ಬೆಳಗಾವಿ | ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಕೈದಿಯಿಂದ ಜೈಲರ್‌ ಮೇಲೆ ಹಲ್ಲೆ!

Update: 2024-12-15 05:57 GMT
ಬೆಳಗಾವಿ | ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಕೈದಿಯಿಂದ ಜೈಲರ್‌ ಮೇಲೆ ಹಲ್ಲೆ!

ಗಾಂಜಾ ಬೇಕೆಂದು ಕೈದಿಯೊಬ್ಬ ಸಹಾಯಕ ಜೈಲರ್ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಳಗಾವಿಯ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.

ಶಾಹೀದ್ ಖುರೇಶಿ ಎಂಬ ವಿಚಾರಣಾಧೀನ ಕೈದಿ ಸಹಾಯಕ ಜೈಲರ್ ಜಿ ಆರ್ ಕಾಂಬಳೆ ಅವರ ಮೇಲೆ ಕಳೆದ ಬುಧವಾರ(ಡಿ.11) ಹಲ್ಲೆ ನಡೆಸಿದ್ದಾನೆ.

ಆದರೆ, ಇಂತಹ ಭೀಕರ ಘಟನೆ ನಡೆದಿದ್ದರೂ ಜೈಲಿನ ಉನ್ನತ ಅಧಿಕಾರಿಗಳು ಪ್ರಕರಣವನ್ನು ಮುಚ್ಚಿಹಾಕುವ ಯತ್ನ ಮಾಡಿದ್ದಾರೆ. ಬೆಳಗಾವಿಯಲ್ಲೇ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿಷಯ ಹೊರಬಂದರೆ ಭಾರೀ ವಿವಾದಕ್ಕೆ ಎಡೆಮಾಡಿಕೊಡಲಿದ್ದು, ತಮ್ಮ ತಲೆದಂಡವಾಗಬಹುದು ಎಂಬ ಉದ್ದೇಶದಿಂದ ಅಧಿಕಾರಿಗಳು ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದರು ಎಂದೂ ಆರೋಪಿಸಲಾಗಿದೆ.

ಕೈದಿ ನಡೆಸಿದ ಹಲ್ಲೆಯಿಂದ ತೀವ್ರ ಗಾಯಗೊಂಡಿರುವ ಸಹಾಯಕ ಜೈಲರ್ ಕಾಂಬಳೆ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಚಿಕಿತ್ಸೆ ನೀಡಿದ ವೈದ್ಯರು ಪ್ರಕರಣದ ಕುರಿತು ಮಾಹಿತಿ ನೀಡಿ ಬೆಳಕಿಗೆ ತಂದಿದ್ದಾರೆ.

ವೈದ್ಯಕೀಯ ಚಿಕಿತ್ಸೆಯ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಜೈಲಿನ ಮುಖ್ಯ ಅಧೀಕ್ಷಕರು ಬೆಳಗಾವಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಮತ್ತು ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

Tags:    

Similar News