆದಾಟಿಗೆ ತೆರಳಿದ್ದರು, ಈ ವೇಳೆ ಘಟನೆ ಸಂಭವಿಸಿದೆ. ಸಾವಿಗೀಡಾದವರನ್ನು ಅಭಿಷೇಕ್, ತೇಜಸ್, ಹರ್ಷಿತ್, ವರ್ಷಾ, ನೇಹ ಎಂದು ಗುರುತಿಸಲಾಗಿದೆ. ಕನಕಪುರದ ಸಂಗಮದಲ್ಲಿ ಕೈ ಹಿಡಿದು ಒಬ್ಬರೊಬ್ಬರು ಮತ್ತೊಂದು ದಡಕ್ಕೆ ಹೋಗುವ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.

ಮೃತ ಪಟ್ಟವರಲ್ಲಿ ವರ್ಷ (20), ಕೆಎಲ್ಇ ಕಾಲೇಜು ರಾಜಾಜಿನಗರ 2ನೇ ಹಂತ, ಅಭಿಷೇಕ್ (20) ಬಿಹಾರ ಮೂಲದವರಾಗಿದ್ದು ಮಲ್ಲೇಶ್ವರ ಸರ್ಕಾರಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ, ಹರ್ಪಿತ ಎನ್.ಎಲ್ (20) ಎಂಜಿನಿಯರಿಂಗ್ 2nd ಇಯರ್ ಚಿಕ್ಕಬಾಣವಾರ ಆರ್.ಆರ್ ಕಾಲೇಜು (ಮಂಡ್ಯ ಮೂಲ), ತೇಜಸ್ (21) ಬಿಸಿಎ 2nd year ವಿಜಯನಗರ ಗೌರ್ಮೆಂಟ್‌ ಕಾಲೇಜ್‌ (ಚಿತ್ರದುರ್ಗ ಮೂಲ), ನೇಹ (19) ಕೆಮಿಸ್ಟ್ರಿ ಕೆಎಲ್ಇ ಕಾಲೇಜು ಆರ್.ಆರ್ ನಗರ (ಚಿತ್ರದುರ್ಗ ಮೂಲ) ಎಂದು ಗುರುತಿಸಲಾಗಿದೆ.

ಇನ್ನು ಈ ವಿದ್ಯಾರ್ಥಿಗಳ ಮೃತದೇಹವನ್ನು ದಯಾನಂದ ವಿದ್ಯಾಸಾಗರ್ ಆಸ್ಪತ್ರೆಗೆ ಮೃತದೇಹ ರವಾನಿಸಲಾಗಿದ್ದು, ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Tags:    

Similar News