ಹಾಸನ ಸ್ಫೋಟ ದುರಂತ: ಚಿಕಿತ್ಸೆ ಫಲಿಸದೆ ದಂಪತಿ ಸಾವು, ತೀವ್ರಗೊಂಡ ತನಿಖೆ

ಮೃತರ ಮನೆ ಗ್ರಾಮದ ಹೊರವಲಯದಲ್ಲಿದ್ದ ಒಂಟಿ ಮನೆಯಾಗಿದ್ದು, ಸುತ್ತಮುತ್ತ 50 ಮೀಟರ್‌ ವ್ಯಾಪ್ತಿಯಲ್ಲಿ ಬೇರೆ ಮನೆಗಳಿಲ್ಲ. ಇದರಿಂದಾಗಿ ಭಾರೀ ಅನಾಹುತ ತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Update: 2025-10-01 04:59 GMT

 ಮೃತರನ್ನು ಸುದರ್ಶನ್ ಆಚಾರ್ (40) ಮತ್ತು ಅವರ ಪತ್ನಿ ಕಾವ್ಯ (28) ಎಂದು ಗುರುತಿಸಲಾಗಿದೆ.

Click the Play button to listen to article

ಜಿಲ್ಲೆಯ ಆಲೂರು ತಾಲೂಕಿನ ಹಳೇಆಲೂರು ಗ್ರಾಮದಲ್ಲಿ ಸಂಭವಿಸಿದ್ದ ನಿಗೂಢ ಸ್ಫೋಟ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದಂಪತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರನ್ನು ಸುದರ್ಶನ್ ಆಚಾರ್ (40) ಮತ್ತು ಅವರ ಪತ್ನಿ ಕಾವ್ಯ (28) ಎಂದು ಗುರುತಿಸಲಾಗಿದೆ.

ಮನೆಯ ಹೊರಭಾಗದಲ್ಲಿ ಸಂಭವಿಸಿದ ಈ ಸ್ಫೋಟದ ತೀವ್ರತೆಗೆ ಕಾಂಪೌಂಡ್ ಗೋಡೆ ಕುಸಿದುಬಿದ್ದಿದ್ದು, ಮನೆಯ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು. ಸ್ಫೋಟದ ವೇಳೆ ದಂಪತಿ ಹಾಗೂ ಓರ್ವ ಮಗು ಗಂಭೀರವಾಗಿ ಗಾಯಗೊಂಡಿದ್ದರು. ಅದೃಷ್ಟವಶಾತ್, ಮನೆಯೊಳಗೆ ಇದ್ದ ಇಬ್ಬರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಕಲೇಶಪುರ ಡಿವೈಎಸ್‌ಪಿ ಪ್ರಮೋದ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಫೋಟಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಸಿಲಿಂಡರ್ ಸ್ಫೋಟಗೊಂಡಿರಬಹುದೇ ಅಥವಾ ಇದು ಜಿಲೆಟಿನ್, ಡಿಟೋನೇಟರ್‌ನಂತಹ ಸ್ಫೋಟಕ ವಸ್ತುವಿನಿಂದ ಸಂಭವಿಸಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಸ್ಫೋಟದ ತೀವ್ರತೆಯನ್ನು ಗಮನಿಸಿದರೆ, ಇದು ಪ್ರಬಲ ಸ್ಫೋಟಕದಿಂದಲೇ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

ಮೃತರ ಮನೆ ಗ್ರಾಮದ ಹೊರವಲಯದಲ್ಲಿದ್ದ ಒಂಟಿ ಮನೆಯಾಗಿದ್ದು, ಸುತ್ತಮುತ್ತ 50 ಮೀಟರ್‌ ವ್ಯಾಪ್ತಿಯಲ್ಲಿ ಬೇರೆ ಮನೆಗಳಿಲ್ಲ. ಇದರಿಂದಾಗಿ ಭಾರೀ ಅನಾಹುತ ತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags:    

Similar News