Honey Trap | ಹನಿ ಟ್ರ್ಯಾಪ್‌ಗೆ ಮುಂದಾದ ಯುವತಿಗೆ ಸಿಟ್ಟಿನಿಂದ ಕಪಾಳ ಮೋಕ್ಷ ಮಾಡಿದರೇ ಸಚಿವ ಕೆ.ಎನ್. ರಾಜಣ್ಣ?
ಯುವತಿ ಎರಡು ಬಾರಿ ಬಂದಾಗಲೂ ಗಡ್ಡಧಾರಿ ಯುವಕನೊಬ್ಬ ಜೊತೆಗಿದ್ದ, ಆದರೆ, ಗಡ್ಡ ಹೊಂದಿದ್ದ ಯುವಕ ಯಾರೆಂಬುದು ತಿಳಿದಿಲ್ಲ ಎಂದು ಸಚಿವರು ಹೇಳಿದ್ದಾರೆ. ಇದನ್ನೇ ರಾಜಣ್ಣ ಅವರು ತಮ್ಮ ದೂರಿನಲ್ಲೂ ತಿಳಿಸಿ, ಆ ತಂಡವನ್ನು ಗುರುತಿಸಬಲ್ಲೆ ಎಂದು ಹೇಳಿದ್ದರು.;
ಹನಿಟ್ರ್ಯಾಪ್‌ಗೆ ಯತ್ನಿಸಿದ ಯುವತಿಗೆ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಕಪಾಳ ಮೋಕ್ಷ ಮಾಡಿದ್ದರಂತೆ.
ಸಚಿವರ ಜೊತೆ ಖಾಸಗಿಯಾಗಿ ಮಾತನಾಡಬೇಕು ಎಂದು ಜೀನ್ಸ್ ತೊಟ್ಟ ಯುವತಿ ಮನವಿ ಮಾಡಿದ್ದಳು, ಇದು ಒಂದು ಬಾರಿಯಲ್ಲ, ಎರಡು, ಮೂರು ಬಾರಿಯಾಗಿತ್ತು, ಎಲ್ಲಾ ಸಂದರ್ಭದಲ್ಲೂ ಸಚಿವರು ಆಕೆ ಜತೆ ಮಾತನಾಡಲು ನಿರಾಕರಿಸಿದ್ದರು ಎನ್ನಲಾಗಿದೆ.
ಎರಡನೇ ಬಾರಿಗೆ ಬಂದಿದ್ದ ಯುವತಿ ಸಚಿವ ರಾಜಣ್ಣ ಅವರ ತೀರಾ ಸನಿಹಕ್ಕೆ ಬಂದು ಕೈಹಿಡಿದು ಬಲವಂತವಾಗಿ ಮಾತನಾಡಿಸಲು ಮುಂದಾದಳು. ಅಪರಿಚಿತ ಯುವತಿ ಒಮ್ಮೆಲೇ ಕೈಹಿಡಿಯುತ್ತಿದ್ದಂತೆ ಸಿಟ್ಟಿಗೆದ್ದ ರಾಜಣ್ಣ, ಆಕೆಗೆ ಕಪಾಳ ಮೋಕ್ಷ ಮಾಡಿದರು, ಆಗ ಗಡ್ಡಧಾರಿ ಯುವಕನೊಂದಿಗೆ ಬಂದಿದ್ದ ಆ ಯುವತಿ ಅಲ್ಲಿಂದ ಕಾಲ್ಕಿತ್ತಳು ಎಂದು ಹೇಳಲಾಗಿದೆ..
ರಾಜಣ್ಣ ದೂರು ಆಧರಿಸಿ ಮಾಹಿತಿ ಸಂಗ್ರಹ ವೇಳೆ ಸಿಐಡಿ ತಂಡಕ್ಕೆ ಸಚಿವರ ಮನೆಯ ಸಿಬ್ಬಂದಿಯಿಂದ ಈ ವಿಷಯ ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ.
