ಮಹಿಳೆಗೆ ಕಪಾಳಮೋಕ್ಷ ಮಾಡಿದ ಬೆಂಗಳೂರು ಆಟೋ ಚಾಲಕನಿಗೆ ಸಂಕಷ್ಟ
ಆಟೋ ಬುಕ್ಕಿಂಗ್ ಕಾನ್ಸಲ್ ಮಾಡಿದ್ದಕ್ಕೆ ಮಹಿಳೆಯೊಬ್ಬರಿಗೆ ಕಪಾಳಮೋಕ್ಷ ಮಾಡಿ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಬಂಧನಕ್ಕೊಳಗಾಗಿದ್ದ ಓಲಾ ಆಟೋ ಚಾಲಕನಿಗೆ ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ.;
ಆಟೋ ಬುಕ್ಕಿಂಗ್ ಕಾನ್ಸಲ್ ಮಾಡಿದ್ದಕ್ಕೆ ಮಹಿಳೆಯೊಬ್ಬರಿಗೆ ಕಪಾಳಮೋಕ್ಷ ಮಾಡಿ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಬಂಧನಕ್ಕೊಳಗಾಗಿದ್ದ ಓಲಾ ಆಟೋ ಚಾಲಕನಿಗೆ ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಟ್ರಿಪ್ ರದ್ದಾದ ಕಾರಣ ಇಂಧನ ನಷ್ಟಕ್ಕೆ ಆಟೋ ಚಾಲಕ ಮಹಿಳೆಗೆ ಕಪಾಳಮೋಕ್ಷ ಮಾಡಿ ನಿಂದಿಸಿದ್ದು, ಇದೀಗ ಆತನ ಕೃತ್ಯಕ್ಕೆ ದೊಡ್ಡ ಬೆಲೆ ತೆರಬೇಕಾಗಿದೆ.
ಬೆಂಗಳೂರಿನ ಆರ್ ಮುತ್ತುರಾಜ್ ಎಂಬ ಆಟೋ ಡ್ರೈವರ್ ಈಗ ಕನಿಷ್ಠ ನಾಲ್ಕು ದಿನ ಜೈಲಿನಲ್ಲಿ ಕಳೆಯಬೇಕಾಗಿದೆ ಮತ್ತು ಜಾಮೀನು ಪಡೆಯಲು ಸುಮಾರು 30,000 ರೂಪಾಯಿಗಳ ಕಾನೂನು ಶುಲ್ಕವನ್ನು ಪಾವತಿಸಬೇಕಾಗಿದೆ. ಮುತ್ತುರಾಜ್ ಮೇಲೆ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) 74 ಮತ್ತು 352 ಸೆಕ್ಷನ್‌ಗಳನ್ನು ಹೇರಲಾಗಿದೆ. ರೈಟ್ ಕಾನ್ಸ್‌ಲ್ ಮಾಡಿದಕ್ಕೆ ಇಂಧನದ ವೆಚ್ಚವು 20-30 ರೂ.ಗಿಂತ ಹೆಚ್ಚಿಲ್ಲ, ಆದರೆ ಈಗ ಅವರು ಜಾಮೀನಿಗಾಗಿ ಭಾರೀ ಮೊತ್ತ ತೆರಬೇಕಾಗಿದೆ " ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದಲ್ಲದೆ, ಸಾರಿಗೆ ಇಲಾಖೆಯು ಘಟನೆಯನ್ನು ಗಂಭೀರಾಗಿ ಪರಿಗಣಿಸಿರುವುದರಿಂದ ಅವರ ಡ್ರೈವಿಂಗ್ ಲೈಸೆನ್ಸ್ ಮತ್ತು ಪರ್ಮಿಟ್ ಅನ್ನು ಸಹ ಅಮಾನತುಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಘಟನೆಯನ್ನು ಮಹಿಳೆ ತನ್ನ ಫೋನ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾಳೆ. ಆಟೋ ಚಾಲಕ ಮಹಿಳೆಗೆ ಕಪಾಳಮೋಕ್ಷ ಮಾಡಿ ಅಶ್ಲೀಲವಾಗಿ ನಿಂದಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಘಟನೆಯ ವಿಡಿಯೋವನ್ನು ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. "ಬೆಂಗಳೂರಿನಲ್ಲಿ (ಬೆಂಗಳೂರಿನಲ್ಲಿ), ನನ್ನ ಸ್ನೇಹಿತೆ ಮತ್ತು ನಾನು ಪೀಕ್ ಅವರ್‌ನಿಂದ ಓಲಾದಲ್ಲಿ ಎರಡು ಆಟೋಗಳನ್ನು ಬುಕ್ ಮಾಡಿದೆವು. ನನ್ನ ಆಟೋ ಮೊದಲು ಬಂದಿದ್ದರಿಂದ ಅವಳು ಅದನ್ನು ರದ್ದುಗೊಳಿಸಿದ್ದಳು. ಇನ್ನೊಬ್ಬ ಆಟೋ ಡ್ರೈವರ್ ಕೋಪದಿಂದ ನಮ್ಮನ್ನು ಹಿಂಬಾಲಿಸಿದ. ಪರಿಸ್ಥಿತಿ ವಿವರಿಸಿದರೂ ಅವನು ಕೂಗಿ ನಮ್ಮನ್ನು ನಿಂದಿಸಿ ಹಲ್ಲೆ ನಡೆಸಿದ್ದʼ ಎಂದು ಆಕೆ ದೂರಿದ್ದಳು.
"ಆಟೋ ನನ್ನ ತಂದೆಯದ್ದೇ ಎಂದು ಪ್ರಶ್ನಿಸಿ ಮತ್ತು ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡುತ್ತಾ ಚಾಲಕನು ನಮ್ಮ ಮೇಲೆ ಹಲ್ಲೆ ನಡೆಸಿದ್ದಾನೆ. ನಾನು ರೆಕಾರ್ಡ್ ಮಾಡಲು ಪ್ರಾರಂಭಿಸಿದೆ, ಇದು ಅವರನ್ನು ಮತ್ತಷ್ಟು ಕೆರಳಿಸಿತು. ನಾನು ಅವನ ಬಗ್ಗೆ ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದದಾಗ ಅವನು ನನಗೆ ಸವಾಲು ಹಾಕಿದನು, ಪರಿಣಾಮಗಳ ಭಯ ಆತನಿಗೆ ಇರಲಿಲ್ಲ" ಎಂದು ಅವರು ಹೇಳಿದ್ದರು.
ಆಕೆಯ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಎಡಿಜಿಪಿ ಅಲೋಕ್ ಕುಮಾರ್, "ಇಂತಹ ನಡವಳಿಕೆ ಸ್ವೀಕಾರಾರ್ಹವಲ್ಲ.ಅವರಂತಹ ಕೆಲವು ಜನರು ಆಟೋ ಚಾಲಕರ ಸಮುದಾಯಕ್ಕೆ ಕೆಟ್ಟ ಹೆಸರು ತರುತ್ತಾರೆ. ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟವರಿಗೆ ತಿಳಿಸಿದ್ದಾರೆ. ಈ ಬಗ್ಗೆ 'Ola Support' ತನ್ನ ಪೋಸ್ಟ್‌ಗಳಿಗೆ ಪ್ರತಿಕ್ರಿಯಿಸಿತು. "ಇದು ಸಾಕಷ್ಟು ಆತಂಕಕಾರಿಯಾಗಿದೆ.. ಚಿಂತಿಸಬೇಡಿ, ನಾವು ಇಲ್ಲಿದ್ದೇವೆ ಎಂದು ತಿಳಿಸಿದೆ.