ಫೇಮ್ 3ಗೆ 1-2 ತಿಂಗಳಲ್ಲಿ ಅನುಮತಿ: ಕುಮಾರಸ್ವಾಮಿ

Update: 2024-09-04 09:55 GMT

ನವದೆಹಲಿ: ಎಲೆಕ್ಟ್ರಿಕ್ ಮೊಬಿಲಿಟಿ ಅಡಾಪ್ಷನ್ ಯೋಜನೆ, ಫೇಮ್‌ನ ಮೂರನೇ ಹಂತವನ್ನು ಒಂದು ಅಥವಾ ಎರಡು ತಿಂಗಳುಗಳಲ್ಲಿ ಅಂತಿಮಗೊಳಿಸುವ ನಿರೀಕ್ಷೆಯಿದೆ ಎಂದು ಕೇಂದ್ರ ಭಾರೀ ಕೈಗಾರಿಕೆಗಳ ಸಚಿವ ಎಚ್‌.ಡಿ. ಕುಮಾರಸ್ವಾಮಿ ಬುಧವಾರ ಹೇಳಿದ್ದಾರೆ.

ಯೋಜನೆಗೆ ಸ್ವೀಕರಿಸಿದ ಒಳಹರಿವಿನ ಕುರಿತು ಅಂತರ್ ಸಚಿವಾಲಯದ ಗುಂಪು ಕಾರ್ಯನಿರ್ವಹಿಸುತ್ತಿದೆ.‌ ಫಾಸ್ಟರ್‌ ಅಡಾಪ್ಷನ್‌ ಆಂಡ್‌ ಮ್ಯಾನ್ಯುಫ್ಯಾಕ್ಚರಿಂಗ್ ಆಫ್‌ ಹೈಬ್ರಿಡ್‌ ಆಂಡ್‌ ಎಲೆಕ್ಟ್ರಿಕ್ ವೆಹಿಕಲ್ (FAME) ಯೋಜನೆಯ ಮೊದಲ ಎರಡು ಹಂತಗಳಲ್ಲಿ ಉದ್ಭವಿಸಿದ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು. 

ಫೇಮ್‌ 3 ತಾತ್ಕಾಲಿಕ ಎಲೆಕ್ಟ್ರಿಕ್ ಮೊಬಿಲಿಟಿ ಪ್ರಮೋಷನ್ ಸ್ಕೀಮ್ (ಇಎಂಪಿಎಸ್) 2024 ಅನ್ನು‌ ಸ್ಥಳಾಂತರಿಸುತ್ತದೆ. ಇದು ಸೆಪ್ಟೆಂಬರ್‌ನಲ್ಲಿ ಮುಕ್ತಾಯಗೊಳ್ಳಲಿದೆ. 

ಫೇಮ್‌ ಎರಡನೇ ಹಂತವನ್ನು 2019 ರಲ್ಲಿ ಮೂರು ವರ್ಷದಲ್ಲಿ 10,000 ಕೋಟಿ ರೂ.ಗಳ ಆರಂಭಿಕ ವೆಚ್ಚದೊಂದಿಗೆ ಆರಂಭಿಸಲಾಯಿತು. ಆನಂತರ ಅದನ್ನು 1,500 ಕೋಟಿ ರೂ.ಗಳ ಹೆಚ್ಚುವರಿ ವೆಚ್ಚದೊಂದಿಗೆ ಮಾರ್ಚ್ 2024 ರವರೆಗೆ ವಿಸ್ತರಿಸಲಾಯಿತು. 10 ಲಕ್ಷ ಎಲೆಕ್ಟ್ರಿಕ್ ದ್ವಿಚಕ್ರ ವಾಹನ, 5 ಲಕ್ಷ ಎಲೆಕ್ಟ್ರಿಕ್ ತ್ರಿಚಕ್ರ ವಾಹನ, 55,000 ಪ್ರಯಾಣಿಕ ಕಾರು ಮತ್ತು 7,000 ಎಲೆಕ್ಟ್ರಿಕ್ ಬಸ್‌ಗಳನ್ನು ಬೆಂಬಲಿಸುವುದು ಯೋಜನೆಯ ಆರಂಭಿಕ ಗುರಿಯಾಗಿದೆ. 

ʻ ಫೇಮ್ 1, ಫೇಮ್‌ 2 ರಲ್ಲಿನ ಲೋಪಗಳು, ಅದನ್ನು ಸರಿಪಡಿಸುವುದು ಹೇಗೆ ಎಂಬ ಕುರಿತು ಫೇಮ್‌ 3ಗೆ ಹಲವಾರು ಸಲಹೆಗಳು ಬರುತ್ತಿವೆ. ಪಿಎಂಒ ಕೂಡ ಕೆಲವು ಸಲಹೆಗಳನ್ನು ನೀಡಿದೆ. ಅಂತರ್ ಸಚಿವಾಲಯದ ಗುಂಪು ಅದಕ್ಕಾಗಿ ಕೆಲಸ ಮಾಡುತ್ತಿದೆ,ʼ ಎಂದು ಹೇಳಿದರು. 

ಫೇಮ್‌ 3 ಯಾವಾಗ ಆರಂಭಗೊಳ್ಳಲಿದೆ ಎಂಬ ಪ್ರಶ್ನೆಗೆ, ʻ1 ಅಥವಾ 2 ತಿಂಗಳೊಳಗೆ ಆರಂಭಿಸಲಾಗುತ್ತದೆ ಎಂದುಕೊಂಡಿದ್ದೇನೆʼ ಎಂದು ಹೇಳಿದರು. ʻಫೇಮ್‌ 3 ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟಕ್ಕೆ ಒಂದು ಅಥವಾ ಎರಡು ತಿಂಗಳಲ್ಲಿ ಅನುಮೋದನೆಗೆ ಕಳುಹಿಸಲಾಗುತ್ತದೆ. ಈಗಲೂ ಹಲವು ಸಲಹೆಗಳು ಬರುತ್ತಿವೆ. ಉತ್ತಮ, ಧನಾತ್ಮಕ ಮಾರ್ಗವನ್ನು ಆಯ್ದುಕೊಳ್ಳಲಾಗುವುದು,ʼ ಎಂದರು. 

ಆಟೋಮೊಬೈಲ್ ವಿತರಕರಲ್ಲಿ ಮಾರಾಟವಾಗದ ದಾಸ್ತಾನು ಕುರಿತ ಪ್ರಶ್ನೆಗೆ, ಆಟೋಮೊಬೈಲ್ ಉದ್ಯಮದಿಂದ ಹಲವಾರು ಮನವಿಗಳನ್ನು ಸ್ವೀಕರಿಸಲಾಗಿದೆ. ಅವರು ಉದ್ಯಮವನ್ನು ಬಲಪಡಿಸಲು ನೆರವಾಗುವಂತೆ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

Tags:    

Similar News