Rain Update| ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮೂರು ದಿನ ಭಾರೀ ಮಳೆ

ಮಂಗಳವಾರ, ಬುಧವಾರ ರಾಜ್ಯದಾದ್ಯಂತ ʻಯೆಲ್ಲೋ ಅಲರ್ಟ್ʼ ಘೋಷಣೆ ಮಾಡಲಾಗಿದೆ. ಜೂ. 10-11ರಂದು ಮಲೆನಾಡು, ಕರಾವಳಿ ಕರ್ನಾಟಕ ಜಿಲ್ಲೆಗಳಿಗೆ ʻಆರೆಂಜ್ ಅಲರ್ಟ್ʼ ಇದ್ದು, ಉಳಿದೆಲ್ಲಾ ಜಿಲ್ಲೆಗಳಿಗೆ ʻಯೆಲ್ಲೋ ಅಲರ್ಟ್ʼ ಇರಲಿದೆ.;

Update: 2025-06-10 04:45 GMT
Rain Update| ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮೂರು ದಿನ ಭಾರೀ ಮಳೆ

ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ.

ರಾಜ್ಯದ 11 ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.  ಬಹುತೇಕ 11 ಜಿಲ್ಲೆಗಳಿಗೂ ʻಯೆಲ್ಲೋ ಅಲರ್ಟ್ʼ ಹಾಗೂ ಕೆಲ ಜಿಲ್ಲೆಗಳಿಗೆ ʻರೆಡ್​ ಅಲರ್ಟ್ʼ ನೀಡಿದೆ. ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಮಾತ್ರ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 

ಕಲಬುರಗಿ, ವಿಜಯಪುರ, ಯಾದಗಿರಿ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಧಾರವಾಡ, ಗದಗ, ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ಉಡುಪಿ, ಹಾಸನ, ದಕ್ಷಿಣ ಕನ್ನಡ, ಕೊಡಗು, ಈ ಜಿಲ್ಲೆಗಳಲ್ಲಿ 115mm ವರೆಗೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿ ಭಾಗಗಳಲ್ಲಿ ಭಾರೀ ಮಳೆ

ಮಂಗಳವಾರ, ಬುಧವಾರ ರಾಜ್ಯದಾದ್ಯಂತ ʻಯೆಲ್ಲೋ ಅಲರ್ಟ್ʼ ಘೋಷಣೆ ಮಾಡಲಾಗಿದೆ. ಜೂ. 10-11ರಂದು ಮಲೆನಾಡು, ಕರಾವಳಿ ಕರ್ನಾಟಕ ಜಿಲ್ಲೆಗಳಿಗೆ ʻಆರೆಂಜ್ ಅಲರ್ಟ್ʼ ಇದ್ದು, ಉಳಿದೆಲ್ಲಾ ಜಿಲ್ಲೆಗಳಿಗೆ ʻಯೆಲ್ಲೋ ಅಲರ್ಟ್ʼ ಇರಲಿದೆ. ಜೂ. 12ರಂದು ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ʻರೆಡ್ ಅಲರ್ಟ್ʼ ನೀಡಲಾಗಿದೆ. ಜೂ. 13ರಂದು 10 ಜಿಲ್ಲೆಗಳಿಗೆ ʻರೆಡ್ ಅಲರ್ಟ್ʼ ಇದ್ದು, ಮಲೆನಾಡು, ಕರಾವಳಿ ಸೇರಿ ಇತರೆ ಕೆಲ ಜಿಲ್ಲೆಗಳಲ್ಲಿ ಭಾರೀ ಮಳೆಯ ನಿರೀಕ್ಷೆ ಇದೆ.

ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು ಜಿಲ್ಲೆಯಲ್ಲಿ ಸಾಧಾರಣ ಮಳೆ ಸುರಿಯುವ ಮುನ್ನೆಚ್ಚರಿಕೆ ನೀಡಲಾಗಿದೆ.

Tags:    

Similar News