ದರ್ಶನ್‌ಗೆ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ: ರೀಟ್ವೀಟ್ ಮಾಡಿದ ನಟಿ ರಮ್ಯಾ
ದರ್ಶನ್ ಬಂಧನದ ಬೆನ್ನಲ್ಲೇ ಕನ್ನಡ ಚಿತ್ರರಂಗದ ಹಲವು ನಟ, ನಟಿಯರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದು, ನಟಿ ರಮ್ಯಾ ಅವರ ಅಭಿಪ್ರಾಯಕ್ಕೆ, ನಟ ದರ್ಶನ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.;
ಚಿತ್ರದುರ್ಗದ ರೇಣುಕಾಸ್ವಾಮಿ ಎನ್ನುವ ವ್ಯಕ್ತಿಯ ಕೊಲೆ ಆರೋಪದಲ್ಲಿ ನಟ ದರ್ಶನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ದರ್ಶನ್ ಬಂಧನದ ಬೆನ್ನಲ್ಲೇ ಕನ್ನಡಚಿತ್ರರಂಗದ ಹಲವು ನಟ- ನಟಿಯರು ಆ ಬಗ್ಗೆ ಪ್ರತಿಕ್ರಿಯಿಸುತ್ತಿದ್ದು, ನಟಿ ರಮ್ಯಾ ಅವರೂ ತಮ್ಮ ́ಕ್ಷ ́ ಖಾತೆಯಲ್ಲಿ ಆ ಬಗ್ಗೆ ಪ್ರತಿಕ್ರಿಯೆ ನೀಡಿದ್ಧಾರೆ. ಅವರ ಅಭಿಪ್ರಾಯಕ್ಕೆ, ನಟ ದರ್ಶನ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಬಾಕ್ಸ್ ಆಫೀಸ್ ಎನ್ನುವ ಎಕ್ಸ್ ಖಾತೆಯಿಂದ ಮಾಡಲಾಗಿರುವ ಟ್ವೀಟ್‌ವೊಂದನ್ನು ನಟಿ ರಮ್ಯ ಅವರು ರೀ ಟ್ವೀಟ್ ಮಾಡಿದ್ದು, ದರ್ಶನ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ನಟಿ ರಮ್ಯ ಅವರು ಮಾಡಿರುವ ರೀಟ್ವೀಟ್‌ನಲ್ಲಿ ಈ ರೀತಿ ಇದೆ.
"ಸೆಕ್ಷನ್ 302 ರ ಅಡಿಯಲ್ಲಿ, ನಟ ದರ್ಶನ್‌ಗೆ ಜೀವಾವಧಿ ಶಿಕ್ಷೆ ಅಥವಾ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ. ಇದರ ಹೊರತಾದ ಬೆಳವಣಿಗೆ ನಡೆದರೆ, ಅದು ಭಾರತೀಯ ಕಾನೂನಿನಲ್ಲಿ ಹಣದ ಪ್ರಭಾವ ಮತ್ತು ಕಾನೂನು ವ್ಯವಸ್ಥೆಯ ಅಪಹಾಸ್ಯದಂತಾಗುತ್ತದೆ. ಸಂತ್ರಸ್ತರಿಗೆ ಸಿಗಬೇಕಾದ ನ್ಯಾಯ ಸಿಗುತ್ತದೆ ಎಂದು ಆಶಿಸುತ್ತೇವೆ" ಎಂದಿದೆ.
ರಮ್ಯ ಅವರ ರೀ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ದರ್ಶನ್ ಅಭಿಮಾನಿಗಳು, "ನೀವ್ ಯಾರು, ಜೀವಾವಧಿ ಶಿಕ್ಷೆ ಕೋಡಿ ಅಂತ ಹೇಳೋಕೆ" ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ರಮ್ಯ ಅವರಿಗೆ ಬೆಂಬಲವಾಗಿ ಮಾತನಾಡಿದ್ದಾರೆ. "ನೀವು ಏಕೆ ನಮಗೆ ಇಷ್ಟ ಆಗ್ತೀರಾ ಅಂದ್ರೆ ಇದೇ ವಿಚಾರಕ್ಕೆ, ಎಲ್ಲರೂ ಬಾಯಿ ಮುಚ್ಚಿ ಕೂತಿದ್ದಾಗ ನೀವು ನಿಮ್ಮ ಧ್ವನಿ ಎತ್ತಿದ್ದು ಖುಷಿ ಕೊಡ್ತು" ಎಂದಿದ್ದಾರೆ.