ದೇಶಾದ್ಯಂತ ಸದ್ದುಮಾಡಿರುವ ʼಸಚಿವರ ಟ್ರ್ಯಾಪ್ ಪ್ರಕರಣʼದ ತನಿಖೆ ಸಿಐಡಿ ಕೈಗೆತ್ತಿಕೊಂಡಿದ್ದು, ಡಿಐಜಿ ವಂಶಿಕೃಷ್ಣ, ಎಸ್‌ಪಿ ರಾಘವೇಂದ್ರ ಹೆಗಡೆ ನೇತೃತ್ವದ ತಂಡ ಪ್ರಕರಣದ ಪರಿಶೀಲನೆ ಹಾಗೂ ಸಾಕ್ಷ್ಯಗಳ ವಿವರ ಪಡೆಯಲು ಆರಂಭಿಸಿದೆ.
ಗಡ್ಡದಾರಿ ಯಾರು?
ಯುವತಿಯರು ಎರಡು ಬಾರಿ ಬಂದಾಗಲೂ ಗಡ್ಡಧಾರಿ ಯುವಕನೊಬ್ಬ ಜೊತೆಗಿದ್ದ, ಆದರೆ, ಗಡ್ಡ ಹೊಂದಿದ್ದ ಯುವಕ ಯಾರೆಂಬುದು ತಿಳಿದಿಲ್ಲ ಎಂದಿದ್ದಾರೆ. ಇದನ್ನೇ ರಾಜಣ್ಣ ಅವರು ತಮ್ಮ ದೂರಿನಲ್ಲೂ ತಿಳಿಸಿ, ಆ ತಂಡವನ್ನು ಗುರುತಿಸಬಲ್ಲೆ ಎಂದು ಹೇಳಿದ್ದರು.
ಸಚಿವರು ಉಲ್ಲೇಖಿಸಿರುವ ಸ್ಥಳಗಳಿಗೆ ಇಂದು ಅಧಿಕಾರಿಗಳ ತಂಡ ಭೇಟಿ ನೀಡಿ ಮಾಹಿತಿ ಸಂಗ್ರಹಕ್ಕೆ ಮುಂದಾಗಿದೆ. ಘಟನೆ ನಡೆದ ದಿನ, ಸ್ಥಳದಲ್ಲಿ ಇದ್ದವರು ಯಾರು ಎಂಬ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಸಚಿವರ ಓಎಸ್‌ಡಿ, ಪಿಎ, ಪಿಎಸ್, ಗನ್‌ಮ್ಯಾನ್, ಸೆಕ್ಯೂರಿಟಿ ಹಾಗೂ ಮನೆ ಸಿಬ್ಬಂದಿಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಮೂಲಗಳು ವಿವರಿಸಿವೆ.
ಸಿಸಿಟಿವಿ ಇಲ್ಲ!
ಸಚಿವರ ಮನೆಯಲ್ಲೇ ಸಿಸಿಟಿವಿ ಇಲ್ಲದ್ದನ್ನು ಕೇಳಿ ಅಧಿಕಾರಿಗಳಿಗೆ ಶಾಕ್ ಆಗಿದ್ದು, ಅವರ ಸರ್ಕಾರಿ ನಿವಾಸಕ್ಕೆ ಬಂದು-ಹೋಗುವವರ ಮೇಲೆ ಯಾವುದೇ ಕಣ್ಗಾವಲು ಇಲ್ಲ, ಹೀಗಾಗಿ ಸಚಿವ ರಾಜಣ್ಣ ಮನೆಯ ಸುತ್ತಮುತ್ತಲ ಪ್ರದೇಶದ ಸಿಸಿಟಿವಿಗಳಿಂದ ದೃಶ್ಯಗಳನ್ನು ಸಂಗ್ರಹಿಸುವ ಯತ್ನ ನಡೆದಿದೆ.
ಮಾರ್ಚ್‌ನ ಮೊದಲ ವಾರದಲ್ಲಿ ಹಾಗೂ ಮುಂದಿನ 15 ದಿನಗಳಲ್ಲಿ ಈ ಪ್ರಯತ್ನಗಳು ನಡೆದಿದ್ದು, ಈ ದಿನಗಳ ದೃಶ್ಯ ಸಂಗ್ರಹಕ್ಕೆ ತಂಡ ಪ್ರಯತ್ನಿಸುತ್ತಿದೆ. ದೂರಿನಲ್ಲಿ ಘಟನೆಗಳ ಸ್ಪಷ್ಟತೆ ಇಲ್ಲದಿರುವುದರಿಂದ ಸಚಿವರಿಗೇ ನೋಟಿಸ್ ನೀಡಿ ಮಾಹಿತಿ ಪಡೆಯಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎನ್ನಲಾಗಿದೆ.