ಯುವ ರಾಜ್​ಕುಮಾರ್ ಡೈವೋರ್ಸ್ ಬಗ್ಗೆ ನನಗೆ ಮಾಹಿತಿ ಇಲ್ಲ: ಶಿವಣ್ಣ

ಯುವ ರಾಜ್​ಕುಮಾರ್​ ಮತ್ತು ಶ್ರೀದೇವಿ ಅವರ ವಿಚ್ಛೇದನದ ಬಗ್ಗೆ ತಮಗೆ ಯಾವುದೇ ಮಾಹಿತಿ ಸದ್ಯಕ್ಕೆ ಇಲ್ಲ ಎಂದು ನಟ ಶಿವರಾಜ್‌ ಕುಮಾರ್‌ ಹೇಳಿದ್ದಾರೆ.;

Update: 2024-06-10 12:50 GMT
ನಟ ಶಿವರಾಜ್‌ ಕುಮಾರ್‌
Click the Play button to listen to article

ಡಾ. ರಾಜ್​ಕುಮಾರ್​ ಅವರ ಮೊಮ್ಮಗ ಯುವ ರಾಜ್​ಕುಮಾರ್ ವಿಚ್ಛೆದನಕ್ಕೆ ಅರ್ಜಿ ಸಲ್ಲಿಸಿರುವ ಕುರಿತು ಶಿವರಾಜ್​ಕುಮಾರ್​ ಅವರು ಶಿವಮೊಗ್ಗದಲ್ಲಿ ಸೋಮವಾರ ( ಜೂನ್‌ 10) ಪ್ರತಿಕ್ರಿಯೆ ನೀಡಿದ್ದು, ಯುವ ರಾಜ್​ಕುಮಾರ್​ ಮತ್ತು ಶ್ರೀದೇವಿ ಅವರ ವಿಚ್ಛೇದನದ ಬಗ್ಗೆ ತಮಗೆ ಯಾವುದೇ ಮಾಹಿತಿ ಸದ್ಯಕ್ಕೆ ಇಲ್ಲ ಎಂದು ಹೇಳಿದ್ದಾರೆ.

‘ಯುವ ಡಿವೋರ್ಸ್​ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ಹಾಗಾಗಿ, ಮಾಹಿತಿ ಇಲ್ಲದೇ ಮಾತನಾಡೋದು ಸರಿಯಿಲ್ಲ. ಈ ಬಗ್ಗೆ ಮೊಬೈಲ್​ನಲ್ಲಿ ನೋಡಿ ತಿಳಿದುಕೊಂಡೆ. ಆ ರೀತಿ ಏನಾದರೂ ಆಗಿದ್ದರೆ ಮನಸ್ಸಿಗೆ ಬೇಜಾರಾಗುತ್ತದೆ’ ಎಂದು ಶಿವರಾಜ್​ಕುಮಾರ್​ ಅವರು ಹೇಳಿದ್ದಾರೆ.

2019ರ ಮೇ 26ರಂದು ಯುವ ರಾಜ್​ಕುಮಾರ್​ ಮತ್ತು ಶ್ರೀದೇವಿ ಭೈರಪ್ಪ ಅವರು ಪ್ರೀತಿಸಿ ವಿವಾಹವಾಗಿದ್ದರು. ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನಲ್ಲಿ ಅದ್ದೂರಿ ವಿವಾಹ ಸಮಾರಂಭ ನಡೆದಿತ್ತು. ಅದರಲ್ಲಿ ಚಿರಂಜೀವಿ, ಉಪೇಂದ್ರ, ಯಶ್, ರವಿಚಂದ್ರನ್, ದ್ವಾರಕೀಶ್​, ರಚಿತಾ ರಾಮ್, ಚಿರಂಜೀವಿ ಸರ್ಜಾ, ರಶ್ಮಿಕಾ ಮಂದಣ್ಣ, ಸಿದ್ದರಾಮಯ್ಯ ಮುಂತಾದವರು ಭಾಗಿ ಆಗಿದ್ದರು. ಆದರೆ ಈಗ ಈ ಮದುವೆ ಮುರಿದು ಬಿದ್ದಿದೆ.

Tags:    

Similar News