ಪ್ರಯಾಣಿಕರೇ ಗಮನಿಸಿ! ಭಾನುವಾರ ನಮ್ಮ ಮೆಟ್ರೋದ ಯೆಲ್ಲೋ ಲೈನ್ ಸಂಚಾರದಲ್ಲಿ ವ್ಯತ್ಯಯ

ಕಾಮಗಾರಿ ಹಿನ್ನೆಲೆ ನಾಳೆ ಹಳದಿ ಮಾರ್ಗದ ನಮ್ಮ ಮೆಟ್ರೋ ಸೇವೆಯಲ್ಲಿ ಒಂದು ಗಂಟೆ ತಡವಾಗಲಿದೆ. ನಾಳೆ ಒಂದು ದಿನ ಯೆಲ್ಲೋ ಲೈನ್‌ ಮೆಟ್ರೋ ಸೇವೆ ಬೆಳಗ್ಗೆ 7.00 ಗಂಟೆಯ ಬದಲಾಗಿ 8.00 ಗಂಟೆಗೆ ಆರಂಭವಾಗಲಿದೆ.

Update: 2025-12-20 04:49 GMT
ನಮ್ಮ ಮೆಟ್ರೋ ಹಳದಿ ಲೈನ್‌
Click the Play button to listen to article

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಭಾನುವಾರ ತಾಂತ್ರಿಕ ದೋಷ ಅಥವಾ ಕಾಮಗಾರಿ ಹಿನ್ನೆಲೆ ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ನಾಳೆ ನಮ್ಮ ಮೆಟ್ರೋದ ಯೆಲ್ಲೋ ಲೈನ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಬಿಎಂಆರ್ಸಿಎಲ್ (BMRCL) ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಕಾಮಗಾರಿ ಹಿನ್ನೆಲೆ ನಾಳೆ ಹಳದಿ ಮಾರ್ಗದ ನಮ್ಮ ಮೆಟ್ರೋ ಸೇವೆಯಲ್ಲಿ ಒಂದು ಗಂಟೆ ತಡವಾಗಲಿದೆ. ತುರ್ತು ವ್ಯವಸ್ಥಾ ನಿರ್ವಹಣೆ, ನವೀಕರಣ ಕಾರ್ಯಗಳ ಹಿನ್ನೆಲೆ ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಮೆಟ್ರೋ ಆರಂಭವಾಗಲಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ. ನಾಳೆ ಒಂದು ದಿನ ಯೆಲ್ಲೋ ಲೈನ್‌ ಮೆಟ್ರೋ ಸೇವೆ ಬೆಳಗ್ಗೆ 7.00 ಗಂಟೆಯ ಬದಲಾಗಿ 8.00 ಗಂಟೆಗೆ ಆರಂಭವಾಗಲಿದೆ. ಬಳಿಕ ಯಥಾಸ್ಥಿತಿಯಾಗಿ ಕಾರ್ಯಾಚರಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

96 ಹೊಸ ರೈಲುಗಳ ಸೇರ್ಪಡೆ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಅನುಕೂಲವಾದಲೆಂದೇ 96 ಹೊಸ ರೈಲುಗಳ ಸೇರ್ಪಡೆ ಮಾಡಲಾಗುತ್ತಿದೆ. ಹೊಸ ರೈಲುಗಳು ಬರುತ್ತಿದ್ದಂತೆ 4 ನಿಮಿಷಕ್ಕೊಂದರಂತೆ ಮೆಟ್ರೋ ರೈಲು ಸಂಚಾರಕ್ಕೆ ನೀಡಲು ಬಿಎಂಆರ್ಸಿಎಲ್ ಸಿದ್ದತೆ ಮಾಡಿಕೊಂಡಿದೆ. ಸದ್ಯ ನಮ್ಮ ಮೆಟ್ರೋದ ಹಸಿರು ಮಾರ್ಗ, ನೇರಳೆ ಮಾರ್ಗ ಹಾಗೂ ಯೆಲ್ಲೋ ಮಾರ್ಗಗಳಿಗೆ 64 ರೈಲುಗಳು ಸೇರ್ಪಡೆಗೊಂಡಿದೆ.

ಗ್ರೀನ್ ಲೈನ್, ಪರ್ಪಲ್ ಲೈನ್ ಸೇರಿ 58 ರೈಲುಗಳಿದ್ದರೆ ಯೆಲ್ಲೋ ಲೈನ್ ನಲ್ಲಿ 6 ರೈಲು ಗಳಿವೆ. ಗ್ರೀನ್ ಮತ್ತು ಪರ್ಪಲ್ ಲೈನ್ ಗೆ 21 ಹೊಸ ರೈಲು ಗಳು, ಯೆಲ್ಲೋ ಲೈನ್- 9 ರೈಲುಗಳು ಬರಲಿವೆ.

ಹಳದಿ ಮಾರ್ಗದ ನಿಲ್ದಾಣಗಳು ಯಾವುವು?

  • ಬೊಮ್ಮಸಂದ್ರ
  • ಹೆಬ್ಬಗೋಡಿ
  • ಹುಸ್ಕೂರ್ ರಸ್ತೆ
  • ಇನ್ಫೋಸಿಸ್‌ ಫೌಂಡೇಶನ್ ಕೋನಪ್ಪನ ಅಗ್ರಹಾರ
  • ಎಲೆಕ್ಟ್ರಾನಿಕ್‌ ಸಿಟಿ
  • ಬೆರತೇನ ಅಗ್ರಹಾರ
  • ಹೊಸ ರೋಡ್
  • ಸಿಂಗಸಂದ್ರ
  • ಕೂಡ್ಲು ಗೇಟ್
  • ಹೊಂಗಸಂದ್ರ
  • ಬೊಮ್ಮನಹಳ್ಳಿ
  • ಸೆಂಟ್ರಲ್ ಸಿಲ್ಕ್ ಬೋರ್ಡ್
  • ಬಿಟಿಎಂ ಲೇಔಟ್
  • ಜಯದೇವ ಆಸ್ಪತ್ರೆ
  • ರಾಗಿ ಗುಡ್ಡ ದೇವಸ್ಥಾನ
  • ಆರ್‌.ವಿ (ರಾಷ್ಟ್ರೀಯ ವಿದ್ಯಾಲಯ) ರಸ್ತೆ

Tags:    

Similar News