GST Reform |ಗುಡ್ ನ್ಯೂಸ್: ಸೋಮವಾರದಿಂದ ಹಾಲು, ಬೆಣ್ಣೆ ತುಪ್ಪ ಅಗ್ಗ

ಮೊಸರಿನ ಬೆಲೆಯನ್ನು ಪ್ರತಿ ಲೀಟರ್‌ಗೆ 4 ರೂ.ರಷ್ಟು ಇಳಿಕೆ ಮಾಡುವ ನಿರೀಕ್ಷೆಯಿದೆ. ಜೊತೆಗೆ, ತುಪ್ಪ, ಬೆಣ್ಣೆ ಮತ್ತು ಲಸ್ಸಿ ಉತ್ಪನ್ನಗಳ ಬೆಲೆಯೂ ಕಡಿಮೆಯಾಗಲಿದೆ.

Update: 2025-09-20 04:55 GMT
Click the Play button to listen to article

ಕೇಂದ್ರ ಸರ್ಕಾರ ಜಿಎಸ್ ಟಿ ದರಗಳನ್ನು ಪರಿಷ್ಕರಿಸಿರುವ ಪರಿಣಾಮ ನಂದಿನಿ ಉತ್ಪನ್ನಗಳಾದ ಮೊಸರು, ತುಪ್ಪ, ಬೆಣ್ಣೆ ಮತ್ತು ಲಸ್ಸಿ ಸೇರಿದಂತೆ ಇತರ  ಉತ್ಪನ್ನಗಳ ದರ ಇಳಿಸಲು ಕರ್ನಾಟಕ ಹಾಲು ಒಕ್ಕೂಟ(ಕೆಎಂಎಫ್) ನಿರ್ಧರಿಸಿದೆ. ಸೋಮವಾರದಿಂದಲೇ ಹೊಸ ದರಗಳು ಜಾರಿಗೆ ಬರುವ ಸಾಧ್ಯತೆ ಇದೆ.

ಇತ್ತೀಚೆಗೆ ಕೇಂದ್ರ ಸರ್ಕಾರ ಡೈರಿ ಉತ್ಪನ್ನಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ ಇಳಿಕೆ ಮಾಡಿರುವ ಹಿನ್ನೆಲೆಯಲ್ಲಿ ಕೆಎಂಎಫ್ ಈ ತೀರ್ಮಾನ ಕೈಗೊಂಡಿದೆ. ದರ ಇಳಿಕೆ ಕುರಿತು ಅಧಿಕೃತ ಆದೇಶ ಇನ್ನಷ್ಟೇ ಬರಬೇಕಾಗಿದೆ.

ಕಳೆದ ಶುಕ್ರವಾರ ನಡೆದ ಕೆಎಂಎಫ್ ಅಧಿಕಾರಿಗಳ ಸಭೆಯಲ್ಲಿ ದರ ಇಳಿಕೆಯ ನಿರ್ಧಾರ ಕೈಗೊಳ್ಳಲಾಗಿದೆ. ಅದರಂತೆ, ಮೊಸರಿನ ಬೆಲೆಯನ್ನು ಪ್ರತಿ ಲೀಟರ್‌ಗೆ 4 ರೂ.ರಷ್ಟು ಇಳಿಕೆ ಮಾಡಲು ತೀರ್ಮಾನಿಸಲಾಗಿದೆ. ಜೊತೆಗೆ, ತುಪ್ಪ, ಬೆಣ್ಣೆ ಮತ್ತು ಲಸ್ಸಿ ಉತ್ಪನ್ನಗಳ ಬೆಲೆಯೂ ಕಡಿಮೆಯಾಗಲಿದೆ.

ಹಾಲಿನ ಉತ್ಪನ್ನಗಳ ಮೇಲಿನ ಜಿಎಸ್‌ಟಿ ದರ ಶೇ.12 ರಿಂದ ಶೇ.5ಕ್ಕೆ ಇಳಿಕೆ ಮಾಡಲಾಗಿದ್ದು, ಹೊಸ ದರಗಳು ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿವೆ. 2017 ರಲ್ಲಿ ಹಾಲಿನ ಉತ್ಪನ್ನಗಳ ಮೇಲೆ ಮೊದಲ ಬಾರಿಗೆ ಜಿಎಸ್‌ಟಿ ತೆರಿಗೆ ಹಾಕಲಾಗಿತ್ತು. 2022 ರಲ್ಲಿ ತೆರಿಗೆಯನ್ನು ಶೇ 22 ಕ್ಕೆ ಹೆಚ್ಚಿಸಲಾಗಿತ್ತು. 

ರಾಜ್ಯದ ಪ್ರಮುಖ ಬ್ರ್ಯಾಂಡ್ ಆಗಿರುವ ನಂದಿನಿ, ಇತ್ತೀಚೆಗೆ ಹಾಲು ಮತ್ತು ಮೊಸರಿನ ಬೆಲೆಯನ್ನು ಪ್ರತಿ ಲೀಟರ್‌ಗೆ 4 ರೂ.ರಷ್ಟು ಹೆಚ್ಚಿಸಿತ್ತು. ಈಗ ಜಿಎಸ್‌ಟಿ ಇಳಿಕೆಯ ಮೊಸರಿನ ಬೆಲೆ ಇಳಿಕೆಯಾಗಲಿದೆ.

Tags:    

Similar News