ಬೆಂಗಳೂರಿಗೆ ಬಂತು ಮೊದಲ ಚಾಲಕರಹಿತ ಮೆಟ್ರೋ ರೈಲು
ಚೀನಾದಿಂದ ಆರು ಬೋಗಿಗಳನ್ನು ಹೊಂದಿರುವ ಮೊದಲ ಚಾಲಕ ರಹಿತ ಮೆಟ್ರೋ ರೈಲು ಬೆಂಗಳೂರಿಗೆ ಬಂದು ತಲುಪಿದೆ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ತಿಳಿಸಿದೆ.;
ಬೆಂಗಳೂರು: ಇನ್ನು ಮೆಟ್ರೋ ಹಳದಿ ಮಾರ್ಗದಲ್ಲಿ ಚಾಲಕರಹಿತ ರೈಲು ಓಡಲಿದೆ. ಈಗಾಗಲೇ ಆರು ಬೋಗಿಗಳ ಮೊದಲ ಚಾಲಕ ರಹಿತ ಮೆಟ್ರೋ ರೈಲು ಚೀನಾದಿಂದ ಬೆಂಗಳೂರಿಗೆ ಬಂದು ತಲುಪಿದೆ.
ಈ ರೈಲು ಸದ್ಯ ಹಳದಿ ಮಾರ್ಗದಲ್ಲಿ ಪ್ರಾಯೋಗಿಕವಾಗಿ ಓಡಾಡಲಿದ್ದು, ಆರ್‌ವಿ ರಸ್ತೆ, ಬೊಮ್ಮಸಂದ್ರ, ಜಯದೇವ ಆಸ್ಪತ್ರೆ, ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಮಾರ್ಗದಲ್ಲಿ ಸಂಚರಿಸಲಿದೆ. ಆದರೆ, ಪ್ರಾಯೋಗಿಕ ಪರೀಕ್ಷೆಯ ಬಳಿಕವೇ ಸಾರ್ವಜನಿಕ ಬಳಕೆಗೆ ಲಭ್ಯವಾಗಲಿವೆ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್(ಬಿಎಂಆರ್‌ಸಿಎಲ್) ತಿಳಿಸಿದೆ.
ಚೀನಾದ ಸಂಸ್ಥೆಯೊಂದು ಈ ರೈಲು ಮತ್ತು ಅದರ ಕೋಚ್‌ಗಳನ್ನು ನಿರ್ಮಿಸಿದ್ದು, ಬಿಎಂಆರ್‌ಸಿಗಾಗಿ ಒಟ್ಟು 216 ಬೋಗಿಗಳನ್ನು ತಯಾರಿಸಲು ಸಂಸ್ಥೆ ಗುತ್ತಿಗೆ ಪಡೆದಿದೆ ಎಂದು ಬಿಎಂಆರ್ ಸಿಎಲ್ ಮಾಹಿತಿ ನೀಡಿದೆ.
ನಾವು 216 ಕೋಚ್‌ಗಳನ್ನು ಆರ್ಡರ್ ಮಾಡಿದ್ದೇವೆ, ಅದರಲ್ಲಿ 90 ಕೋಚ್‌ಗಳನ್ನು ಹಳದಿ ಮತ್ತು 15 ಕೋಚ್‌ಗಳನ್ನು ಇತರೆ ಮಾರ್ಗದಲ್ಲಿ ಓಡಿಸಲಾಗುವುದು ಎಂದು ಬಿಎಂಆರ್ ಸಿಎಲ್ ಅಧಿಕಾರಿ ಮಾಹಿತಿ ನೀಡಿದ್ದಾರೆ.