Entry Fee Hike | ಲಾಲ್‌ಬಾಗ್‌ ಉದ್ಯಾನದ ಪ್ರವೇಶ ಶುಲ್ಕ ಹೆಚ್ಚಳ

ಪ್ರವೇಶ ಟಿಕೆಟ್ ದರವನ್ನು 30 ರೂ.ಗಳಿಂದ 50 ರೂ.ಗೆ ಏರಿಕೆ ಮಾಡಲಾಗಿದೆ. ಕಾರ್ ಪಾರ್ಕಿಂಗ್ ಶುಲ್ಕವನ್ನು 50 ರೂ.ಗಳಿಂದ 60 ರೂ.ಗೆ ಏರಿಸಲಾಗಿದೆ. ಇನ್ನು ಮಕ್ಕಳ ಪ್ರವೇಶ ಶುಲ್ಕವನ್ನು 20 ರೂ.ಗಳಿಂದ 30 ರೂ.ಗೆ ಏರಿಕೆ ಮಾಡಲಾಗಿದೆ.

Update: 2024-11-06 11:23 GMT
ಲಾಲ್‌ಬಾಗ್‌ ಸಸ್ಯೋದ್ಯಾನ

ಸಸ್ಯಕಾಶಿ ಲಾಲ್‌ಬಾಗ್‌ನ ಪ್ರವೇಶ ಹಾಗೂ ಪಾರ್ಕಿಂಗ್‌ ಶುಲ್ಕ ಹೆಚ್ಚಿಸಲಾಗಿದೆ. ಐದು ವರ್ಷಗಳಿಗೊಮ್ಮೆ ತೋಟಗಾರಿಕೆ ಇಲಾಖೆ ಪ್ರವೇಶ ಶುಲ್ಕ ಹೆಚ್ಛಳ ಮಾಡಲಿದೆ. 2018 ರಲ್ಲಿ ಲಾಲ್ ಬಾಗ್ ಪ್ರವೇಶ ಶುಲ್ಕವನ್ನು 20 ರಿಂದ 30 ರೂ.ಗೆ ಹೆಚ್ಚಳ ಮಾಡಲಾಗಿತ್ತು. ಈಗ ಆರು ವರ್ಷಗಳ ಬಳಿಕ ಪ್ರವೇಶ ಶುಲ್ಕ, ವಾಹನ ಪಾರ್ಕಿಂಗ್ ಶುಲ್ಕ, ಮಕ್ಕಳ ಪ್ರವೇಶ ಶುಲ್ಕವನ್ನು ಹೆಚ್ಚಿಸಿ ತೋಟಗಾರಿಕೆ ಇಲಾಖೆ ಆದೇಶಿಸಿದೆ.

ಪ್ರವೇಶ ಶುಲ್ಕದ ಟಿಕೆಟ್ ದರವನ್ನು 30 ರೂ.ಗಳಿಂದ 50 ರೂ.ಗೆ ಏರಿಕೆ ಮಾಡಲಾಗಿದೆ. ಕಾರ್ ಪಾರ್ಕಿಂಗ್ ಶುಲ್ಕವನ್ನು 50 ರೂ.ಗಳಿಂದ 60 ರೂ.ಗೆ ಏರಿಸಿದೆ. ಇನ್ನು ಮಕ್ಕಳ ಪ್ರವೇಶ ಶುಲ್ಕವನ್ನು 20 ರೂ.ಗಳಿಂದ 30 ರೂ.ಗೆ ಏರಿಕೆ ಮಾಡಲಾಗಿದೆ.

