Eviction Drive | ಮತ್ತೆ ಜೆಸಿಬಿ ಕಾರ್ಯಾಚರಣೆ: ಬೆಂಗಳೂರಿನಲ್ಲಿ 200 ಮನೆ ನೆಲಸಮ

ಪ್ರತಿ ಮನೆಯಲ್ಲಿ ವಯಸ್ಸಾದವರು, ಬಾಣಂತಿಯರು ಸೇರಿದಂತೆ ಅನಾರೋಗ್ಯ ಪೀಡಿತರಿದ್ದಾರೆ. ಈ ರೀತಿ ಮನೆ ನೆಲಸಮ ಮಾಡಿದರೆ ಅವರು ಎಲ್ಲಿಗೆ ಹೋಗಬೇಕು. ಇದಕ್ಕೆಲ್ಲಾ ಅಧಿಕಾರಿಗಳೇ ಉತ್ತರ ನೀಡಬೇಕು ಎಂದು ಜನರು ಕಣ್ಣೀರು ಹಾಕುತ್ತಿದ್ದಾರೆ.

Update: 2024-11-07 11:16 GMT
ಅಕ್ರಮ ಕಟ್ಟಡಗಳನ್ನು ಬಿಡಿಎ ನೆಲಸಮನಗೊಳಿಸಿದೆ.

ಬೆಂಗಳೂರು ನಗರದ ಗೊರಗುಂಟೆಪಾಳ್ಯ ಬಳಿಯ ಆಶ್ರಯ ನಗರ ಬಡಾವಣೆಯಲ್ಲಿ ಅಕ್ರಮ 200 ಮನೆಗಳನ್ನು ಬಿಡಿಎ ನೆಲಸಮ ಮಾಡಿದೆ.

ಈ ಪ್ರದೇಶದಲ್ಲಿ ಕಳೆದ ಮೂವತ್ತು, ನಲವತ್ತು ವರ್ಷಗಳಿಂದ ವಾಸ ಮಾಡುತ್ತಿದ್ದವರಿಗೆ ಜಾಗ ಖಾಲಿ ಮಾಡಿ ಎಂದು ಬಿಡಿಎ ಸೂಚನೆ ನೀಡಿತ್ತು. ಆದರೆ ಜಾಗ ಖಾಲಿ ಮಾಡದ ಹಿನ್ನೆಲೆ ತೆರವು ಕಾರ್ಯಾಚರಣೆ ಮಾಡಲಾಗಿದ್ದು, 200 ಮನೆಗಳನ್ನು ಧರೆಗುರುಳಿಸಲಾಗಿದೆ. ಮನೆಗಳನ್ನು ಬಿಡಿಎ ನೆಲಸಮ ಮಾಡಿದ್ದಕ್ಕೆ ಸಾರ್ಮಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿ ಮನೆಯಲ್ಲಿ ವಯಸ್ಸಾದವರು, ಬಾಣಂತಿಯರು ಸೇರಿದಂತೆ ಅನಾರೋಗ್ಯ ಪೀಡಿತರಿದ್ದಾರೆ. ಈ ರೀತಿ ಮನೆ ನೆಲಸಮ ಮಾಡಿದರೆ ಅವರು ಎಲ್ಲಿಗೆ ಹೋಗಬೇಕು. ಇದಕ್ಕೆಲ್ಲಾ ಅಧಿಕಾರಿಗಳೇ ಉತ್ತರ ನೀಡಬೇಕು ಎಂದು ಜನರು ಕಣ್ಣೀರು ಹಾಕುತ್ತಿದ್ದಾರೆ. ಇದಕ್ಕೆಲ್ಲಾ ಪರಿಹಾರ ಕೊಡಬೇಕು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಇತ್ತೀಚೆಗೆ ನಾಗರಬಾವಿ ಸಮೀಪದ ಚಂದ್ರ ಲೇಔಟ್​ನಲ್ಲಿ ಕೂಡ ಬಿಡಿಎ ಜಾಗದಲ್ಲಿದ್ದ 40ಕ್ಕೂ ಹೆಚ್ಚು ಅಂಗಡಿ-ಮುಂಗಟ್ಟುಗಳನ್ನು ಬಿಡಿಎ ನೆಲಸಮ ಮಾಡಿತ್ತು.

9 ಎಕರೆ 13 ಗುಂಟೆ ಬಿಡಿಎ ಜಾಗವನ್ನು ಖಾಸಗಿ ವ್ಯಕ್ತಿ ಕಬ್ಜ ಮಾಡಿದ್ದು, ಕೋರ್ಟ್ ಅಂಗಳದಲ್ಲಿ ಹಲವು ವರ್ಷಗಳಿಂದ ಜಾಗ ವಿವಾದದಲ್ಲಿತ್ತು. ವಿವಾದಿತ ಭೂಮಿ ಬಿಡಿಎಗೆ ಸೇರಿದೆ ಎಂದು ಆದೇಶ ಬಂದಿದ್ದೆ ತಡ ಪೊಲೀಸ್‌ ಬಂದೋಬಸ್ತ್‌ನೊಂದಿಗೆ ಬಿಡಿಎ ಅಧಿಕಾರಿಗಳು ಸರ್ವೇ ನಂಬರ್ 78ರಲ್ಲಿದ್ದ 9 ಎಕರೆ ಜಾಗದ 500 ಕೋಟಿ ರೂ. ಮೌಲ್ಯದ ಜಾಗವನ್ನು ತೆರವುಗೊಳಿಸಿ ವಶಕ್ಕೆ ಪಡೆದುಕೊಂಡಿದ್ದರು.

Tags:    

Similar News