Hyderabad Metro Rail| ಮೆಟ್ರೊ ಗ್ರೀನ್ ಕಾರಿಡಾರ್‌ನಲ್ಲಿ 'ಜೀವಂತ ಹೃದಯ' ಸಂಚಾರ
Hyderabad Metro Rail| 'ಗ್ರೀನ್ ಕಾರಿಡಾರ್' ಮೂಲಕ ಕೇವಲ 13 ನಿಮಿಷಗಳಲ್ಲಿ 13 ಕಿಲೋಮೀಟರ್ ದೂರವನ್ನು ತ್ವರಿತವಾಗಿ ಕ್ರಮಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.;
ಹೈದರಾಬಾದ್ ಮೆಟ್ರೋ, ಕೇವಲ 13 ನಿಮಿಷಗಳಲ್ಲಿ 13 ಕಿಲೋಮೀಟರ್ ದೂರವನ್ನು ಕ್ರಮಿಸಿ ತುರ್ತು ಚಿಕಿತ್ಸೆಗೆ ಅವಶ್ಯವಿದ್ದ ರೋಗಿಯೊಬ್ಬರ ಹೃದಯ ಜೋಡಣೆಗೆ ನೆರವಾಗಿದೆ. ಅದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ವೈರಲ್ ಆಗುತ್ತಿದೆ.
13 ನಿಮಿಷಗಳು, 13 ಕಿಲೋಮೀಟರ್‌ಗಳು.
ಹೈದರಾಬಾದ್‌ನ ಲಾಲ್ ಬಹದ್ದೂರ್ (ಎಲ್.ಬಿ) ನಗರದ ಕಾಮಿನೇನಿ ಆಸ್ಪತ್ರೆಯಿಂದ ಗ್ರೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಗೆ ಹೃದಯವನ್ನು ಸಾಗಿಸಲಾಗಿದೆ. 'ಗ್ರೀನ್ ಕಾರಿಡಾರ್' ಮೂಲಕ ಕೇವಲ 13 ನಿಮಿಷಗಳಲ್ಲಿ 13 ಕಿಲೋಮೀಟರ್ ದೂರವನ್ನು ತ್ವರಿತವಾಗಿ ಕ್ರಮಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿ 17ರಂದು ನಡೆದ ಪ್ರಕರಣ
ಈ 'ಗ್ರೀನ್ ಕಾರಿಡಾರ್' ಜನವರಿ 17 ರಂದು ರಾತ್ರಿ 9.30 ಕ್ಕೆ ಒದಗಿಸಲಾಯಿತು. ಕಾಮಿನೇನಿ ಆಸ್ಪತ್ರೆಯ ತಂಡವು ದಾನಿ ಹೃದಯವನ್ನು ವೈದ್ಯಕೀಯ ಪೆಟ್ಟಿಗೆಯಲ್ಲಿ ಇರಿಸಿ ಮೆಟ್ರೋ ಮೂಲಕ ಹೃದಯ ಕಸಿ ನಡೆಯಬೇಕಿದ್ದ ಗ್ಲೆನೀಗಲ್ಸ್ ಗ್ಲೋಬಲ್ ಆಸ್ಪತ್ರೆಗೆ ಸಾಗಿಸಿತು. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿರುವುದು ನೋಡಬಹುದಾಗಿದೆ.
ಮೆಟ್ರೊ ಸಿಬ್ಬಂದಿ ಮತ್ತು ಆಸ್ಪತ್ರೆ ವೈದ್ಯರ ನಡುವಿನ ಸಮನ್ವಯದ ಪರಿಣಾಮವಾಗಿ ಹೃದಯವನ್ನು ಸುರಕ್ಷಿತವಾಗಿ ಮತ್ತು ಸರಿಯಾದ ಸಮಯಕ್ಕೆ ತಲುಪಿಸಲಾಗಿದ್ದು, ತುರ್ತು ಅಗತ್ಯವಿದ್ದವರಿಗೆ ಯಶಸ್ವಿಯಾಗಿ ಕಸಿ ಮಾಡಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
'ಗ್ರೀನ್ ಕಾರಿಡಾರ್' ವ್ಯವಸ್ಥೆ ಕಲ್ಪಿಸುವ ಮೂಲಕ ವೈದ್ಯಕೀಯ ತುರ್ತು ಪರಿಸ್ಥಿತಿಗೆ ನೆರವಾಗುವುದು ಮತ್ತು ಜನರ ಜೀವಗಳನ್ನು ಉಳಿಸುವಲ್ಲಿ ತಂತ್ರಜ್ಞಾನ ಮತ್ತು ಮೂಲಸೌಕರ್ಯ ಪ್ರಮುಖ ಪಾತ್ರವಹಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.