ಆರು ವರ್ಷಗಳ ಹಿಂದೆ ಲಾಲ್‌ಬಾಗ್ ಪ್ರವೇಶ ಶುಲ್ಕವನ್ನು 20 ರೂ.ಗಳಿಂದ 30 ರೂ.ಗೆ ಹೆಚ್ಚಿಸಲಾಗಿತ್ತು. ಪಾರ್ಕಿಂಗ್‌ ಶುಲ್ಕವನ್ನು 30 ರೂ.ಗಳಿಂದ 50 ರೂ.ಗೆ ಏರಿಸಲಾಗಿತ್ತು. ಇನ್ನು ಮನರಂಜನೆ ಸಲುವಾಗಿ ಲಾಲ್‌ ಬಾಗ್‌ಗೆ ಆಗಮಿಸುವ ಪ್ರವಾಸಿಗರಿಗೆ ದಿಢೀರ್‌ ದರ ಏರಿಕೆ ಹೊರೆಯಂತಾಗಿದೆ. ಉದ್ಯಾನಗಳಿಗೆ ಸಾಮಾನ್ಯವಾಗಿ ಬಡ ಕುಟುಂಬದವರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಕುಟುಂಬ ಸಮೇತರಾಗಿ ಭೇಟಿ ನೀಡಲು ಹೋದರೆ ಐದು ಜನರ ಒಂದು ಕುಟುಂಬ 250 ರೂ. ಶುಲ್ಕ ಪಾವತಿಸಬೇಕಿದೆ. ಸರ್ಕಾರಿ ಉದ್ಯಾನದಲ್ಲೇ ಪ್ರವೇಶ ಶುಲ್ಕವನ್ನು ದಿಢೀರ್ 20 ರೂ. ಏರಿಕೆ ಮಾಡಿರುವುದು ಬಡವರಿಗೆ ಹೊರೆಯಾಗಲಿದೆ. ಸರ್ಕಾರಿ ಜಾಗಗಳಿಗೂ, ಖಾಸಗಿ ಜಾಗಗಳಿಗೂ ವ್ಯತ್ಯಾಸ ಇಲ್ಲದಂತಾಗಿದೆ ಎಂದು ಪ್ರವಾಸಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರವೇಶ ಶುಲ್ಕ ಏರಿಕೆ ಕುರಿತು ಪ್ರತಿಕ್ರಿಯಿಸಿರುವ ತೋಟಗಾರಿಕೆ ಇಲಾಖೆ ನಿರ್ದೇಶಕರು, ಪ್ರತಿ ವರ್ಷ ಉದ್ಯಾನಗಳ ನಿರ್ವಹಣಾ ವೆಚ್ಚ ಹೆಚ್ಚಾಗುತ್ತಿದೆ. ಲಾಲ್‌ಬಾಗ್‌ನಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಪ್ರವೇಶ ಶುಲ್ಕ ಪರಿಷ್ಕರಿಸಲಾಗುತ್ತದೆ. ಅದರಂತೆ ಈ ಬಾರಿ ಶುಲ್ಕ ಹೆಚ್ಚಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಸಸ್ಯಕಾಶಿಗೆ ಪ್ರತಿದಿನ 3 ಸಾವಿರಕ್ಕೂ ಹೆಚ್ಚು ಪ್ರವಾಸಿಗರು, ಸಾರ್ವಜನಿಕರು ಭೇಟಿ ನೀಡುತ್ತಾರೆ. ಉದ್ಯಾನದ ನಿರ್ವಹಣೆಯಲ್ಲಿ ನೂರಾರು ಕಾರ್ಮಿಕರು ತೊಡಗಿಸಿಕೊಂಡಿದ್ದಾರೆ. ಉದ್ಯಾನದ ನಿರ್ವಹಣೆಗಾಗಿ ಶುಲ್ಕ ಹೆಚ್ಚಳ ಅನಿವಾರ್ಯವಾಯಿತು. ಇನ್ನು ಬೇರೆ ಪ್ರವಾಸಿ ಸ್ಥಳಗಳಿಗೆ ಹೋಲಿಸಿದರೆ ಲಾಲ್‌ಬಾಗ್ ಪ್ರವೇಶ ಶುಲ್ಕ ಕಡಿಮೆ ಇದೆ ಎಂದು ಹೇಳಿದರು.

Tags:    

Similar News