ಬೆಂಗಳೂರು ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣದಲ್ಲೇ ವಕೀಲೆಗೆ ಚಾಕು ಇರಿತ
ವಿಮಲ ಎಂಬುವವರಿಗೆ ಚಾಕು ಇರಿದ್ದು, ಜಯರಾಮರೆಡ್ಡಿ ಎಂಬಾತನಿಂದ ಈ ಕೃತ್ಯ ನಡೆದಿದೆ. ವಿಮಲಾ ಪರಿಸ್ಥಿತಿ ಗಂಭೀರವಾಗಿದ್ದು ಅವರನ್ನು ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕೋರ್ಟ್ ಆವರಣದಲ್ಲಿಯೇ ವ್ಯಕ್ತಿಯೋರ್ವ ವಕೀಲೆಯೊಬ್ಬರಿಗೆ ಚಾಕು ಇರಿದ ಘಟನೆ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣದಲ್ಲಿ ಮಂಗಳವಾರ ನಡೆದಿದೆ.
ವಿಮಲ ಎಂಬುವವರಿಗೆ ಚಾಕು ಇರಿಯಲಾಗಿದ್ದು , ಜಯರಾಮರೆಡ್ಡಿ ಎಂಬಾತನಿಂದ ಈ ಕೃತ್ಯ ನಡೆದಿದೆ. ವಿಮಲಾ ಪರಿಸ್ಥಿತಿ ಗಂಭೀರವಾಗಿದ್ದು ಅವರನ್ನು ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವಕೀಲೆ ವಿಮಲಾ ಮತ್ತು ಆರೋಪಿ ಜಯರಾಮ ಸ್ನೇಹಿತರು. ವಕೀಲೆ ವಿಮಲಾ ಅವರ ವಿಡಿಯೋವನ್ನು ಜಯರಾಮ ರೆಕಾರ್ಡ್ ಮಾಡಿಕೊಂಡಿದ್ದಾನೆ. ಅಲ್ಲದೆ ಜಯರಾಮ ಹಂತ ಹಂತವಾಗಿ ಸುಮಾರು ಒಂದೂವರೆ ಕೋಟಿ ರೂ.ಗಿಂತಲೂ ಹೆಚ್ಚು ಹಣ ನೀಡಿದ್ದ. ನಂತರ ಹೆಜ್ಜಾಲ ಬಳಿ ಇರುವ ಜಾಗದ ವಿಚಾರವಾಗಿ ಇಬ್ಬರಲ್ಲಿ ಕಿರಿಕ್ ಆಗಿತ್ತು ಎನ್ನಲಾಗಿದೆ.
ಬಳಿಕ ವಕೀಲೆ ವಿಮಲಾ ಶೇಷಾದ್ರಿಪುರಂ ಠಾಣೆಯಲ್ಲಿ ಜಯರಾಮ ವಿರುದ್ಧ ದೌರ್ಜನ್ಯ ಮತ್ತು ಜಾಗದ ವಿಚಾರವಾಗಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ಸಂಬಂಧ ಮಂಗಳವಾರ ಇಬ್ಬರೂ ವಿಚಾರಣೆಗೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಆರೋಪಿ ಜಯರಾಮ ಸ್ನೇಹಿತೆ, ವಕೀಲೆ ವಿಮಲಾಗೆ ಕೋರ್ಟ್ ಹಾಲ್ 1ರಲ್ಲಿ ಚಾಕು ಇರಿದಿದ್ದಾನೆ. ಸದ್ಯ ಕೇಂದ್ರ ವಿಭಾಗ ಡಿಸಿಪಿ ಶೇಖರ್ ಪ್ರಕರಣ ಸಂಬಂಧ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.